ಬೆಂಗಳೂರು :ಬೆಡ್ಗಳಿಗೆ ಸಂಬಂಧಿಸಿದಂತೆ ರಿಯಾಲಿಟಿ ಚೆಕ್ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಸರ್ಕಾರದ ಒಬ್ಬ ಡಾಕ್ಟರ್ ಜೊತೆಗೆ ಪಿಪಿಇ ಕಿಟ್ ಹಾಕಿಕೊಂಡು ರಿಯಾಲಿಟಿ ಚೆಕ್ ಮಾಡಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಿಮ್ಸ್ನಲ್ಲಿ 30 ಆಕ್ಸಿಜನ್ ಬೆಡ್ ಕೊಡಲು ಮುಂದೆ ಬಂದಿದ್ದಾರೆ. ಬೆಂಗಳೂರಿನ 17 ಕಡೆ ಕೋವಿಡ್ ಕೇರ್ ಸೆಂಟರ್ ಇವೆ. ಅಲ್ಲಿ ಬಂದು ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು. 600 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ಮುಂದಾಗಿದ್ದೇವೆ. ಅಲ್ಲಿ ತಕ್ಷಣಕ್ಕೆ ನಿಮಗೆ ಆಕ್ಸಿಜನ್ ಕೊರತೆ ನೀಗುತ್ತದೆ ಎಂದರು.
ಸಿಎಂ ಮನೆಯಲ್ಲಿ ಸಭೆ:ಹೊಸಕೆರೆಹಳ್ಳಿಯಲ್ಲಿ ಒಂದು ಕಟ್ಟಡ ನಿರ್ಮಾಣ ಆಗುತ್ತಿದೆ. ಅದನ್ನು ಮಕ್ಕಳ ಆಸ್ಪತ್ರೆ ಮಾಡುತ್ತೇವೆ. ಅದನ್ನು ಸಂಪರ್ಕಿಸಲು ಬಿಬಿಎಂಪಿ ಜಂಟಿ ಆಯುಕ್ತರಿಗೆ ಹೇಳಿದ್ದೇವೆ. ಪ್ರಾಯೋಗಿಕವಾಗಿ ಅಲ್ಲಿ ಯಾವ ವ್ಯವಸ್ಥೆ ಬೇಕು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದರು.