ಕರ್ನಾಟಕ

karnataka

ETV Bharat / state

ಭುಗಿಲೆದ್ದ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ-ಕಡಿತ ವಿಚಾರ.. ಎಲ್ಲದಕ್ಕೂ ಖುದ್ದು ವಿವರಣೆ ನೀಡಿದ್ರು ಶಿಕ್ಷಣ ಸಚಿವ

ಸಿದ್ದರಾಮಯ್ಯ ಸರ್ಕಾರ ಇರುವುವಾಗಲೇ ಇತಿಹಾಸ ಪುಸ್ತಕದಲ್ಲಿ ಹೆಚ್ಚಿನ ಹೊರೆ ಆಗಿತ್ತು. ಒಂದು ವರ್ಷದಲ್ಲಿ ಪಾಠ ಕವರ್ ಮಾಡಲು ಆಗ್ತಿಲ್ಲ ಅಂತ ಶಿಕ್ಷಕರು ಹೇಳ್ತಿದ್ದರು. ಆದರೆ ಈಗ ಟೆಕ್ಸ್ಟ್ ಬುಕ್ ಬಂದಿಲ್ಲ, ಹಾಗೆ ಹೀಗೆ ಎಂದು ಕಮೆಂಟ್ ಮಾಡ್ತಾರೆ ಎಂದು ಕಾಂಗ್ರೆಸ್​ ವಿರುದ್ಧ ಸಚಿವ ನಾಗೇಶ್​ ಕಿಡಿಕಾರಿದರು.

ಭುಗಿಲೆದ್ದ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ ಕಡಿತ ವಿಚಾರ
ಭುಗಿಲೆದ್ದ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ ಕಡಿತ ವಿಚಾರ

By

Published : May 23, 2022, 7:29 PM IST

Updated : May 23, 2022, 7:50 PM IST

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ-ಕಡಿತ ವಿಚಾರ ಭುಗಿಲೆದ್ದಿದೆ. ದಿನಕ್ಕೊಂದು ಸ್ವರೂಪ ಪಡೆದುಕೊಳ್ತಿದ್ದ ಹಿನ್ನೆಲೆ ಇಂದು ಖುದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ.‌ ನಾಗೇಶ್ ಅವರೇ ಮಾಧ್ಯಮಗೋಷ್ಟಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.‌

ನಗರದ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಮಾತನಾಡಿದ ಸಚಿವರು, ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದನ್ನ ಸಹಿಸಿಕೊಳ್ಳಲು ಕೆಲವರಿಗೆ ಆಗ್ತಿಲ್ಲ. ಅನೇಕರು ಶಾಲೆ ಪ್ರಾರಂಭ ಆಗಲ್ಲ ಅಂದ್ರು, ಶಾಲೆಗಳು ಆರಂಭ ಆದಾಗ ಮಕ್ಕಳ ಆರೋಗ್ಯದ‌ ಬಗ್ಗೆ ಮಾತನಾಡಿದ್ದರು. ಹಿಂದುಳಿದ,‌ ಅಲ್ಪಸಂಖ್ಯಾತ ಮಕ್ಕಳ ಹಿತ ದೃಷ್ಟಿಯಿಂದ ರಿಸ್ಕ್ ತಗೊಂಡು ಶಾಲೆ ಆರಂಭ ಆಯ್ತು. ಕೆಲವರಿಗೆ ಇದನ್ನು ಸಹಿಸೋದಕ್ಕೆ ಆಗಲಿಲ್ಲ.‌ ಅತಿಥಿ ಉಪನ್ಯಾಸಕರು, ಶಿಕ್ಷಕರ ನೇಮಕಾತಿ ಹೀಗೆ ಎಲ್ಲವೂ ಶಾಲೆ ಆರಂಭಕ್ಕೂ ಮುನ್ನವೇ ಸುಸೂತ್ರವಾಗಿ ನೆರವೇರಿತು. ಆಗ‌ ಹಿಜಾಬ್ ವಿಚಾರ ತಂದು ವೋಟ್‌ ಬ್ಯಾಂಕ್ ಆಟವಾಡಿದ್ರು, ವಿಫಲ ಆಗಿ ಮುಖ ಭಂಗವಾಯ್ತು.‌ ಕಲಿಕಾ ಚೇತರಿಕೆ ಬಗ್ಗೆಯೂ ನೆಗೆಟಿವ್ ಮಾತಾಡಿದ್ರು. ಎಲ್ಲವೂ ಸುಸೂತ್ರವಾಗಿ ನೇಮಕಾತಿ ಆಗ್ತಿದೆ. ಇದನ್ನೂ ಸಹ ಕೆಲವರಿಗೆ ಸಹಿಸಲು ಆಗ್ತಿಲ್ಲ ಅಂತ ಕಾಂಗ್ರೆಸಿಗರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಇದನ್ನೂ ಓದಿ:ಮಗ ಸತ್ತು 13 ದಿನ ಕಳೆದರೂ ಸಿಗದ ಸುಳಿವು: ರಹಸ್ಯ ಭೇದಿಸಿ ಎಂದು ಕಣ್ಣೀರು ಹಾಕಿದ ತಾಯಿ

ಸಿಎಂ ಬೊಮ್ಮಾಯಿ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿರುವುದನ್ನ ಕಂಡು, ಇದೀಗ ಜಾತಿಯ ಬಗ್ಗೆ ವಿಷ ಬೀಜ‌ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಪಠ್ಯಪುಸ್ತಕದ ಕಮಿಟಿ ವರದಿ ಬರುವ ಮುನ್ನವೇ ಟಿಪ್ಪು ಸುಲ್ತಾನ್, ಭಗತ್ ಸಿಂಗ್ ಪಾಠ‌ ಕೈ ಬಿಟ್ಟಿದ್ದಾರೆ ಅಂತ ಹೇಳಿದ್ರು.‌ ಭಗತ್ ಸಿಂಗ್ ಆದ ಮೇಲೆ ಬಸವಣ್ಣ, ನಾರಾಯಣ ಗುರು ಪಾಠ ಕೈಬಿಟ್ಟು, ಕುವೆಂಪು ಅವ್ರ ಬಗ್ಗೆ ಅವಹೇಳನ ಮಾಡ್ತಿದ್ದಾರೆ ಅಂತ ಇವತ್ತು ಹೇಳ್ತಿದ್ದಾರೆ. ದಿನಾ ಒಂದಲ್ಲಾ ಒಂದು ಗೊಂದಲ ಬರುವಂತೆ‌ ಮಾಡಿ, ಜಾತಿಯ ಬಗ್ಗೆ ವಿಷ ಬೀಜ‌ ಬಿತ್ತಿದ್ದಾರೆ ಎಂದು ಹೇಳಿದರು.

ಇತಿಹಾಸದ ಹೊರೆ: ಸಿದ್ದರಾಮಯ್ಯ ಸರ್ಕಾರ ಇರುವುವಾಗಲೇ ಇತಿಹಾಸ ಪುಸ್ತಕದಲ್ಲಿ ಹೆಚ್ಚಿನ ಹೊರೆ ಆಗಿತ್ತು. ಒಂದು ವರ್ಷದಲ್ಲಿ ಪಾಠ ಕವರ್ ಮಾಡಲು ಆಗ್ತಿಲ್ಲ ಅಂತ ಶಿಕ್ಷಕರು ಹೇಳ್ತಿದ್ದರು. ಆದರೆ ಈಗ ಟೆಕ್ಸ್ಟ್ ಬುಕ್ ಬಂದಿಲ್ಲ, ಹಾಗೆ.. ಹೀಗೆ ಎಂದು ಕಮೆಂಟ್ ಮಾಡ್ತಾರೆ. ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅಂತ ಗೊತ್ತಿಲ್ಲ. ಶಿಕ್ಷಣದಲ್ಲಿ ರಾಜಕೀಯದ ಆಟವನ್ನ ಆಡ್ತಾರೆ ಅಂತ ಆಕ್ರೋಶ ಹೊರಹಾಕಿದರು.

ನಾರಾಯಣ ಗುರು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಸೇರಿದಂತೆ ಇತರೆ ಕ್ರಾಂತಿಕಾರಿಗಳ ಬಗ್ಗೆ ಪಾಠ ಸೇರಿಸಿದ್ದೇವೆ, ಯಾರದ್ದೂ ತೆಗೆದಿಲ್ಲ. ಸುಳ್ಳು ಪ್ರಚಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಹಿರಿಯ ರಾಜಕೀಯ ನಾಯಕರೆಲ್ಲ ಟ್ವೀಟ್​ ಮಾಡೋದು ನೋಡಿದರೆ ಸುಳ್ಳನ್ನ ನೂರು ಸರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಅಂತ ಸಚಿವ ನಾಗೇಶ್​ ಹರಿಹಾಯ್ದರು.

ಭುಗಿಲೆದ್ದ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ-ಕಡಿತ ವಿಚಾರ.. ಎಲ್ಲದಕ್ಕೂ ಖುದ್ದು ವಿವರಣೆ ನೀಡಿದ್ರು ಶಿಕ್ಷಣ ಸಚಿವ

ವೋಟ್ ಬ್ಯಾಂಕ್ ರಾಜಕಾರಣ: ಅಸೆಂಬ್ಲಿಯಲ್ಲಿ ಒಡೆಯರ್ ಬಗ್ಗೆ ಮಾತನಾಡುವ ಕಾಂಗ್ರೆಸಿಗರೇ, ಹಿಂದಿನ ಸಮಿತಿಯವ್ರು ಆ ಪಾಠವನ್ನು ತೆಗೆದುಹಾಕಿದರು. ಯಾಕೆ ತೆಗೆದ್ರು ಅಂತ ಯಾರ ಬಳಿಯೂ‌ ಉತ್ತರ ಇಲ್ಲ. 5 ಪೇಜ್ ಪಾಠ‌ ತೆಗೆದು 4 ಲೈನ್‌ಗೆ ಇಳಿಸಿದ್ರು, 1 ಪೇಜ್ ಇದ್ದ ಟಿಪ್ಪು ಪಾಠ 6 ಪೇಜ್ ಬಂತು. ಒಡೆಯರ್ ವೋಟ್ ಬ್ಯಾಂಕ್ ಅಲ್ಲ, ಟಿಪ್ಪು ವೋಟ್‌ ಬ್ಯಾಂಕ್ ಗೋಸ್ಕರ ಅಲ್ವಾ? ಹೀಗೆ ಮಾಡಿದ್ದು ಎಂದು ಕೇಳಿದರು.

ಬರಗೂರು ರಾಮಚಂದ್ರಪ್ಪ ಒಳ್ಳೆಯ ಸಾಹಿತಿ, ಅವರು ಈ ರೀತಿ ಮಾಡಿರೋ ಸಾಧ್ಯತೆ ಇಲ್ಲ. ಇವ್ರೆಲ್ಲ ಹೇಳಿಕೊಟ್ಟು ಮಾಡಿಸಿರಬಹದು. ಟಿಪ್ಪು ಒಬ್ಬರೇ ಬ್ರಿಟಿಷ್ ವಿರುದ್ಧ ಹೋರಾಡಿದ್ದಾ?, ಬೇರೆ ಯಾರು ಇರಲಿಲ್ವಾ? ನಿಜವಾದ ಇತಿಹಾಸ ಬರೆಯಬೇಕು, ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಹೌದು, ಹಾಗೆ ಮತಾಂತರ ಮಾಡ್ತಾ ಇದ್ದದ್ದನ್ನು ಬರಿಬೇಕು ಅಲ್ವಾ. ಯಾಕೆ ಮರೆ ಮಾಡಬೇಕು?ಅಂತ ಪ್ರಶ್ನಿಸಿದರು.

ಪೆರಿಯಾರ್ ಬಗ್ಗೆ ಒಂದಷ್ಟು ಲೈನ್ ತೆಗೆದಿದ್ದೀವೆ. ರಾಮ ವೈದಿಕ ಸಂಸ್ಕೃತಿಗೆ ಸಂಬಂಧಿಸಿದವ, ರಾವಣ ದ್ರಾವಿಡ ಸಂಸ್ಕೃತಿಗೆ ಸಂಸ್ಕೃತಿಗೆ ಸಂಬಂಧಿಸಿದವ ಅಂತಾ ಇದೆ. ಇಂತಹದ್ದು ಮಕ್ಕಳಿಗೆ ಹೇಳಿಕೊಡಬೇಕಾ? ಇದನ್ನ ತೆಗೆದರೆ ಅವ್ರಿಗೆ ಎಲ್ಲಿಲ್ಲದ ದುಃಖವಾಗಿದೆ. ಬುದ್ಧಿಜೀವಿಗಳೆನಿಸಿಕೊಂಡವರಿಗೆ ರಾಮ ಬೇಡ, ರಾವಣ ಬೇಕು. ಪೆರಿಯಾರ್ ರಾಮಸ್ವಾಮಿ ಅವರ ಹೆಸರಿನಲ್ಲೂ ರಾಮ ಇದೆ, ರಾಮ ಏನು ಬಿಜೆಪಿ ಆರ್‌ಎಸ್‌ಎಸ್ ಸ್ಥಾಪನೆ ಆದಮೇಲೆ ಬಂದ್ರಾ ಅಂತ ಕಾಂಗ್ರೆಸ್​ ಬಗ್ಗೆ ಬೇಸರ ಹೊರಹಾಕಿದರು.

ಕುವೆಂಪುಗೆ ಅವಮಾನ ಮಾಡಿದವರ್ಯಾರು:? ಇವರಿಗೆಲ್ಲಾ ಕುವೆಂಪು ಬಗ್ಗೆ ಏನು ಗೊತ್ತು, ಅವರ ಸರ್ಕಾರ ಇದ್ದಾಗ ಯಾವ ಪೇಜ್ ನಲ್ಲಿ ಪಾಠ ಇತ್ತೋ,‌ ಅದೇ ಪೇಜ್‌ ನಲ್ಲಿದೆ.‌ ಕುವೆಂಪು ಅವ್ರಿಗೆ ಅವಮಾನ ಮಾಡಿದವರು ಯಾರು? ಸೋ ಕಾಲ್ಡ್‌ ಬುದ್ಧಿಜೀವಿಗಳಿಂದ ಸಮಸ್ಯೆ ಆಗ್ತಿದೆ. ಎಲ್ಲೆಲ್ಲಿ ತಾಯಿ ನಾಡು, ಹಿಂದೂ ಅಂತ ಪದ ಬಳಕೆ ಆಗಿದ್ಯೋ ಅದೆಲ್ಲ ಕಿತ್ತು ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಕಳೆದ ಸಮಿತಿ ಅಂಬೇಡ್ಕರ್, ಗಾಂಧಿ ಪಾಠ ತೆಗೆದುಹಾಕಿದರು. ಉದಾತ್ತ ಚಿಂತನೆ ಎಂಬ ಪಾಠ ತೆಗೆದು ಹಾಕಿದರು. ಇವರಿಬ್ಬರನ್ನ ಯಾಕೆ ತೆಗೆದ್ರು?ಎಂದು ಪ್ರಶ್ನೆಗಳನ್ನು ಶಿಕ್ಷಣ ಸಚಿವರು ಕೇಳಿದರು.

ಸಾಹಿತಿಗಳ‌ ಬಗ್ಗೆ ಜಾತಿ ಮಾತಾಡಬೇಡಿ: ಹೆಡ್ಗೆವಾರ್ ಒಳ್ಳೆಯ ಭಾಷಣವನ್ನು ಸೇರಿಸಿದ್ದೇವೆ. ಹೆಡ್ಗೆವಾರ್ ಕ್ರಾಂತಿಕಾರಿ ಮೂವ್‌ಮೆಂಟ್ ಸೇರಿದ್ದು, ನಾಗ್ಪುರ ಕಾಂಗ್ರೆಸ್ ಮೂವ್‌ಮೆಂಟ್‌ನಲ್ಲಿಯೂ ಇದ್ರು. ಅದಕ್ಕೆ ಅವರ ಬಗ್ಗೆ ಹಾಕಲಾಗಿದೆ. ಖಿಲಾಫತ್ ಚಳವಳಿ ಫೇಲ್‌ ಆದ ನಂತ್ರ ರೋಗಿಯ ವೈದ್ಯನಾಗಿ ಅಲ್ಲ, ದೇಶದ ವೈದ್ಯನಾಗಿ ಯೋಚಿಸಿದ್ರು ಎಂದು ವಿವರಿಸಿದರು.

Last Updated : May 23, 2022, 7:50 PM IST

For All Latest Updates

TAGGED:

ABOUT THE AUTHOR

...view details