ಕರ್ನಾಟಕ

karnataka

ETV Bharat / state

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಸಚಿವ ಡಾ. ನಾರಾಯಣಗೌಡ - Prime Minister Narendra modi birthday

ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸಚಿವ ಡಾ. ನಾರಾಯಣಗೌಡ ಅವರು ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಜನ್ಮದಿನ ಆಚರಿಸಿದರು.

Narayanagowda
Narayanagowda

By

Published : Sep 17, 2020, 3:35 PM IST

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ‌ ದೇಶಾದ್ಯಂತ ಬಿಜೆಪಿ ಸೇವಾ ದಿವಸ ಆಚರಣೆ ಮಾಡುತ್ತಿದ್ದು, ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಸಚಿವ ಡಾ. ನಾರಾಯಣಗೌಡ ಮೋದಿ ಅವರ ಜನ್ಮದಿನ ಆಚರಿಸಿದರು.

ತಮ್ಮ ನಿವಾಸಕ್ಕೆ ಆರ್ ಎಮ್ ವಿ ಬಡಾವಣೆ ವ್ಯಾಪ್ತಿಯ ಪೌರ ಕಾರ್ಮಿಕರನ್ನು ಆಹ್ವಾನಿಸಿದ ಸಚಿವರು, ದಿನ ಬಳಕೆ ವಸ್ತುಗಳಿರುವ ಕಿಟ್ ನೀಡಿ, ಸಿಹಿ ತಿನಿಸು ವಿತರಿಸಿದರು.

ಬಳಿಕ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದಲ್ಲೇ ಮೊದಲ ಬಾರಿಗೆ ಸಫಾಯಿ ಕರ್ಮಚಾರಿಗಳ ಪಾದ ತೊಳೆದ ಪ್ರಧಾನಿಯಾಗಿದ್ದಾರೆ. ಕಾರ್ಮಮಿಕರನ್ನು ಸ್ವಚ್ಚತೆಯ ಪರಿಪಾಲಕರು ಎಂದು ಕರೆಯುವ ಮೂಲಕ ಪೌರಕಾರ್ಮಿಕರನ್ನು ಗೌರವಿಸಿದ್ದಾರೆ ಎಂದರು

ಕೊರೊನಾ ವಾರಿಯರ್ಸ್ ಗಳಿಗೆ ಚಪ್ಪಾಳೆ ತಟ್ಟಿ , ದೀಪ ಬೆಳಗಿ, ಹೆಲಿಕಾಪ್ಟರ್ ಮೂಲಕ ಪುಷ್ಪಮಳೆ ಸುರಿಸಿ ಗೌರವಿಸಿದ್ದು ಪ್ರಧಾನಿ ಮೋದಿಯವರಿಗೆ ಪೌರಕಾರ್ಮಿಕರ ಮೇಲೆ ಇರುವ ಗೌರವವನ್ನು ತೋರಿಸುತ್ತದೆ. ಇಂತ ಮೇರು ವ್ಯಕ್ತಿತ್ವದ ಪ್ರಧಾನಿ ಮೋದಿ ಅವರಿಗೆ ಜನುಮದಿನದ ಶುಭಾಶಯ ಹೇಳುತ್ತಾ, ಅದರ ಅಂಗವಾಗಿ ಸಾಂಕೇತಿವಾಗಿ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಗೌರವ ಸೂಚಿಸುತ್ತಿದ್ದೇನೆ ಎಂದರು.

ABOUT THE AUTHOR

...view details