ಕರ್ನಾಟಕ

karnataka

ETV Bharat / state

ಪ್ರತಿ ಪಕ್ಷದವರಿಗೆ ಟೀಕಿಸೋದೆ ಕೆಲಸ : ಸಚಿವ ಆರ್.ಅಶೋಕ್ ತಿರುಗೇಟು - ವಿರೋಧ ಪಕ್ಷದವರಿಗೆ ಟೀಕಿಸೋದೆ ಕೆಲಸವಾಗಿದೆ

ದೇಶದಲ್ಲಿ ಕೊರೊನಾವನ್ನು ಸಮರ್ಥವಾಗಿ ನಿಭಾಯಿಸಿರುವಂತಹ ರಾಜ್ಯಗಳಲ್ಲಿ ಕರ್ನಾಟಕವು ಸೇರಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್​ನವರು ಟೀಕೆ ಮಾಡುವುದನ್ನು ಬಿಟ್ಟು ಅವರ ಸರ್ಕಾರ ಇರುವಂತಹ ರಾಜ್ಯಗಳಲ್ಲಿ ಯಾವ ರೀತಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ನೋಡಿಕೊಂಡು ಬಳಿಕ ಉಪದೇಶ ಮಾಡಲಿ ಎಂದು ಸಚಿವ ಆರ್​.ಆಶೋಕ್​ ತಿರುಗೇಟು ನೀಡಿದ್ದಾರೆ.

Minister R Ashok Outrage Against Congress
ವಿರೋಧ ಪಕ್ಷದವರಿಗೆ ಟೀಕಿಸೋದೆ ಕೆಲಸವಾಗಿದೆ

By

Published : May 14, 2020, 12:19 PM IST

ಬೆಂಗಳೂರು: ಕೊರೊನಾ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡು ಕೆಲಸ ಮಾಡುತ್ತಿದ್ದರೂ ವಿರೋಧ ಪಕ್ಷದವರಿಗೆ ಟೀಕಿಸೋದೆ ಕೆಲಸವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್​ ವಿರುದ್ಧ ಸಚಿವ ಆರ್​.ಅಶೋಕ್​ ಕಿಡಿ

ನಗರದ ಆರ್​​​ಬಿಐ ಬಡಾವಣೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಹಮ್ಮಿಕೊಂಡಿದ್ದ ಬ್ರಾಹ್ಮಣರಿಗೆ ತರಕಾರಿ ಹಾಗೂ ದಿನಸಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್​ನಿಂದಾಗಿ ಬಡವರು, ಕಾರ್ಮಿಕರು ಹಾಗೂ ಇತರ ವರ್ಗದವರಿಗೆ ಸಹಕಾರಿಯಾಗಿದೆ. ದೇಶದಲ್ಲಿ ಕೊರೊನಾವನ್ನು ಸಮರ್ಥವಾಗಿ ನಿಭಾಯಿಸಿರುವಂತಹ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್​ನವರು ಟೀಕೆ ಮಾಡುವುದನ್ನು ಬಿಟ್ಟು ಅವರ ಸರ್ಕಾರ ಇರುವಂತಹ ರಾಜ್ಯಗಳಲ್ಲಿ ಯಾವ ರೀತಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ನೋಡಿಕೊಂಡು ಬಳಿಕ ಉಪದೇಶ ಮಾಡಲಿ. ಆಗ ಕೇಳುತ್ತೇವೆ ಎಂದರು.

ಎಲ್ಲ ಕಡೆ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬ ಮಾತಿದೆ. ಆದರೆ, ಕಾಂಗ್ರೆಸ್​ನವರು ವಿರೋಧ ಮಾಡಲೇ ಬೇಕು ಅಂತ ಈ ರೀತಿ ಮಾಡುವುದು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details