ಬೆಂಗಳೂರು: ಕ್ರೀಡಾಪಟುಗಳಿಗೆ ಪ್ಯಾರಾ ಸೈಲಿಂಗ್ ಹಾಗೂ ಕ್ರೀಡಾಕೂಟದ ಪ್ರಚಾರಕ್ಕೆ ಸಸ್ನಾ 172 ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ನಾರಾಯಣಗೌಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಪ್ರಚಾರದ ಏರ್ ಕ್ರಾಫ್ಟ್‌ಗಳಿಗೆ ಚಾಲನೆ ನೀಡಿದರು.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್: ಪ್ಯಾರಾಸೈಲಿಂಗ್‌ಗೆ ಸಚಿವ ನಾರಾಯಣಗೌಡ ಚಾಲನೆ - Minister Narayana Gowda Inaguarates Khelo India University Games
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗಾಗಿ ಏರ್ಪಡಿಸಿರುವ ಪ್ಯಾರಾ ಸೈಲಿಂಗ್‌ಗೆ ಸಚಿವ ಡಾ.ನಾರಾಯಣಗೌಡ ಚಾಲನೆ ನೀಡಿದರು.
ಸಚಿವ ನಾರಾಯಣಗೌಡ
ಪ್ರತಿದಿನ ಸಿಟಿ ರೌಂಡ್ಸ್:ಗೇಮ್ಸ್‌ನ ಪ್ರಚಾರಕ್ಕೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಎರಡು ವಿಮಾನಗಳನ್ನು ಬಳಸಲಾಗಿದೆ. ಈ ವಿಮಾನಗಳು ಪ್ರತಿದಿನ ಸಿಟಿ ರೌಂಡ್ಸ್ ಮಾಡಲಿವೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:4ನೇ ಅಲೆ ಭೀತಿ: ಮೈಸೂರಿನಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ