ಕರ್ನಾಟಕ

karnataka

ETV Bharat / state

ಶಾ ಭೇಟಿಗೆ ಎದುರಾಗುವ ವಿರೋಧವನ್ನು ಮುಗುಳುನಗೆಯಿಂದ ಸ್ವೀಕರಿಸುತ್ತೇವೆ: ಸಚಿವ ಪೂಜಾರಿ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಂಗಳೂರು ಭೇಟಿಗೆ ಕಾಂಗ್ರೆಸ್​ನಿಂದ ವ್ಯಕ್ತವಾಗುತ್ತಿರುವ ವಿರೋಧವನ್ನು ಮುಗುಳುನಗೆಯಿಂದ ಸ್ವೀಕರಿಸಿ ಅದ್ಭುತ ರೀತಿಯಲ್ಲಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Minister Kota Srinivasa Poojari
ಶಾ ಭೇಟಿಗೆ ಎದುರಾಗುವ ವಿರೋಧವನ್ನು ಮುಗುಳುನಗೆಯಿಂದ ಸ್ವೀಕರಿಸುತ್ತೇವೆ: ಸಚಿವ ಪೂಜಾರಿ

By

Published : Jan 7, 2020, 5:36 PM IST

Updated : Jan 7, 2020, 5:42 PM IST

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಂಗಳೂರು ಭೇಟಿಗೆ ಕಾಂಗ್ರೆಸ್​ನಿಂದ ವ್ಯಕ್ತವಾಗುತ್ತಿರುವ ವಿರೋಧವನ್ನು ಮುಗುಳುನಗೆಯಿಂದ ಸ್ವೀಕರಿಸುತ್ತೇವೆ. ಅದೇ ರೀತಿ ಅದ್ಭುತವಾಗಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಆಗಮನಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆ. ರಾಜಕಾರಣ ಮಾಡಬೇಕು ಎನ್ನುವ ಅನಿವಾರ್ಯತೆಯಲ್ಲಿ ವಿರೋಧಿಸಿದರೆ ಅವರ ವಿರೋಧವನ್ನೇ ನಾವು ಮುಗುಳುನಗೆಯಿಂದ ಸ್ವೀಕರಿಸುತ್ತೇವೆ. ಹಾಗೆಯೇ ಅದ್ಭುತ ರೀತಿಯಲ್ಲಿ ಕಾರ್ಯಕ್ರಮ ನಡೆಸಿ ಪೌರತ್ವ ಕಾಯ್ದೆಯನ್ನು ಜನಸಾಮಾನ್ಯರಿಗೆ ತಿಳಿಸುತ್ತೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಬಿಜೆಪಿಯ ನಿಲುವನ್ನು ಸ್ವಾಗತಿಸಿದ್ದಾರೆ. ಟೀಕೆ ಮಾಡಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಟೀಕಿಸುತ್ತಿದೆ ಅಷ್ಟೇ ಎಂದು ದೂರಿದರು.

ಮಂಗಳೂರು ಗಲಭೆ ಹಾಗೂ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಆರಂಭಗೊಂಡಿದ್ದು, ಅದರ ಬಗ್ಗೆ ಹಚ್ಚಿನ ಮಾಹಿತಿ ಇಲ್ಲ. ಆದ್ರೆ ಒಟ್ಟಾರೆ ನಡೆದಿರುವ ಘಟನೆಗಳನ್ನು ಮರೆತು ಒಂದಾಗಿ ಹೋಗಲು ಅಗತ್ಯ ವಾತಾವರಣವನ್ನು ಸೃಷ್ಟಿಸುತ್ತಿದ್ದೇವೆ. ಎಲ್ಲ ಸಮಾಜದವರನ್ನು ಕರೆದು ವಿಶ್ವಾಸದಿಂದ ಒಂದಾಗಿ ಹೋಗುವ ವಾತಾವರಣ ರೂಪಿಸಲು ಕರೆದ ಸಭೆಗೆ ನಮ್ಮ ಮೇಲೆ ವಿಶ್ವಾಸವಿಟ್ಟು ಎಲ್ಲ ಸಮುದಾಯದವರೂ ಬಂದಿದ್ದರು ಎಂದರು.

ಕೃಷಿಕರಿಗೆ ಮಾತ್ರ ಕೃಷಿ ಕ್ರೆಡಿಟ್ ಕಾರ್ಡ್ ಸಿಗುತ್ತಿತ್ತು. ಪ್ರಧಾನಿ ಅವರು ತುಮಕೂರಿಗೆ ಬಂದ ವೇಳೆ ಕೃಷಿಕರಿಗೆ ಸಿಗುವ ಕಿಸಾನ್ ಕ್ರೆಡಿಟ್ ಕಾರ್ಡನ್ನು ಮೀನುಗಾರರಿಗೂ ವಿಸ್ತರಿಸುವ ಕ್ರಾಂತಿಕಾರಕ ಬದಲಾವಣೆ ಮಾಡಲಾಗಿತ್ತು. 28 ರಿಂದ 30 ಸಾವಿರ ಜನರಿಗೆ ಮೊದಲ ಹಂತವಾಗಿ ಕಾರ್ಡ್ ವಿತರಿಸಲಾಗುತ್ತಿದ್ದು, ನಂತರ ಪ್ರತಿ ಮೀನುಗಾರರಿಗೆ ಕೊಡಲಾಗುತ್ತದೆ. ದೊಡ್ಡ ಯಾಂತ್ರಿಕ ಬೋಟ್​ ಇದ್ದರೆ 3 ಲಕ್ಷ, ಮಧ್ಯಮ ಬೋಟ್ ಇದ್ದರೆ 2 ಲಕ್ಷ ಹಾಗೂ ಸಣ್ಣ ಮರಿಗಳನ್ನು ಸಾಕುವವರಿಗೆ ಸಣ್ಣ ಪ್ರಮಾಣದ ಅನುದಾನ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ರಾಜ್ಯದ ಕರಾವಳಿಯ 320 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಬಸ್ ನಿಲ್ದಾಣಕ್ಕೆ ಬೇಕಾದ ವ್ಯವಸ್ಥೆಯಂತೆ ಬೋಟ್​ಗಳು ನಿಲ್ಲಲು ಬೇಕಾದ ಯೋಜನೆಗಳನ್ನು ರೂಪಿಸಿ ಮೀನುಗಾರರಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಯೋಜನೆ ರೂಪಿಸಿದ್ದೇವೆ. ಮಂಗಳೂರಿನ ಮೂರನೇ ಹಂತದ ಬಂದರು ಅಭಿವೃದ್ಧಿ, ಕಾರವಾರ ಜಿಲ್ಲೆಯ ಇರುವ ಅನೇಕ ಕಾಮಗಾರಿಗಳು ಕಿರು ಬಂದರುಗಳು, ಜಟ್ಟಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.

ಮೀನುಗಾರರಿಗೆ ಮೀನು ಮಾರಾಟ ಮಾಡಲು ದ್ವಿಚಕ್ರ ವಾಹನಗಳನ್ನು ನೀಡುವ ಯೋಜನೆ ಮಾಡುತ್ತಿದ್ದೇವೆ ಮೀನುಮರಿ ಕೇಂದ್ರಗಳನ್ನು ಹೆಚ್ಚು ತೆರೆಯಲು ಚಿಂತನೆ ನಡೆಸಿದ್ದೇವೆ. ಸಮುದ್ರದಲ್ಲಿರುವ ಮೀನುಗಾರರ ರಕ್ಷಣೆ ಮತ್ತು ಅವರ ಭದ್ರತೆಗೆ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಮೀನುಗಾರರ ಅಭಿವೃದ್ಧಿ, ಬಂದರು ಮತ್ತು ಒಳನಾಡು ಸಾರಿಗೆ, ಮುಜರಾಯಿ ಇಲಾಖೆಯಲ್ಲಿ ಸಾಕಷ್ಟು ಯೋಜನಾಬದ್ಧವಾದ ಕೆಲಸವನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

Last Updated : Jan 7, 2020, 5:42 PM IST

ABOUT THE AUTHOR

...view details