ಕರ್ನಾಟಕ

karnataka

ETV Bharat / state

ರಾಜಕಾರಣಿ, ಅಧಿಕಾರಿಗಳು, ಕುಟುಂಬದವರ ಬಿಟ್ ಕಾಯಿನ್ ಖಾತೆ ಬಗ್ಗೆ ಸಿಒಡಿ ತನಿಖೆ ಆಗಲಿ : ಸಚಿವ ಆರ್ ಅಶೋಕ್ - ಬಿಟ್ ಕಾಯಿನ್

ಬಹಳಷ್ಟು ರಾಜಕಾರಣಿಗಳು, ಅಧಿಕಾರಿಗಳ ಹಾಗೂ ಅವರ ಕುಟುಂಬದವರ ಹೆಸರಲ್ಲಿ ಬಿಟ್ ಕಾಯಿನ್ ಖಾತೆ ಇದೆ ಎಂದು ಹೇಳಲಾಗ್ತಿದೆ. ಹೀಗಾಗಿ ಬಿಟ್ ಕಾಯಿನ್ ಅಕೌಂಟ್ ಬಗ್ಗೆ ಸಿಓಡಿ ತನಿಖೆ ನಡೆಸುವಂತೆ ಕಂದಾಯ ಸಚಿವ ಆರ್.ಅಶೋಕ್ ಒತ್ತಾಯಿಸಿದ್ದಾರೆ.

minister R Ashok orders to transfer bitcoin case to COD
ಬಿಟ್ ಕಾಯಿನ್ ಖಾತೆ ಬಗ್ಗೆ ಸಿಓಡಿ ತನಿಖೆ ಆಗ್ರಹಿಸಿದ ಸಚಿವ ಆರ್​ ಅಶೋಕ್​

By

Published : Nov 16, 2021, 4:57 PM IST

ಬೆಂಗಳೂರು :ರಾಜಕಾರಣಿಗಳು, ಅಧಿಕಾರಿಗಳ ಹಾಗೂ ಅವರ ಕುಟುಂಬದವರ ಬಿಟ್ ಕಾಯಿನ್ ಅಕೌಂಟ್(bitcoin accounts) ಬಗ್ಗೆ ಸಿಒಡಿ(The Corps of Detectives) ತನಿಖೆ ನಡೆಸುವಂತೆ ಕಂದಾಯ ಸಚಿವ ಆರ್.ಅಶೋಕ್ ಆಗ್ರಹಿಸಿದರು.

ಬಿಟ್ ಕಾಯಿನ್ ಖಾತೆ ಬಗ್ಗೆ ಸಿಒಡಿ ತನಿಖೆಗೆ ಆಗ್ರಹಿಸಿದ ಸಚಿವ ಆರ್​ ಅಶೋಕ್​

ವಿಧಾನಸೌಧದಲ್ಲಿ(Vidhanasoudha) ಮಾತನಾಡಿದ ಅವರು, ಬಹಳಷ್ಟು ರಾಜಕಾರಣಿಗಳು, ಅಧಿಕಾರಿಗಳ ಹಾಗೂ ಅವರ ಕುಟುಂಬದವರ ಹೆಸರಲ್ಲಿ ಬಿಟ್ ಕಾಯಿನ್(Bitcoin) ಖಾತೆ ಇದೆ ಎಂದು ಹೇಳಲಾಗುತ್ತಿದೆ. ಅದರ ಮುಖಾಂತರ ಕೋಟ್ಯಂತರ ಹವಾಲ ಹಣ ಪಡೆದಿದ್ದಾರೆ ಅಂತಾ ಆರೋಪ ಮಾಡಲಾಗುತ್ತಿದೆ.

ಐಎಎಸ್, ಐಪಿಎಸ್ ಅಧಿಕಾರಿಗಳ ಕುಟುಂಬದವರ ಅಕೌಂಟ್ ಇದೆ ಅಂತಾ ಹೇಳಿದ್ದಾರೆ. ಹಾಗಾಗಿ, ನಾನು ಸಿಎಂ ಬೊಮ್ಮಾಯಿ ಅವರನ್ನು ಮನವಿ ಮಾಡ್ತಿನಿ, ಆ ಖಾತೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ರು.

ಅದರ ಮುಖಾಂತರ ರಾಜ್ಯದ ಜನತೆಗೆ ಗೊತ್ತಾಗಲಿ. ಅವರ ಅಕೌಂಟ್ ಮೂಲಕ ದುಡ್ಡು ಎಷ್ಟು ಹೋಗಿದೆ. ಯಾರು ಯಾರ ಅಕೌಂಟಿಗೆ ಯಾವ ಹಣ ಹಾಕಿದ್ದಾರೆ. ಹವಾಲ, ಬ್ಯಾಂಕ್ ಮೂಲಕ ಹಾಕಿದ್ದಾರೆ. ವೈಟಾ, ಬ್ಲಾಕಾ ಅನ್ನೋದು ಗೊತ್ತಾಗಲಿದೆ. ಪ್ರತಿ ದಿನ ಗಾಳಿಯಲ್ಲಿ ಗುಂಡು ಹೊಡೆಯೋದು ನಿಲ್ಲಲಿದೆ. ರಾಜ್ಯದ ಪ್ರತಿಯೊಬ್ಬರಿಗೂ ಈ ಬಗ್ಗೆ ಸ್ಪಷ್ಟವಾಗಲಿ ಎಂದು ತಿಳಿಸಿದರು.

ಶ್ರೀಕಿಗೆ ಕೊಲೆ ಬೆದರಿಕೆ ಹೇಳಿಕೆ ನೀಡಿರೋ ಕಾಂಗ್ರೆಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶ್ರೀಕಿಯನ್ನ 2016-18ರವರೆಗೂ ಯಾರು ರಕ್ಷಣೆ ಮಾಡಿದ್ದಾರೆ?. ಕೇಸ್‌ನಲ್ಲಿದ್ರೂ ಕೂಡ ಅರೆಸ್ಟ್ ಮಾಡದೆ, ಬೇಲ್ ತೆಗೆದುಕೊಳ್ಳುವವರೆಗೂ ಬಿಡಲಾಗಿದೆ.

ಕೊನೆಗೂ ತನಿಖೆಗೆ ಕರೆಯದೆ, ಕಾಲ ಕಾಲಕ್ಕೆ ಬಿರ್ಯಾನಿ ಕೊಟ್ಟು ಸೇಫ್ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಶ್ರೀಕಿಯನ್ನು ಕಾಪಾಡಿದ್ದಾರೆ ಎಂದು ಆರೋಪಿಸಿದರು.

ಬಿಟ್ ಕಾಯಿನ್ ವಿಚಾರ ದೇಶ, ರಾಜ್ಯದಲ್ಲಿ ಸುದ್ದಿಯಾಗಿದೆ. ಬೊಮ್ಮಾಯಿ ಅವರ ಆಡಳಿತ ಸಹಿಸಲಾಗದೆ, ಅವರನ್ನ ತುಳಿಯೋ ಕೆಲಸ ಮಾಡಲಾಗ್ತಿದೆ. ಒಳ್ಳೆಯ ಕೆಲಸ ಮಾಡಲು ಶುರು ಮಾಡಿದ್ದಕ್ಕೆ, ರಾಜಕೀಯವಾಗಿ ತುಳಿಯಲು ಮುಂದಾಗಿದ್ದಾರೆ ಎಂದರು.

ABOUT THE AUTHOR

...view details