ನನ್ನ ಕ್ಷೇತ್ರದ ಮಹಿಳೆಯರಿಗೆ ಎಲ್ಲ ರೀತಿಯ ಸವಲತ್ತು ಒದಗಿಸಲು ಸಿದ್ಧ : ಸಚಿವ ಕೆ ಗೋಪಾಲಯ್ಯ - ಮಹಿಳೆಯರ ಸಬಲೀಕರಣ
ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಆಯೋಜಿಸಿದ್ದ 'ವಿಶ್ವ ಮಹಿಳಾ ದಿನಾಚರಣೆ' ಕಾರ್ಯಕ್ರಮವನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಉದ್ಘಾಟಿಸಿದರು. ಮಹಿಳೆಯರೂ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಪುರುಷರಿಗಿಂತ ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎಂದು ಮಹಿಳೆಯರ ಸಾಧನೆಗಳನ್ನು ಶ್ಲಾಘಿಸಿದ್ರು.
ವಿಶ್ವ ಮಹಿಳಾ ದಿನಾಚರಣೆ
ಬೆಂಗಳೂರು:ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾ ನಗರದಲ್ಲಿರುವ ಕೆಇಎಸ್ ಇಂಜಿನಿಯರ್ಸ್ ಭವನದಲ್ಲಿ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಆಯೋಜಿಸಿದ್ದ 'ವಿಶ್ವ ಮಹಿಳಾ ದಿನಾಚರಣೆ'ಕಾರ್ಯಕ್ರಮವನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಗೋಪಾಲಯ್ಯ, ಮಹಿಳೆಯರೂ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಇಂದಿರಾ ಗಾಂಧಿ ನಮ್ಮ ದೇಶವನ್ನು ಆಳಿದರು. ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಕಿರಣ್ ಬೇಡಿ, ಐಶ್ವರ್ಯ ರೈ, ಸುಧಾ ಮೂರ್ತಿ,ಇನ್ನೂ ಮುಂತಾದ ಮಹಿಳೆಯರೂ ಈ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಅದ ಕೊಡುಗೆ ನೀಡಿದ್ದಾರೆ ಎಂದರು.