ಕರ್ನಾಟಕ

karnataka

ETV Bharat / state

ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಸಚಿವ ಆರ್.ಅಶೋಕ್ - ಸಿಎಂ ಬದಲಾವಣೆ

ಬೊಮ್ಮಾಯಿ‌ ಈಗಲೂ ಸಿಎಂ, ಮುಂದೇನೂ ಸಿಎಂ. ಚುನಾವಣೆ ಬಳಿಕವೂ ಅವರೇ ಸಿಎಂ ಆಗಿರಲಿದ್ದಾರೆ ಎಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

ಸಚಿವ ಆರ್ ಅಶೋಕ್
ಸಚಿವ ಆರ್ ಅಶೋಕ್

By

Published : Aug 9, 2022, 9:25 PM IST

ಬೆಂಗಳೂರು:ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಯಾರಾದರು ಆ ರೀತಿಯ ಪ್ರಯತ್ನಪಟ್ಟರೆ ಅವರನ್ನು ಹುಚ್ಚು ಆಸ್ಪತ್ರೆಗೆ ಸೇರಿಸಬೇಕು ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಆರ್ ಅಶೋಕ್ ಮಾತನಾಡಿರುವುದು

ಮೂರನೇ ಸಿಎಂ ಆಯ್ಕೆ ಬಗ್ಗೆ ಬಿಜೆಪಿ ಕಸರತ್ತು ನಡೆಸುತ್ತಿದೆ ಎಂಬ ಕಾಂಗ್ರೆಸ್ ಟ್ವೀಟ್ ಬಗ್ಗೆ ತಿರುಗೇಟು ನೀಡಿರುವ ಸಚಿವರು, ಇದು ಹಾಸ್ಯಾಸ್ಪದ ಟ್ವೀಟ್. ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ನಾಯಕತ್ವ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ದೊಡ್ಡ ಒಳಜಗಳ ನಡೆಯುತ್ತಿದೆ ಎಂದರು.

ಮೊನ್ನೆ ಕೇಂದ್ರ ಗೃಹ ಸಚಿವರು ಬೆಂಗಳೂರಿಗೆ ಭೇಟಿ ಕೊಟ್ಟಾಗ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಈಗಾಗಲೇ ಸೋಲಿನ ಭಯದಲ್ಲಿದೆ. ಮೋದಿ, ಅಮಿತ್ ಶಾ ಇರುವವರೆಗೂ ಈ ದೇಶ, ರಾಜ್ಯದಲ್ಲಿ ಕಾಂಗ್ರೆಸ್ ‌ಮೂಲೆ ಗುಂಪು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.

ಇದನ್ನೂ ಓದಿ:ಅನರ್ಹರನ್ನು ಪಟ್ಟಿಗೆ ಸೇರಿಸಿ ಮೀಸಲಾತಿ ದೋಚುವ ಕೆಲಸ ನಡೆಯುತ್ತಿದೆ: ಹೆಚ್. ವಿಶ್ವನಾಥ

ABOUT THE AUTHOR

...view details