ಬೆಂಗಳೂರು :ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಂದು ವಿಕಾಸಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿ ಕಾರ್ಯಾರಂಭ ಮಾಡಿದರು.
ವಿಕಾಸಸೌಧದ ಕೊಠಡಿ 342-343ರಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಬಳಿಕ ವಿಕಾಸಸೌಧ-ವಿಧಾನಸೌಧದಲ್ಲಿನ ಮಹಾತ್ಮಗಾಂಧಿ ಅವರ ಪ್ರತಿಮೆಗೆ ನಮನ ಸಲ್ಲಿಸಿದರು.
ನಾನು ಮಹಾತ್ಮಗಾಂಧಿ ಅವರ ಅನುಯಾಯಿ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡುತ್ತಿದ್ದೇನೆ. ನನಗೆ ಅವರ ತತ್ವಾದರ್ಶಗಳಲ್ಲಿ ನಂಬಿಕೆಯಿದೆ. ಯಾವಾಗಲೂ ಕಚೇರಿ ಆರಂಭ ಮಾಡುವ ಮುನ್ನ ರಾಷ್ಟ್ರಪಿತನಿಗೆ ನಮನ ಸಲ್ಲಿಸುವುದನ್ನು ಪಾಲನೆ ಮಾಡುತ್ತಿದ್ದೇನೆ ಎಂದರು.