ಕರ್ನಾಟಕ

karnataka

ETV Bharat / state

ಮಳೆ ಅನಾಹುತ : 50 ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ - relief fund gave to victims

ಮಳೆಯಿಂದಾಗಿ ನಿನ್ನೆ ಸಿಲಿಕಾನ್ ಸಿಟಿಯ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ ಹಾಗೂ ಕೆಂಗೇರಿ ಸೇರಿದಂತೆ ಹಲವು ಭಾಗಗಳಲ್ಲಿ ಹಾನಿಯಾಗಿತ್ತು. ಇಂದು ಗೃಹ ಸಚಿವ ಆರ್.ಅಶೋಕ್ ಅವರು ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ.

Bangalore
Bangalore

By

Published : Oct 24, 2020, 8:07 PM IST

ಬೆಂಗಳೂರು:ಮಳೆ ಹಾನಿಗೊಳಗಾದ ಪ್ರದೇಶಕ್ಕೆ ಗೃಹ ಸಚಿವ ಆರ್ ಅಶೋಕ್ ಭೇಟಿ ನೀಡಿ, ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಿದರು.

ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಭಾಗಗಳು ಜಲವೃತ್ತಗೊಂಡಿದ್ದವು. ಅದರಲ್ಲೂ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ ಹಾಗೂ ಕೆಂಗೇರಿ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಹಾನಿಯಾಗಿದ್ದವು.

ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ 25 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದರು. ಈ ನಿಟ್ಟಿನಲ್ಲಿ ಇಂದು ಸಂಜೆ ಸಚಿವ ಆರ್ .ಅಶೋಕ್ ಹೊಸಕೆರೆಹಳ್ಳಿಯ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಇಂದು 50 ಸಂತ್ರಸ್ತರಿಗೆ ಪರಿಹಾರದ ಚೆಕ್‌ ವಿತರಣೆ ಮಾಡಿದರು.

ಇನ್ನು 250ಕ್ಕೂ ಹೆಚ್ಚು ಜನರಿಗೆ ಚೆಕ್‌ವಿತರಣೆ ಮಾಡಬೇಕಿದ್ದು, ನಾಳೆ ಅದರ ಕಾರ್ಯ ಮುಂದುವರೆಯಲಿದೆ.

ABOUT THE AUTHOR

...view details