ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಪ್ರಶ್ನಾತೀತ ನಾಯಕರು, ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ: ಸಚಿವ ನಿರಾಣಿ - ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ

ಸಿಎಂ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬಂದಿರುವುದು ಸುಳ್ಳು, ಸಿಎಂ ಸೀಟು ಖಾಲಿ ಇಲ್ಲ, ಇದ್ದಿದ್ದರೆ ಮಾತನಾಡಬಹುದಿತ್ತು. ಆದರೆ, ಬಿಎಸ್‌ವೈ ಆ ಸ್ಥಾನದಲ್ಲಿ ಇದ್ದಾರೆ.

murugesh
murugesh

By

Published : May 26, 2021, 6:35 PM IST

Updated : May 26, 2021, 8:53 PM IST

ಬೆಂಗಳೂರು :ಸಿಎಂ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬಂದಿರುವುದು ಸುಳ್ಳು. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐದರಿಂದ ಆರು ದಶಕಗಳ‌ ಕಾಲ‌ ಹೋರಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

ಅನುಭವ ಇರುವ ಅವರ ಅವಶ್ಯಕತೆ ರಾಜ್ಯಕ್ಕೆ ತುಂಬಾ ಇದೆ ಎಂದು ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಮಾರ್ಮಿಕವಾಗಿ ನುಡಿದರು.

ಯಡಿಯೂರಪ್ಪ ಇಳಿ ವಯಸ್ಸಿನಲ್ಲಿಯೂ ಎಲ್ಲರನ್ನೂ ‌ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಇಷ್ಟು ಕೆಲಸ ಮಾಡುತ್ತಿದ್ದಾರೆ. ಅವರ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆದಿದ್ದಾರೆ. ಮುಂದಿನ‌ ಎರಡು ವರ್ಷದವರೆಗೆ ಅವರೇ ಮುಂದುವರೆಯಬೇಕು ಎಂದು ಅಭಿಪ್ರಾಯಪಟ್ಟರು.

ಯಡಿಯೂರಪ್ಪ ನಮ್ಮ ನಾಯಕರು: ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಸಿಎಂ ಸೀಟು ಖಾಲಿ ಇಲ್ಲ. ಇದ್ದಿದ್ದರೆ ಮಾತನಾಡಬಹುದಿತ್ತು. ಆದರೆ, ಬಿಎಸ್‌ವೈ ಆ ಸ್ಥಾನದಲ್ಲಿ ಇದ್ದಾರೆ ಎನ್ನುವ ಮೂಲಕ ನಾಯಕತ್ವ ಬದಲಾವಣೆಯನ್ನು ತಳ್ಳಿ ಹಾಕಿದರು.

ನಾನು ಕೊರೊನಾ ಸಂಬಂಧ ನಮ್ಮ ಇಲಾಖೆ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದು ಗೊಂದಲಗಳಿಗೆ ತೆರೆ ಎಳೆದರು.

ಸಚಿವ ಮುರುಗೇಶ್ ನಿರಾಣಿ

ಮುಂದಿನ ಚುನಾವಣೆಯಲ್ಲಿ ಎಂಎಲ್​ಎ ಸೀಟ್ ಕೊಡದೇ ಇಲ್ಲ ಎಂದು ಪಕ್ಷ ತೀರ್ಮಾನ ಮಾಡಿದರೂ ನಾವು ಅದಕ್ಕೂ ಬದ್ಧ. ನಮ್ಮ ಪಕ್ಷ ಏನೇ ಹೇಳಿದರೂ ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.

Last Updated : May 26, 2021, 8:53 PM IST

ABOUT THE AUTHOR

...view details