ಕರ್ನಾಟಕ

karnataka

ETV Bharat / state

ಪಠ್ಯ ಪುಸ್ತಕ ಪರಿಷ್ಕರಣೆ ಇಲ್ಲ, ಬರಗೂರು ನೀಡಿದ ಪಠ್ಯವನ್ನೇ ಮುಂದುವರೆಸುತ್ತೇವೆ : ಸಚಿವ ನಾಗೇಶ್​ - ಪಿಯು ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ

ದ್ವಿತೀಯ ಪಿಯುಸಿ ಅಧ್ಯಾಯ 4.2 ಪರಿಷ್ಕರಣೆಯಲ್ಲಿ ಹೊಸ ಧರ್ಮಗಳ ಉದಯದ ಬಗ್ಗೆ ಅಂಶಗಳನ್ನು ಸೇರಿಸಲಾಗಿತ್ತು. ಪರಿಷ್ಕರಣೆ ಕಾರ್ಯ ರೋಹಿತ್​​ಗೆ ನೀಡಲಾಗಿತ್ತು. ಆದರೆ, ರೋಹಿತ್ ಸಮಿತಿಯನ್ನು ಈಗಾಗಲೇ ವಿಸರ್ಜಿಸಲಾಗಿದೆ. ಹಾಗಾಗಿ ಪಿಯು ಪರಿಷ್ಕರಣಾ ಸಮಿತಿಯನ್ನೂ ವಿಸರ್ಜಿಸಲಾಗಿದ್ದು, ಅದರ ವರದಿ ಪಡೆಯುತ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಪಿಯು ಪಠ್ಯ ಪುಸ್ತಕ ಪರಿಷ್ಕರಣೆ ಇಲ್ಲ, ಬರಗೂರು ನೀಡಿದ ಪಠ್ಯವನ್ನೇ ಮುಂದುವರೆಸಲಿದ್ದೇವೆ : ಶಿಕ್ಷಣ ಸಚಿವ
ಪಿಯು ಪಠ್ಯ ಪುಸ್ತಕ ಪರಿಷ್ಕರಣೆ ಇಲ್ಲ, ಬರಗೂರು ನೀಡಿದ ಪಠ್ಯವನ್ನೇ ಮುಂದುವರೆಸಲಿದ್ದೇವೆ : ಶಿಕ್ಷಣ ಸಚಿವ

By

Published : Jun 7, 2022, 5:03 PM IST

Updated : Jun 7, 2022, 5:46 PM IST

ಬೆಂಗಳೂರು: ರೋಹಿತ್​ ಚಕ್ರತೀರ್ಥ ಅವರ‌ ಸಮಿತಿಯನ್ನೇ ಪಿಯು ಪಠ್ಯಪರಿಷ್ಕರಣೆಗೆ‌ ನೇಮಿಸಿದ್ವಿ. ಆದ್ರೆ,‌ ಈಗ‌ ಸಮಿತಿಯನ್ನೇ‌ ವಿಸರ್ಜಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಈ ಮೂಲಕ ಪಿಯು ಪಠ್ಯ ಪರಿಷ್ಕರಣೆಯಿಂದ ಸರ್ಕಾರ ಹಿಂದೆ ಸರಿದಿದೆ.

ವಿಧಾನಸೌಧಲ್ಲಿಂದು ‌ಮಾತನಾಡಿದ ಅವರು, ದ್ವಿತೀಯ ಪಿಯುಸಿ ಅಧ್ಯಾಯ 4.2 ಪರಿಷ್ಕರಣೆಯಲ್ಲಿ ಹೊಸ ಧರ್ಮಗಳ ಉದಯದ ಬಗ್ಗೆ ಅಂಶಗಳನ್ನು ಸೇರಿಸಲಾಗಿತ್ತು. ಪರಿಷ್ಕರಣೆ ಕಾರ್ಯವನ್ನು ರೋಹಿತ್​​ಗೆ ನೀಡಲಾಗಿತ್ತು. ಆದರೆ, ರೋಹಿತ್ ಸಮಿತಿಯನ್ನು ಈಗಾಗಲೇ ವಿಸರ್ಜಿಸಲಾಗಿದೆ. ಹಾಗಾಗಿ ಪಿಯು ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಅದರ ವರದಿ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದೇ‌ ಒಂದು ಪಠ್ಯವನ್ನು ಮಾತ್ರ ಪರಿಷ್ಕರಿಸೋಕೆ ಅಂತಾ‌ ಸಮಿತಿ‌ಗೆ ವಹಿಸಲಾಗಿತ್ತು. ಪಿಯು‌ ಪಠ್ಯಪುಸ್ತಕ‌ ಪರಿಷ್ಕರಣೆಗಾಗಿ ಮತ್ತೊಂದು ಸಮಿತಿ‌‌ ನೇಮಿಸಿಲ್ಲ. ಪರಿಷ್ಕರಣೆ ವಿಚಾರ‌ ಎಲ್ಲಿಂದ ಬರಲಿದೆ?. ದ್ವಿತೀಯ‌ ಪಿಯು ಪಠ್ಯಪುಸ್ತಕ ಪರಿಷ್ಕರಣೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಇಲ್ಲ, ಬರಗೂರು ನೀಡಿದ ಪಠ್ಯವನ್ನೇ ಮುಂದುವರೆಸುತ್ತೇವೆ : ಸಚಿವ ನಾಗೇಶ್​

ಬಸವಣ್ಣ ಪಠ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಬರಗೂರು ರಾಮಚಂದ್ರಪ್ಪ ನೀಡಿದ ಪಠ್ಯವನ್ನೇ ಮುಂದುವರೆಸಲಿದ್ದೇವೆ. ಅದರ ಬಗ್ಗೆ ಯಾರಿಗೂ ಆಕ್ಷೇಪ ಇಲ್ಲ. ಹಾಗಾಗಿ ಬರಗೂರು ಪಠ್ಯಪುಸ್ತಕ ಸಮಿತಿ ನೀಡಿದ ಬಸವಣ್ಣ ಪಠ್ಯ ಮುಂದುವರೆಯಲಿದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಪಠ್ಯಗಳಲ್ಲಿರೋ ಲೋಪಗಳನ್ನೂ ಸರಿಪಡಿಸುತ್ತೇವೆ ಎಂದು ಹೇಳಿದರು. ತೀವ್ರ ವಿವಾದಗಳ‌ ಹಿನ್ನೆಲೆ‌ ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಸರ್ಕಾರ ಹಿಂದೆ ಸರಿದಿದೆ.

ಇದನ್ನೂ ಓದಿ:ಪಠ್ಯದಿಂದ 'ಸಂವಿಧಾನ ಶಿಲ್ಪಿ' ಪದ ತೆಗೆದಿದ್ದಕ್ಕೆ ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ

Last Updated : Jun 7, 2022, 5:46 PM IST

For All Latest Updates

TAGGED:

ABOUT THE AUTHOR

...view details