ಬೆಂಗಳೂರು:ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಭಯೋತ್ಪಾದಕನೊಂದಿಗೆ ಕಾಲೇಜು ಶಿಕ್ಷಕರೊಬ್ಬರು ಹೋಲಿಸಿದ್ದರು. ಇದು ವಿವಾದವಾದ ನಂತರ ಶಿಕ್ಷಕರನ್ನು ಅಮಾನತುಗೊಳಿಸಲಾಗಿತ್ತು. ಇದಾಗಿ ಒಂದು ದಿನದ ನಂತರ, ಶಿಕ್ಷಣ ಸಚಿವ ಬಿ ಸಿ ನಾಗೇಶ್ 'ಇದು ದೊಡ್ಡ ವಿಷಯವಲ್ಲ' ಎಂದು ಹೇಳಿದ್ದಾರೆ.
ಬಹುತೇಕ ಎಲ್ಲರೂ ‘ರಾವಣ’ ಅಥವಾ ‘ಶಕುನಿ’ ಪದಗಳನ್ನು ನಿತ್ಯ ಬಳಸುತ್ತಾರೆ. ವಿಧಾನಸಭೆಯಲ್ಲಿಯೂ ಸಹ ನಾವು ಅನೇಕ ಬಾರಿ ಈ ರೀತಿ ಮಾತನಾಡಿದ್ದೇವೆ. ಅದು ಸಮಸ್ಯೆಯಾಗುವುದಿಲ್ಲ ಎಂದು ವಿಧಾನಸೌಧದಲ್ಲಿ ಎಂದು ಸಚಿವ ಬಿ.ಸಿ. ನಾಗೇಶ್ ಸುದ್ದಿಗಾರರಿಗೆ ತಿಳಿಸಿದರು.
ಕಸಬ್ ಬಗ್ಗೆ ಯಾರಾದರೂ ಮಾತನಾಡಿದರೆ ಅದು ಏಕೆ ಸಮಸ್ಯೆಯಾಗುತ್ತದೆ? 26/11 ಮುಂಬೈ ದಾಳಿಯ ನಂತರ ಸೆರೆಹಿಡಿಯಲಾದ ಏಕೈಕ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು 2012 ರಲ್ಲಿ ಗಲ್ಲಿಗೇರಿಸಲಾಯಿತು ಎಂದು ಅವರು ವಿವರ ನೀಡಿದರು.
ಉಡುಪಿಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಳೆದ ವಾರ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಯ ಹೆಸರನ್ನು ಕೇಳಿದ್ದರು. ಆತ ಮುಸ್ಲಿಂ ಹೆಸರನ್ನು ಹೇಳಿದ ನಂತರ, 'ಓಹ್, ನೀವು ಕಸಬ್‌ನಂತೆ!' ಎಂದಿದ್ದರು. ಇದಕ್ಕೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದಾಗ ಕ್ಷಮೆಯಾಚಿಸಿದ್ದಾರೆ. ವಾರಾಂತ್ಯದಲ್ಲಿ ವಿಡಿಯೋ ಕೂಡಾ ವೈರಲ್ ಆಗಿತ್ತು.
ಇದನ್ನು ಓದಿ:ಸಿದ್ದರಾಮಯ್ಯಗೆ ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ಬೇರೇನು ಗೊತ್ತಿಲ್ಲ : ಸಚಿವ ಅಶ್ವತ್ಥನಾರಾಯಣ