ಬೆಂಗಳೂರು: ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ. ಇಲಿಯನ್ನು ಬೆಟ್ಟ ಮಾಡಲು ಹೋಗಬೇಡಿ. ಏನೂ ಇಲ್ಲದನ್ನು ಮಾಡಲು ಹೋಗಿ ನಗೆಪಾಟಲಿಗೆ ಈಡಾಗ್ತೀರಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಿಟ್ ಕಾಯಿನ್( bitcoin scam) ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ನಗರದ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾರನ್ನೂ ರಕ್ಷಣೆ ಮಾಡುವ ಅಗತ್ಯ ಸಿಎಂ ಬೊಮ್ಮಾಯಿ ಅವರಿಗೆ ಇಲ್ಲ. ತನಿಖೆ ಆಗಲಿ, ಯಾವ ರಾಜಕಾರಣಿಗಳು ಇದ್ದಾರೆ, ಯಾವ ರಾಜಕಾರಣಿಗಳ ಸಹೋದರರು ಇದ್ದಾರೆ, ಯಾವ ರಾಜಕಾರಣಿಗಳ ಮಕ್ಕಳು ಇದ್ದಾರೆ ಎಂಬುದು ಗೊತ್ತಾಗುತ್ತದೆ. ಯಾವ ಹಂತದಲ್ಲಿ ತನಿಖೆ ಮಾಡಿಸಬೇಕು ಎಂಬುದನ್ನು ನಮ್ಮ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ನಮ್ಮ ರಾಜ್ಯದಲ್ಲಿ ವಿಪಕ್ಷದ ಕೆಲವು ನಾಯಕರು ಕೂಡಾ ಆಪಾದನೆಯಲ್ಲಿ ತೊಡಗಿದ್ದಾರೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ. ಇಡೀ ದೇಶಕ್ಕೆ ತಲುಪಬೇಕು ಎಂದು ದೆಹಲಿಯಿಂದ ಸುದ್ದಿಗೋಷ್ಠಿ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ದೊಡ್ಡ ಸ್ಕ್ಯಾಮ್ ಆಗಿದೆ, ಪ್ರಭಾವಿ ವ್ಯಕ್ಯಿಗಳು, ಅಧಿಕಾರಿಗಳು, ಸರ್ಕಾರ ಸಿಕ್ಕಿಹಾಕಿಕೊಂಡಿದೆ ಎಂದು ಸುಳ್ಳಿನ ಕಂತೆಯನ್ನು ನಿಜ ಮಾಡುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಸರ್ಕಾರಕ್ಕೆ ಆರು ಪ್ರಶ್ನೆ ಕೇಳಿದ್ದಾರೆ. ಶ್ರೀಕಿ(Srikrishna alias Sriki) ಹೇಗೆ ಸಿಕ್ಕಿಹಾಕಿಕೊಂಡ ಅನ್ನೋದು ಮೊದಲು ಅರ್ಥವಾಗಬೇಕು. ಹಿಂದಿನ ಕಾಂಗ್ರೆಸ್ ಸರ್ಕಾರ ಅವನನ್ನು ಹಿಡಿದಿರಲಿಲ್ಲ. ಈಗಿನ ಸಿಎಂ ಗೃಹ ಸಚಿವರಾಗಿದ್ದಾಗ ಡ್ರಗ್ಸ್ ವಿರುದ್ಧ ಆಂದೋಲನ ಮಾಡಿದಾಗ ಶ್ರೀಕಿ ಸಿಕ್ಕಿಹಾಕಿಕೊಂಡ. ಅವನನ್ನು ತನಿಖೆ ಮಾಡಲು ಆರಂಭಿಸಿದಾಗ ಅವನು ಒಂದೊಂದಾಗಿ ಹೇಳಲು ಆರಂಭಿಸಿದ. ತನಿಖೆ ವೇಳೆ ಕೆಲವು ಹೇಳಿಕೆ ಕೊಟ್ಟಿದ್ದ ಎಂದು ತಿರುಗೇಟು ನೀಡಿದರು.
ಮಾದಕ ವ್ಯಸನಿಯ ಮಾತುಗಳಿಗೆ ಕಾಂಗ್ರೆಸ್ ಪ್ರಾಮುಖ್ಯತೆ ಕೊಡುತ್ತಿದೆ:
ಯಾರು ನಟರು ಅಂತಾ ಸುರ್ಜೇವಾಲಾ ಪ್ರಶ್ನೆ ಕೇಳಿದ್ದಾರೆ. ಇಲ್ಲಿ ಡ್ರಗ್ಸ್ ವಿರುದ್ಧ ಆಂದೋಲನ ಮಾಡಿ ಸಮರ ಸಾರಿದವರು ನಟರಾ?. ದೆಹಲಿಯಿಂದ ಕನ್ಯಾಕುಮಾರಿವರೆಗೂ ಇವರ ಅವಧಿಯಲ್ಲಿ ಹ್ಯಾಕರ್ಸ್ನ ಹಿಡಿದ ಇತಿಹಾಸವೇ ಇಲ್ಲ. ಹಿಡಿದವರನ್ನೇ ತಪ್ಪಿತಸ್ಥರು ಎಂದು ಬಿಂಬಿಸುವುದು ಶೋಭೆ ತರಲ್ಲ. ಯಾರಿಂದಲಾದರೂ ಭ್ರಷ್ಟಾಚಾರದ ಬಗ್ಗೆ ಕಲಿಯಬೇಕಾದರೆ ಕಾಂಗ್ರೆಸ್ನಿಂದ ಕಲಿಯಬೇಕು. ಇಲ್ಲಿ ಯಾರೂ ನಟರಿಲ್ಲ. ತನಿಖೆಯ ಎಲ್ಲಾ ಅವಕಾಶಗಳನ್ನು ಪಾರದರ್ಶಕವಾಗಿ ಮಾಡುತ್ತಿದ್ದೇವೆ. ಶ್ರೀಕಿ ಬಿಟ್ ಕಾಯಿನ್ ಎಕ್ಸ್ ಚೇಂಜ್ ವೇಳೆ ಹ್ಯಾಕ್ ಮಾಡಿದ್ದೆ ಎಂದು ಹೇಳಿಕೆ ಕೊಟ್ಟಿದ್ದ. ಹಾಗಾಗಿ ಪೊಲೀಸ್ ಅಧಿಕಾರಿಗಳು ಬೇರೆ ಬೇರೆ ತಜ್ಞರ ಮುಂದೆ ತನಿಖೆ ಮಾಡಿದ್ದಾರೆ. ಒಬ್ಬ ಮಾದಕ ವ್ಯಸನಿಯ ಮಾತುಗಳಿಗೆ ಕಾಂಗ್ರೆಸ್ ನಾಯಕರು ಇಷ್ಟೆಲ್ಲಾ ಪ್ರಾಮುಖ್ಯತೆ ಕೊಡುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ:ಚುನಾವಣಾ ಸಂದರ್ಭದಲ್ಲಿ 'ಬಿಟ್ ಕಾಯಿನ್' ಎಂದು ಕಾಂಗ್ರೆಸ್ ಜನರ ದಾರಿತಪ್ಪಿಸುತ್ತಿದೆ : ಸಿ.ಸಿ.ಪಾಟೀಲ್
ಒಬ್ಬ ಡ್ರಗ್ ಅಡಿಕ್ಟ್ ತಲೆಯಲ್ಲಿ ಬರೀ ಕ್ರೈಂ ಮಾಡೋದು ಅಷ್ಟೇ ಇರುತ್ತದೆ. ಅದನ್ನು ನಾವು ಪರಾಮರ್ಶೆ ಮಾಡಬೇಕು. ಈ ಒಂದು ವರ್ಷದ ನಂತರ ಬಿಟ್ ಫಿನಿಕ್ಸ್ ಸಂಸ್ಥೆ ಆಗಲೀ ಬೇರೆಯವರಾಗಲೀ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿಲ್ಲ. ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶ ಮಾಡುವ ಮೂಲಕ ಅವರ ಜವಾಬ್ದಾರಿ ತೋರಿಸಿದ್ದಾರೆ. ಕಾಂಗ್ರೆಸ್ ಮಾಡದೇ ಇರುವುದನ್ನು ಬೊಮ್ಮಾಯಿ ಮಾಡಿದ್ದಾರೆ. ಬೊಮ್ಮಾಯಿ ಬಹಳ ಬೇಗ ಜನಪ್ರಿಯತೆ ಗಳಿಸಿದ್ದಕ್ಕೆ ನಿಮಗೆ ಹೊಟ್ಟೆ ಕಿಚ್ಚಾ?. ರಾಜಕೀಯದ ನೆಲೆಗಟ್ಟಿನಲ್ಲಿ ಹೋರಾಟ ಮಾಡಿ. ಸುಳ್ಳು ಆರೋಪಗಳಿಂದ ಚಾರಿತ್ರ್ಯ ವಧೆ ಮಾಡುವುದು ಅಪರಾಧ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಗೌರವ ತಂದು ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಟ್ ಫೀನಿಕ್ಸ್ ಕಂಪನಿ ಕರೆನ್ಸಿ ಕಳೆದುಕೊಂಡ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ: