ಕರ್ನಾಟಕ

karnataka

ETV Bharat / state

ನಾನು ಸೀನಿಯರ್ ಲೀಡರ್ ಇದ್ದೀನಿ ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ: ಸಚಿವ ಎಂ ಬಿ ಪಾಟೀಲ್ - ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನಾನು ಡಿಕೆ ಸುರೇಶ್​ಗೆ ವಾರ್ನ್ ಮಾಡಿಲ್ಲ, ಡಿಕೆ ಸುರೇಶ್ ನನಗೂ ವಾರ್ನ್ ಮಾಡಿಲ್ಲ ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಹೋಗಬಾರದು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.

minister-mb-patil-reaction-on-dk-suresh
ನಾನು ಸೀನಿಯರ್ ಲೀಡರ್ ಇದ್ದೀನಿ ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ: ಸಚಿವ ಎಂ ಬಿ ಪಾಟೀಲ್

By

Published : May 24, 2023, 8:37 PM IST

ಸಚಿವ ಎಂ ಬಿ ಪಾಟೀಲ್

ಬೆಂಗಳೂರು: ನನಗೆ ಯಾರು ವಾರ್ನ್ ಮಾಡಿಲ್ಲ ನಾನು ಯಾರಿಗೂ ವಾರ್ನ್ ಮಾಡಿಲ್ಲ. ನಾನು ಸೀನಿಯರ್ ಲೀಡರ್ ಇದ್ದೀನಿ ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಶಾಸಕಾಂಗ ಸಭೆಯಲ್ಲಿ ಎಂಬಿ ಪಾಟೀಲರೇ ಬನ್ನಿ ಅಂತ ಡಿಕೆ ಸುರೇಶ್ ಕರೆದಿದ್ದು ನಿಜ. ಗಟ್ಟಿಯಾಗಿ ಇರಿ ಎಂಬಿ ಪಾಟೀಲರೇ ಅಂತ ಕರೆದ್ರು. ನಾನು ಕಚೇರಿ ಒಳಗೆ ಬನ್ನಿ ಮಾತಾಡೋಣ ಅಂತ ಹೇಳಿ ಹೋದೆ ಅಷ್ಟೇ ನಡೆದಿದ್ದು ಎಂದರು.

ಆರು ಬಾರಿ ಶಾಸಕರು, ಗೃಹಸಚಿವರು ಆಗಿದ್ದವನು ನಾನು. ನಮ್ಮ ತಂದೆ ತಾಯಿನೇ ನನಗೆ ಒಂದು ದಿನ ಕೂಡ ವಾರ್ನ್ ಮಾಡಿಲ್ಲ. ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ ನಾನು. ವಾರ್ನಿಂಗ್ ಅನ್ನೋ ಪದ ನಮ್ಮ ಡಿಕ್ಸನರಿಯಲ್ಲಿ ಇಲ್ಲ, ವಾರ್ನಿಂಗ್ ಕೊಡ್ತೇವೇ ವಿನಹ ತಗೊಳಲ್ಲ. ಅವರ ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಪ್ರೀತಿಯಿಂದ ಎಂಬಿ ಪಾಟೀಲರೇ ಅಂತ ಕರೆದಿದ್ದು ನಿಜ ಎಂದರು.

ನನ್ನ ಹಾಗೂ ಸುರೇಶ್ ನಡುವೆ ನಡೆದ ಸಂಭಾಷಣೆ ಇಷ್ಟೇ. ಯಾರು ಯಾರಿಗೂ ವಾರ್ನ್ ಮಾಡಿಲ್ಲ. ನಾನು ಡಿಕೆ ಸುರೇಶ್​ಗೆ ವಾರ್ನ್ ಮಾಡಿಲ್ಲ ಡಿಕೆ ಸುರೇಶ್ ನನಗೂ ವಾರ್ನ್ ಮಾಡಿಲ್ಲ. ನಮ್ಮಿಬ್ಬರಲ್ಲಿ ಯಾರಿಗೂ ವಾರ್ನ್ ಕೊಡುವವರು ಇಲ್ಲ. ನಾವು ವಾರ್ನ್ ಕೊಡುವವರೇ ಹೊರತು ನಮಗೆ ವಾರ್ನ್ ಮಾಡುವವರು ಯಾರು ಇಲ್ಲ. ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಹೋಗಬಾರದು. ನಮ್ಮ ಸಂಬಂಧ ಚೆನ್ನಾಗಿದ್ದು ಇದನ್ನು ತಪ್ಪಾಗಿ ಅರ್ಥೈಸಲು ಯಾರು ಹೋಗಬಾರದು ಎಂದು ಹೇಳಿದರು.

ಮತ್ತೊಂದು ಕಡೆ ಮಾಜಿ ಸಚಿವ ಆರ್ ವಿ ದೇಶಪಾಂಡೆ ಮಾಧ್ಯಮಗಳಿಗೆ ಮಾತನಾಡಿದ್ದು, ರಾಜಕಾರಣದಲ್ಲಿ ತ್ಯಾಗ ಎನ್ನುವುದು ದೊಡ್ಡ ಮಾತು. ನಾನು ಎಲ್ಲಾ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ಉತ್ತರ ಕನ್ನಡದಿಂದ ಯಾರು ಸಚಿವರಾಗಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡಲಿದೆ. ಸಿದ್ದರಾಮಯ್ಯ ಅವರು ಹೇಳಿದರೆ ಸಚಿವ ಸಂಪುಟದಲ್ಲಿ ಕೆಲಸ ಮಾಡ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿಧಾನಸಭೆಗೆ ಸ್ಪೀಕರ್ ಯಾರು? ನಾಳೆ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ತೀರ್ಮಾನ

ದೆಹಲಿಗೆ ತೆರಳಿರುವ ಸಿಎಂ, ಡಿಸಿಎಂ: ಇನ್ನು ಸಚಿವ ಸಂಪುಟ ರಚನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ. ಜೊತೆ ಕಾಂಗ್ರೆಸ್​ನ ಹಲವಾರು ಸಚಿವಾಕಾಂಕ್ಷಿಗಳು ಸಹ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮಧ್ಯಾಹ್ನ 2.55ರ ಸಮಯಕ್ಕೆ ವಿಮಾನದಲ್ಲಿ ದೆಹಲಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರಯಾಣ ಬೆಳೆಸಿದ್ದರು. ಡಿಸಿಎಂ ಜೊತೆ ಅವರ ಸಹೋದರ ಡಿ ಕೆ ಸುರೇಶ್ ಕೂಡ ಪ್ರಯಾಣ ಬೆಳೆಸಿದ್ದರು. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ವಿಸ್ತರಣೆ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಸಂಪುಟ ಸೇರಬಯಸುವ ಸಂಖ್ಯೆ ಬಹುದೊಡ್ಡದಿದ್ದು, ಇಬ್ಬರು ನಾಯಕರು ತಮ್ಮ ಆಪ್ತರನ್ನು ಸಂಪುಟಕ್ಕೆ ಸೇರಿಸುವ ಕುರಿತಾಗಿ ಹೈಕಮಾಂಡ್ ಬಳಿ ಚರ್ಚೆ ನಡೆಸಲಿದ್ದಾರೆ.

ABOUT THE AUTHOR

...view details