ಕರ್ನಾಟಕ

karnataka

ETV Bharat / state

ವಾರಣಾಸಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ಸರ್ಕಾರ ಚಿಂತನೆ : ಸಚಿವ ನಾರಾಯಣಗೌಡ ನೇತೃತ್ವದ ನಿಯೋಗ ಉತ್ತರಪ್ರದೇಶಕ್ಕೆ

ವಾರಣಾಸಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಸಚಿವ ಡಾ.ನಾರಾಯಣಗೌಡ(Minister Dr. Narayana gowda) ಅವರು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ ಸರ್ಕಾರದ ಜೊತೆ ಚರ್ಚಿಸಲು ನವೆಂಬರ್ 18ರಂದು ವಾರಣಾಸಿಗೆ(Varanasi) ತೆರಳಲಿದ್ದಾರೆ..

narayana gowda
ಸಚಿವ ನಾರಾಯಣಗೌಡ

By

Published : Nov 16, 2021, 7:29 PM IST

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯಲಾಗುತ್ತಿದೆ. ಕರ್ನಾಟಕ ರಾಜ್ಯ ರೇಷ್ಮೆ(silk farming) ಉತ್ಪಾದನೆಯಲ್ಲಿ ವಿಶ್ವವಿಖ್ಯಾತಿ ಪಡೆದಿದೆ.

ರಾಜ್ಯದ ರೇಷ್ಮೆ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಹಲವು ಯೋಜನೆಗಳನ್ನು ಜಾರಿಗೆ ‌ತರುತ್ತಿದ್ದಾರೆ.

ಕರ್ನಾಟಕವೂ ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಬನಾರಸ್ ಸೀರೆಗಳ ನೇಯ್ಗೆಗೆ ವಾರಣಾಸಿ ಹೆಸರುವಾಸಿಯಾಗಿದೆ. ಹಾಗಾಗಿ, ವಾರಣಾಸಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಸಚಿವ ಡಾ.ನಾರಾಯಣಗೌಡ(Dr.Narayana gowda) ಅವರು ಚಿಂತನೆ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಸರ್ಕಾರದ(Uttara Pradesh) ಜೊತೆ ಚರ್ಚಿಸಲು ಸಚಿವ ಡಾ.ನಾರಾಯಣಗೌಡ ಅವರ ನೇತೃತ್ವದ ನಿಯೋಗ ವಾರಣಾಸಿಗೆ(Varanasi) ನವೆಂಬರ್ 18ರಂದು ಭೇಟಿ ನೀಡುತ್ತಿದೆ.

ಸಚಿವ ಡಾ.ನಾರಾಯಣಗೌಡ ಅವರು ಉತ್ತರಪ್ರದೇಶದ ರೇಷ್ಮೆ ಸಚಿವ ಸಿದ್ಧಾರ್ಥ ನಾಥ್ ಸಿಂಗ್ ಅವರನ್ನು ನ.18ರಂದು ಭೇಟಿ ಮಾಡಿ, ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ(Karnataka Silk marketing Board) ಶಾಖೆ ತೆರೆಯುವ ಕುರಿತು ಹಾಗೂ ಕರ್ನಾಟಕದಿಂದ ವಾರಣಾಸಿಗೆ ರೇಷ್ಮೆ ಕಳುಹಿಸುವ ಸಂಬಂಧ ಸಭೆ ನಡೆಸಲಿದ್ದಾರೆ.

ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆಗಿನ ಸಭೆ ಬಳಿಕ ವಾರಣಾಸಿಯಲ್ಲಿ ನೇಕಾರರನ್ನು ಭೇಟಿ ಮಾಡಿ, ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಕರ್ನಾಟಕದ ರೇಷ್ಮೆಗೂ ವಾರಣಾಸಿ ನೇಕಾರರಿಗೂ ಅವಿನಾಭಾವ ಸಂಬಂಧವಿದೆ. ವಾರಣಾಸಿಗೆ ಕರ್ನಾಟಕ ಮತ್ತು ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿತ್ತು.

ಆದರೆ, ಚೀನಾದ‌ ಅಗ್ಗದ ರೇಷ್ಮೆ ಅಬ್ಬರಕ್ಕೆ ಸಿಲುಕಿ ಕರ್ನಾಟಕದ ರೇಷ್ಮೆ ಖರೀದಿಯಲ್ಲಿ ಕುಂಠಿತವಾಗಿತ್ತು. ಆದರೀಗ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಿರುವುದರಿಂದ ಮತ್ತೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆಯ ವೈಭವವನ್ನು ಮರಕಳಿಸಲು‌ ಸಚಿವ ನಾರಾಯಣಗೌಡ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ವಾರಣಾಸಿಗೆ ಸಂಪೂರ್ಣ ರೇಷ್ಮೆಯನ್ನು ಕರ್ನಾಟಕದಿಂದಲೇ ಪೂರೈಸುವ ಸಂಬಂಧ ಉತ್ತರಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ.ನಾರಾಯಣಗೌಡ ಅವರು ಚರ್ಚಿಸಲಿದ್ದಾರೆ. ಸಚಿವರ ನಿಯೋಗದಲ್ಲಿ ಕೆಎಸ್‌ಎಂಬಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ತೆರಳಲಿದ್ದಾರೆ.

ABOUT THE AUTHOR

...view details