ಕರ್ನಾಟಕ

karnataka

ETV Bharat / state

ಕಟೀಲ್ ಆಡಿಯೋ ಸುಳ್ಳು, ಅದು ಕಾಂಗ್ರೆಸ್​​​ನವರ ಕುತಂತ್ರ: ಸಚಿವ ಆರ್.ಅಶೋಕ್ - ministers reaction on katil viral audio

ನಳಿನ್​ ಕುಮಾರ್​ ಕಟೀಲ್​ ಆಡಿಯೋ ಸುಳ್ಳು. ಆ ಆಡಿಯೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ, ಇದು ಕಾಂಗ್ರೆಸ್​​ನವರು ಮಾಡಿರುವ ಕುತಂತ್ರ ಎಂದು ಸಚಿವರಾದ ಆರ್.​ ಅಶೋಕ್​ ಮತ್ತು ವಿ. ಸೋಮಣ್ಣ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

minister v somanna reaction
ವಿ ಸೋಮಣ್ಣ

By

Published : Jul 20, 2021, 3:25 PM IST

ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಅವರದ್ದು ಎನ್ನಲಾದ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಈ ಕುರಿತಂತೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ಕಟೀಲ್ ಅವರ ಆಡಿಯೋ ಸುಳ್ಳು, ಇದು ಕಾಂಗ್ರೆಸ್​ನವರು ಮಾಡಿರುವ ಕುತಂತ್ರ ಎಂದು ಸಚಿವ ಆರ್.ಅಶೋಕ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಾಗಿ ನಳಿನ್​ ಕುಮಾರ್​ ಕಟೀಲ್​ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯಲು ನಡೆದಿರುವ ಕುತಂತ್ರ ಇದು ಎಂದರು.

ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

ಕಾಂಗ್ರೆಸ್ ನಾಯಕರು ಬಿಎಸ್​ವೈಗೆ ಬೆಂಬಲ ನೀಡಲು ಮುಂದೆ ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್​, ಕಾಂಗ್ರೆಸ್​ನವರು ಈ ಕುತಂತ್ರ ನಿಲ್ಲಿಸಬೇಕು. ನಮ್ಮ ಹೈ ಕಮಾಂಡ್ ನಾಯಕತ್ವ ಬದಲಾವಣೆ ಮಾಡುವ ಬಗ್ಗೆ ಏನೂ ಹೇಳಿಲ್ಲ. ಹಾಗೇನಾದರೂ ಇದ್ರೆ ಅದು ನಮ್ಮ ಆಂತರಿಕ ವಿಚಾರ. ಕಾಂಗ್ರೆಸ್ ಸಿಂಪತಿ ನಮಗೆ ಬೇಕಿಲ್ಲ. ವಲಸೆ ಸಚಿವರು ಸಭೆ ಸೇರಿದ್ದು ಸುಳ್ಳು ಎಂದು ತಿಳಿಸಿದ್ರು.

ವೀರೇಂದ್ರ ಪಾಟೀಲರಿಗೆ ಅನಾರೋಗ್ಯ ಆಗಿದ್ದಾಗ ಶಾಮನೂರು ಎಲ್ಲಿದ್ರು?: ಸಚಿವ ವಿ.ಸೋಮಣ್ಣ

ಹಿಂದೆ ವೀರೇಂದ್ರ ಪಾಟೀಲರಿಗೆ ಅನಾರೋಗ್ಯ ಆಗಿದ್ದಾಗ ಹಾಲಿ ಕಾಂಗ್ರೆಸ್​ ಶಾಸಕ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಲ್ಲಿದ್ರು ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕಪ್ಪಗೆ ಯಾರು ಹೇಳಿದ್ದು?. ಸಿಎಂ ಬದಲಾವಣೆ ಸದ್ಯ ಯಾರೂ ಹೇಳಿಲ್ಲ. ಅದರ ಬಗ್ಗೆ ಚರ್ಚೆ ಕೂಡ ಬೇಕಿಲ್ಲ ಎಂದ್ರು.

ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದವಿ.ಸೋಮಣ್ಣ, ಆಡಿಯೋ ವಿಚಾರದಲ್ಲಿ ಗಿಮಿಕ್ ಮಾಡಲಾಗಿದೆ. ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವವಾಗಿಲ್ಲ. ಆಡಿಯೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಅವರ ಕುತಂತ್ರ ನಡೆಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details