ಬೆಂಗಳೂರು: ಮೇ 1ರಿಂದ ಆರಂಭವಾಗಬೇಕಿದ್ದ ಲಸಿಕೆ ಕಾರ್ಯಕ್ರಮಕ್ಕೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ತಯಾರಿಸುವ ಕಂಪನಿಗಳಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾಗಿ 18-44 ವರ್ಷ ವಯಸ್ಸಿನವರು ಸರ್ಕಾರ ಅಧಿಕೃತ ಮಾಹಿತಿ ನೀಡುವವರೆಗೂ ಯಾರೂ ಆಸ್ಪತ್ರೆ ಬಳಿ ಹೋಗಬಾರದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿದರು.
ಸದಾಶಿವನಗರದ ತಮ್ಮ ನಿವಾಸದ ಎದುರು ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಕೋವಿಡ್ ಸಂಬಂಧಿತ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಮಧ್ಯಮಾಗಳೊಂದಿಗೆ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಕೊಡುತ್ತೇವೆ. ಅಂದಾಜು 3-3.5 ಕೋಟಿ 18 ವರ್ಷ ಮೇಲ್ಪಟ್ಟವರು ಇದ್ದಾರೆ. 1 ಕೋಟಿ ಡೋಸ್‌ಗೆ ಕೋವಿಶೀಲ್ಡ್ ಲಸಿಕೆಗೆ ಆರ್ಡರ್ ಮಾಡಲಾಗಿದೆ. ಸೆರಂ ಇನ್ಸ್ಟಿಟ್ಯೂಟ್ 1 ತಿಂಗಳಲ್ಲಿ 5-6 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ. ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ. ರಷ್ಯಾದ ಸ್ಪುಟ್ನಿಕ್ ಕೂಡ ರಾಜ್ಯಕ್ಕೆ ಬರುತ್ತಿದೆ. ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ಮೊದಲು ನೀಡಲಾಗುತ್ತದೆ ಎಂದರು.
ನಿನ್ನೆ ರಾಜ್ಯದಲ್ಲಿ ಕರ್ಫ್ಯೂ ಉಲ್ಲಂಘನೆ ಪ್ರಕರಣಗಳ ವಿಚಾರವಾಗಿ ಪ್ರತಿಕ್ರಿಯಿಸಿ, ಎಂತೆಂತವರೇ ಸಾಯುತ್ತಿದ್ದಾರೆ. ನೀವೇ ನೋಡುತ್ತಾ ಇದ್ದೀರಿ. ಜನ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ನಿಯಮ ಪಾಲನೆ ಮಾಡಬೇಕು. ಜನರ ಕಷ್ಟದ ಬಗ್ಗೆ ತೋರಿಸುತ್ತಿದ್ದೀರಾ, ಮಾರ್ಗಸೂಚಿಯನ್ನು ಸರ್ಕಾರ ಕೊಡುತ್ತಿದೆ. ಜವಾಬ್ದಾರಿ ಅರಿತು ವರ್ತಿಸಿ ಎಂದು ಸುಧಾಕರ್ ಮನವಿ ಮಾಡಿದರು.
ದಿನಾಂಕ ನಿಗದಿಯಾಗಿಲ್ಲ: