ಕರ್ನಾಟಕ

karnataka

ETV Bharat / state

ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬ: ಸಚಿವ ಡಾ. ನಾರಾಯಣಗೌಡ ಗರಂ

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ, ಮೆಘಾಫುಡ್ ಪಾರ್ಕ್ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಕಾರಣ ಕೇಳಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಸಚಿವ ಡಾ. ನಾರಾಯಣಗೌಡ
Minister Narayana Gowda

By

Published : Mar 5, 2021, 6:43 AM IST

ಬೆಂಗಳೂರು:ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಬಳಿ ರಾಜ್ಯದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಮೆಘಾ ಫುಡ್ ಪಾರ್ಕ್ ನಿರ್ಮಾಣವಾಗುತ್ತಿದೆ. ಆದರೆ, ಇದರ ಕಾಮಗಾರಿ ವಿಳಂಬವಾಗುತ್ತಿದ್ದು, ಇದಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಿ, ತರಾಟೆಗೆ ತೆಗೆದುಕೊಂಡರು. ದಿನಕ್ಕೊಂದು ಸಬೂಬು ಹೇಳುವುದನ್ನು ನಿಲ್ಲಿಸಿ, 15 ದಿನಗಳಲ್ಲಿ ವರದಿ ನೀಡಬೇಕು ಎಂದು ಖಡಕ್​ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ತವರೂರಿನಲ್ಲಿ ಆಗುತ್ತಿರುವ ಮೆಗಾ ಫುಡ್ ಫಾರ್ಕ್ ಪ್ರತಿಷ್ಠಿತ ಯೋಜನೆಯಾಗಿದ್ದು, ಸುಮಾರು 60 ಎಕರೆ ಪ್ರದೇಶದಲ್ಲಿ 113.83 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದ ಸಾವಿರಾರು ಜನರಿಗೆ ನೇರ ಉದ್ಯೋಗ ಸಿಗುತ್ತದೆ. ಆದರೆ, ಅಧಿಕಾರಿಗಳು ಮಾತ್ರ ಪ್ರತಿ ಹಂತದಲ್ಲೂ ಒಂದೊಂದು ನೆಪ ಹೇಳಿ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ಹೀಗೆ ಆದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಗುಡುಗಿದರು.

ನೀರು, ವಿದ್ಯುತ್, ರಸ್ತೆ ಹೀಗೆ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಂದ ಈವರೆಗೆ ಸಾಧ್ಯವಾಗಿಲ್ಲ. ಇನ್ನು ಕಾರಣಗಳನ್ನು ಹೇಳುವಂತಿಲ್ಲ. ಅದೇನೇ ಸಮಸ್ಯೆ ಇದ್ದರೂ ತಕ್ಷಣ ಸರಿಪಡಿಸಬೇಕು. 15 ದಿನಗಳಲ್ಲಿ ಎಲ್ಲ ತೊಡಕು ನಿವಾರಿಸಿ, ಕೆಲಸ ಆರಂಭಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರದ ಕಿಸಾನ್ ಸಂಪದ ಯೋಜನೆಯಡಿ ಬೂಕನಕೆರೆಯ ಅಶೋಕನಗರದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣವಾಗಬೇಕು. ಇದು ಮುಖ್ಯಮಂತ್ರಿಗಳ ಬಹುದಿನಗಳ ಕನಸು. ಮೆಘಾಫುಡ್ ಪಾರ್ಕ್, ಪಶು ಆಹಾರ ಉತ್ಪಾದನಾ ಘಟಕ, ಹಾಲಿನ ಪ್ಯಾಕೇಜ್ ಉತ್ಪಾದನಾ ಘಟಕ ಜೊತೆಗೆ ಸಣ್ಣ ಕೈಗಾರಿಕೆಗಳು ಇಲ್ಲಿ ಆರಂಭವಾಗಬೇಕು. ಇದಕ್ಕೆ ಜಲಧಾರೆ ಯೋಜನೆಯಡಿ ಕೈಗಾರಿಕಾ ಪ್ರದೇಶಕ್ಕೆ 2.75 ಎಂಎಲ್​​​ಡಿ ನೀರು ಸರಬರಾಜು ಆಗಬೇಕು. ಕೈಗಾರಿಕಾ ವಸಾಹತು ನಿರ್ಮಾಣ ಮಾಡಲು ಫೇವರಿಟ್ ಇನ್ ಫ್ರಾ ಪ್ರೈವೇಟ್ ಲಿಮಿಟೆಡ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿ, ಜಿಪಂ ಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ್ ಝುಲ್ಫಿಕರ್, ಫೇವರಿಟ್ ಇನ್ ಫ್ರಾ ಪ್ರೈವೇಟ್ ಲಿಮಿಟೆಡ್​​ ​​​ಅಧಿಕಾರಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ABOUT THE AUTHOR

...view details