ಕರ್ನಾಟಕ

karnataka

ETV Bharat / state

'ಕಾವೇರಿ ಕುರಿತ ಸುಪ್ರೀಂ ಕೋರ್ಟ್ ಆದೇಶ ದುರದೃಷ್ಟಕರ, ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆ': ಸಚಿವ ಎಂ.ಬಿ.ಪಾಟೀಲ್

ಕಾವೇರಿ ಬಿಕ್ಕಟ್ಟು ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

Minister MB Patil
ಸಚಿವ ಎಂ.ಬಿ ಪಾಟೀಲ್

By ETV Bharat Karnataka Team

Published : Sep 21, 2023, 2:13 PM IST

ಬೆಂಗಳೂರು: ಕಾವೇರಿ ಬಿಕ್ಕಟ್ಟು ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ದುರದೃಷ್ಟಕರ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಸಚಿವ ಎಂ.ಬಿ.ಪಾಟೀಲ್ ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿಂದು ಮಾತನಾಡಿದ ಸಚಿವರು, ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡೋದು ಕಷ್ಟ. ನಮಗೆ ಸಂಕಷ್ಟ ಸೂತ್ರ ಇಲ್ಲ. ವೈಜ್ಞಾನಿಕ ಸೂತ್ರವನ್ನು ಕೂಡಲೇ ಮಾಡಬೇಕು ಎಂದು ಆಗ್ರಹಿಸಿದರು.

ಕಾವೇರಿ ವಿಚಾರವಾಗಿ ಕೂಡಲೇ ಕೇಂದ್ರ ಜಲಶಕ್ತಿ ಇಲಾಖೆ, ಪ್ರಾಧಿಕಾರ ಮಧ್ಯಪ್ರವೇಶಿಸಬೇಕು. ತಜ್ಞರ ತಂಡ ಕರೆಸಿ ಪರಿಶೀಲನೆ ಮಾಡಿಸಬೇಕು. ನಂತರ ನೀರು ಬಿಡುವ ಬಗ್ಗೆ ತೀರ್ಮಾನ ಮಾಡಬೇಕು ಎಂದು ಸಚಿವರು ಇದೇ ವೇಳೆ ಒತ್ತಾಯಿಸಿದರು.

ಈಗಿನ ತಂಡದಲ್ಲಿ ನಾರಿಮನ್ ಇಲ್ಲ. ಅವರಿದ್ದಾಗ ನಮಗೆ ದೊಡ್ಡ ಶಕ್ತಿ ಇತ್ತು. ಹಾಗಾಗಿ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು. ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳುಹಿಸಬೇಕು ಎಂದು ಸಲಹೆ ನೀಡಿದರು.

ಡಿಸಿಎಂ ಹುದ್ದೆ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು:ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಎಂ ಹುದ್ದೆಗಳನ್ನು ಹೈಕಮಾಂಡ್ ಅವರೇ ಸೃಷ್ಟಿ ಮಾಡಬೇಕು. ನಮ್ಮ ಹಂತದಲ್ಲಿ ಯಾವುದೂ ಇಲ್ಲ. ಹೈಕಮಾಂಡ್ ಮೂರ್ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿ ಮಾಡಬಹುದು. ಈ ವಿಚಾರವನ್ನು ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡ್ತೇವೆ ಎಂದರು.

ಡಿಸಿಎಂ ವಿಚಾರವಾಗಿ ಹೈಕಮಾಂಡ್ ಏನೇ ಹೇಳಿದ್ರೂ ಒಪ್ಪಲೇಬೇಕು. ದಲಿತ ಸಿಎಂ, ಡಿಸಿಎಂ ಬಗ್ಗೆ ಮಾತನಾಡಿದ್ರೆ ತಪ್ಪೇನಿದೆ?. ಅವ್ರ ಅಭಿಪ್ರಾಯದ ಬಗ್ಗೆ ಪತ್ರ ಬರೆಯುತ್ತಾರೆ. ಅನೇಕ ಸಮುದಾಯಗಳಿಗೆ ಸ್ಥಾನಮಾನ ಸಿಕ್ಕಿಲ್ಲ. ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡೋಕೆ ಆಗ್ಲಿಲ್ಲ. ಬಹಳ ಜನ ಇದ್ದಾರೆ. ರಾಯರೆಡ್ಡಿ, ಆರ್.ವಿ.ದೇಶಪಾಂಡೆ ಸೇರಿದಂತೆ ಬಹಳಷ್ಟು ಸಮರ್ಥರಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಕಾವೇರಿ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಕಾರ; ಹೆಚ್ಚುವರಿ ನೀರು ಕೇಳಿದ ತಮಿಳುನಾಡು ಅರ್ಜಿ ತಿರಸ್ಕೃತ

ಜವಾಬ್ದಾರಿಯುತ ಸಚಿವರು ಪತ್ರ ಬರೆಯುತ್ತಾರೆ. ಎಲ್ಲಾ ಸಮುದಾಯಗಳೂ ನಮ್ಮ ಜೊತೆಯಲ್ಲಿ ನಿಂತಿವೆ. 135 ಸ್ಥಾನದ ಬಹುಮತ ಕೊಟ್ಟಿದ್ದಾರೆ. ಲೋಕಸಭೆ ಎಲೆಕ್ಷನ್​​ನಲ್ಲಿ ಇಶ್ಯೂಸ್ ಬೇರೆ ಬೇರೆ ಇರುತ್ತದೆ. ಕನಿಷ್ಠ ಇಪ್ಪತ್ತು ಸ್ಥಾನ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:'ಕಾವೇರಿಗಾಗಿ ಹೋರಾಟ ಮಾತ್ರವಲ್ಲ, ಯಾವುದೇ ತ್ಯಾಗಕ್ಕೂ ಸಿದ್ಧ': ಚಿತ್ರ ನಿರ್ಮಾಪಕ ಎನ್.ಎಂ.ಸುರೇಶ್

ಕಾವೇರಿ ಬಿಕ್ಕಟ್ಟು ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಕಾವೇರಿ ಸೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹೆಚ್ಚುವರಿ ನೀರು ಕೋರಿ ಸಲ್ಲಿಕೆ ಆಗಿದ್ದ ತಮಿಳುನಾಡು ಸರ್ಕಾರದ ಅರ್ಜಿಯೂ ತಿರಸ್ಕೃತಗೊಂಡಿದೆ.

ABOUT THE AUTHOR

...view details