ಕರ್ನಾಟಕ

karnataka

ETV Bharat / state

ನಾಯಕತ್ವ ಬದಲಾವಣೆ ವಿಚಾರ: ಪರ-ವಿರೋಧ ಹೇಳಿಕೆ ನಿಯಂತ್ರಣಕ್ಕೆ ಸಮಿತಿ ರಚನೆ - ಸಿಎಂ ಬದಲಾವಣೆ ವಿಚಾರ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಪರ - ವಿರೋಧ ಚರ್ಚೆ ಶುರುವಾದ್ರೆ ಅದನ್ನು ತಡೆಯುವ ಸಲುವಾಗಿ ಕಮಿಟಿಯೊಂದನ್ನು ರಚಿಸಲಾಗಿದೆ ಎಂದು ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ.

ashok
ashok

By

Published : Jun 7, 2021, 3:25 PM IST

Updated : Jun 7, 2021, 9:56 PM IST

ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಲಾಗಿದ್ದು, ನಾಯಕತ್ವ ಬದಲಾವಣೆ ಕುರಿತು ಪರ - ವಿರೋಧ ಚರ್ಚೆ ಶುರುವಾದ್ರೆ ಅದನ್ನು ತಡೆಯೋದು ಅದರ ಉದ್ದೇಶವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಕಾಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ಸಭೆ ಮಾಡಿ, ಕಮಿಟಿ ಮಾಡಿದ್ದೇವೆ. ಕಮಿಟಿಯಲ್ಲಿ ಜನರಲ್ ಸೆಕ್ರೆಟರಿ, ಸಿಎಂ, ಮೂರು ಜನ ಸಚಿವರು ಇದ್ದೇವೆ. ಇನ್ನೊಬ್ಬರು ಉತ್ತರ ಕರ್ನಾಟಕ ಸಚಿವರು ಕಮಿಟಿಗೆ ಸೇರುತ್ತಾರೆ. ಎಲ್ಲವನ್ನ ಕಮಿಟಿ ನೋಡಿಕೊಳ್ಳುತ್ತದೆ. ಇಲ್ಲಿ ಯಾರು ಹೇಳಿಕೆಗಳನ್ನು ವಿರೋಧವಾಗಿಯೂ ನೀಡುವಂತಿಲ್ಲ, ಜೊತೆಗೆ ಸಿಎಂ ಪರವಾಗಿಯೂ ಹೇಳಿಕೆಯನ್ನ ನೀಡುವಂತಿಲ್ಲ ಎಂದರು.

ನಾಯಕತ್ವ ಬದಲಾವಣೆ ವಿಚಾರ: ಪರ-ವಿರೋಧ ಹೇಳಿಕೆ ನಿಯಂತ್ರಣಕ್ಕೆ ಸಮಿತಿ ರಚನೆ

ಸಿಎಂ ಬದಲಾವಣೆ ವಿಚಾರ ಗಾಳಿ ಸುದ್ದಿ. ಈ ಗಾಳಿಸುದ್ದಿಗೆ ನಿನ್ನೆಯೇ ಅಂತ್ಯ ಹಾಡಿದ್ದೇವೆ. ಮುಂದೆ ಯಾರು ಸಹ ಪರವಾಗಿ ಆಗಲಿ-ವಿರೋಧವಾಗಿ ಆಗಲಿ‌ ಮಾತಾಡುವಂತಿಲ್ಲ ಎಂದು ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ. ಒಂದು ವೇಳೆ ಮಾತಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

Last Updated : Jun 7, 2021, 9:56 PM IST

ABOUT THE AUTHOR

...view details