ಕರ್ನಾಟಕ

karnataka

ETV Bharat / state

ಡಿಕೆಶಿ ತಂದೆ ಬಗ್ಗೆ ನನಗೆ ಗೌರವ ಇದೆ, ನೀನು, ನಿಮ್ಮಪ್ಪ ಅಂತ ಹೇಳಿದ್ದು ಆಕ್ರೋಶಕ್ಕಾಗಿ ಅಷ್ಟೇ: ಈಶ್ವರಪ್ಪ ಸಮಜಾಯಿಷಿ - ವಿಧಾನಸೌಧಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ

ನಾನು ಯಾವುದೇ ರಾಷ್ಟ್ರ ದ್ರೋಹ ಮಾಡಿ ಡಿಕೆಶಿ ತರಹ ಜೈಲಿಗೆ ಹೋಗಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಜೈಲಿಗೆ ಹೋಗಿದ್ದೆ. ಅವರು ಯಾವ ಕಾರಣಕ್ಕೆ ಹೋದರು. ಅವರ ತಂದೆ ಬಗ್ಗೆ ನನಗೆ ಗೌರವ ಇದೆ. ನೀನು, ನಿಮ್ಮಪ್ಪ ಅಂತ ಹೇಳಿದ್ದು ಆಕ್ರೋಶಕ್ಕಾಗಿ ಅಷ್ಟೇ ಎಂದು ಈಶ್ವರಪ್ಪ ಹೇಳಿದ್ದಾರೆ.

ಸಚಿವ ಕೆ ಎಸ್ ಈಶ್ವರಪ್ಪ
ಸಚಿವ ಕೆ ಎಸ್ ಈಶ್ವರಪ್ಪ

By

Published : Feb 16, 2022, 7:44 PM IST

ಬೆಂಗಳೂರು:ಇಂದು ವಿಧಾನಸಭೆ ಒಳಗೆ ರಾಷ್ಟ್ರ ಧ್ವಜ ತಂದು ಕಾಂಗ್ರೆಸ್ ನವರು ರಾಷ್ಟ್ರ ದ್ರೋಹಿ ಕೆಲಸ ಮಾಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದು ವಿಧಾನಸೌಧಕ್ಕೆ ಕಾಂಗ್ರೆಸ್​​​ನವರು ಕಪ್ಪು ಚುಕ್ಕೆ ತಂದಿದ್ದಾರೆ. ನಾನು ನಲವತ್ತು ವರ್ಷದಿಂದ ವಿಧಾನಸೌಧಕ್ಕೆ ಬರುತ್ತಿದ್ದೇನೆ. ಎಂದೂ ರಾಷ್ಟ್ರ ಧ್ವಜ ಹಿಡಿದು ಸದನದಲ್ಲಿ ಅವಮಾನ ಮಾಡಿರಲಿಲ್ಲ.

ವಿಧಾನಸೌಧಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ

ಹಿಜಾಬ್ ಅಜೆಂಡಾ ತಂದು ಹಿಂದೂ, ಮುಸ್ಲಿಂ ಎಂಬ ಭೇದ ಭಾವಕ್ಕೆ ಕಾರಣರಾಗಿದ್ದಾರೆ. ವೀರಶೈವ ಲಿಂಗಾಯತರನ್ನೂ ಒಡೆದರು, ಬಳಿಕ ಸೋತರು. ಡಿಕೆ ಶಿವಕುಮಾರ್ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದರು. ಅವರನ್ನು ರಾಷ್ಟ್ರ ದ್ರೋಹದ ಮೇಲೆ ಬಂಧಿಸಬೇಕು ಎಂದು ಆಗ್ರಹಿಸಿದರು.

ನಾನು ಮಾತನಾಡಿದ್ದಕ್ಕೆ ನೀವೇ ಸಾಕ್ಷಿ:ನಿಮ್ಮನ್ನೇ ಸಾಕ್ಷಿಯಾಗಿ ಮಾಡುತ್ತೇನೆ. ಕೆಂಪು ಕೋಟೆಯಲ್ಲಿ ಭಾಗ ಧ್ವಜ ಹಾರಬಹುದು ಎಂದು ಆವತ್ತು ಹೇಳಿದ್ದೆ. 100, 200, 500 ವರ್ಷಗಳ ನಂತರ ಧ್ವಜ ಹಾರಿಸುತ್ತೇವೆ ಅಂಥಾ ಅಷ್ಟೇ ಹೇಳಿದ್ದು ಎಂದು ಸಮಜಾಯಿಷಿ ನೀಡಿದರು.

ತಾಯಿ ಮೊಲೆ ಹಾಲು ಕುಡಿದಿದ್ದರೆ, ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ, ಹತ್ತು ಲಕ್ಷ ಹಣ ನೀಡೋದಾಗಿ ಘೋಷಣೆ ನೀಡಿದ್ದರು. ಮುರುಳಿ ಮನೋಹರ್ ಜೋಶಿ, ಮೋದಿ ಎಲ್ಲರೂ ಆಗ ಲಾಲ್ ಚೌಕ್ ಹೋಗಿ ರಾಷ್ಟ್ರ ಧ್ವಜ ಹಾರಿಸಿದ್ದೆವು. ನಾವು ತಾಯಿ ಮೊಲೆ ಹಾಲು ಕುಡಿದವರು ಅಂತ ಎದೆ ತಟ್ಟಿ ಹೇಳಿದ್ದೆವು. ಹುಬ್ಬಳ್ಳಿಯಲ್ಲಿ ತಿರಂಗ ಹಾರಿಸಿದೆವು. ನಾವು ತಿರಂಗ ಹಾರಿಸಿದವರು. ನಾವು ರಾಷ್ಟ್ರ ಭಕ್ತರೋ, ಕಾಂಗ್ರೆಸ್ ನವರು ರಾಷ್ಟ್ರ ಭಕ್ತರೋ.?. ರಾಜ್ಯದ ಜನ ತೀರ್ಮಾನ ಮಾಡಲಿ ಎಂದರು.

ಅಂದು ಹಿಂದುತ್ವದ ವಿಚಾರ, ಹಿಂದೂಗಳು ಭಗವಾಧ್ವಜ ವಿಚಾರ ಹೇಳಿದೆ. ಕೆಂಪುಕೋಟೆ ಮೇಲೆ ಇನ್ನು ಮುನ್ನೂರು, ಐನೂರು ವರ್ಷಗಳ ಬಳಿಕ ಭಗವಾಧ್ವಜ ಹಾರಬಹುದು ಅಂತ ಹೇಳಿದೆ. ಕಾಂಗ್ರೆಸ್​​​ನವರು ಇದನ್ನೇ ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಈ ಎಲ್ಲ ವಿಚಾರ ರಾಜ್ಯದ ಜನತೆ ನೋಡುತ್ತಾರೆ ಎಂದರು.

ನಾನು ಯಾವುದೇ ರಾಷ್ಟ್ರ ದ್ರೋಹ ಮಾಡಿ ಡಿಕೆಶಿ ತರ ಜೈಲಿಗೆ ಹೋಗಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಜೈಲಿಗೆ ಹೋಗಿದ್ದೆ. ಅವರು ಯಾವ ಕಾರಣಕ್ಕೆ ಹೋದರು. ಅವರ ತಂದೆ ಬಗ್ಗೆ ನನಗೆ ಗೌರವ ಇದೆ. ನೀನು, ನಿಮ್ಮಪ್ಪ ಅಂತ ಹೇಳಿದ್ದು ಆಕ್ರೋಶವಾಗಿ ಅಷ್ಟೇ. ಡಿಕೆಶಿ ವಿದ್ಯಾರ್ಥಿಗಳು, ಧರ್ಮದ ನಡುವೆ ಬೆಂಕಿ ಹಚ್ಚೋ ಕೆಲಸ ಮಾಡಿದ್ದಾರೆ. ಆವತ್ತು ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ರು ಅಂತಾ ಸುಳ್ಳು ಹೇಳಿದ್ರು. ಡಿಕೆಶಿ ವಿರುದ್ಧ ಕೇಸ್‌ ದಾಖಲಿಸುವಂತೆ ಸರ್ಕಾರ, ‌ಪೊಲೀಸ್ ಇಲಾಖೆಗೆ ಆಗ್ರಹಿಸುತ್ತೇನೆ ಎಂದು ಇದೇ ವೇಳೆ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ರಾಷ್ಟ್ರ ಧ್ವಜ ಹಿಡಿದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸದನದ ಬಾವಿಗಿಳಿದು ಕೈ ಶಾಸಕರ ಪ್ರತಿಭಟನೆ

ABOUT THE AUTHOR

...view details