ಕರ್ನಾಟಕ

karnataka

ETV Bharat / state

ಶಾಸಕ ಜಮೀರ್ ಅವರ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಮುಕ್ತಾಯ - Independence day

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ಅಮೃತಮಹೋತ್ಸವ ನಡಿಗೆ ಮುಕ್ತಾಯಗೊಂಡಿದೆ.

minister-jamir-khan-independence-amrita-mahotsava-padayathra
ಜಮೀರ್ ಕೈಗೊಂಡ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಸಂಪನ್ನ

By

Published : Aug 14, 2022, 8:22 AM IST

ಬೆಂಗಳೂರು: ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ 'ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ' ಮುಕ್ತಾಯಗೊಂಡಿದೆ. ನಿನ್ನೆ ಬೆಳಿಗ್ಗೆ 9ಕ್ಕೆ ಗೋರಿಪಾಳ್ಯದಲ್ಲಿ ಜಮೀರ್, ಡಾ.ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರ‍್ಯಾಲಿಗೆ ಚಾಲನೆ ನೀಡಿದ್ದರು.

ಬಳಿಕ ರ‍್ಯಾಲಿಯು ಪಾದರಾಯನಪುರ, ಆಜಾದ್ ನಗರ, ಕುರ್ತಹಳ್ಳಿ, ದೇವರಾಜ ಅರಸ್ ನಗರ, ಮೊಮಿನ್ ಪುರ, ವಾಲ್ಮೀಕಿ ನಗರ, ಚಾಮರಾಜಪೇಟೆ, ಶ್ರೀ ಕೃಷ್ಣರಾಜ ಮಾರುಕಟ್ಟೆ ಸೇರಿದಂತೆ ಹಲವೆಡೆ ಸಾಗಿ ಛಲವಾದಿಪಾಳ್ಯದಲ್ಲಿ ಶಾಸಕರು ಸಂಜೆ ಮಹಾತ್ಮ ಗಾಂಧಿಜಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸುವ ಮೂಲಕ ನಡಿಗೆ ಸಮಾಪ್ತಿಗೊಂಡಿತು.

ಈ‌ ವೇಳೆ ಮಾತನಾಡಿದ ಶಾಸಕರು, ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ಷೇತ್ರವಾರು ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ. ಈ ನಡಿಗೆಯಲ್ಲಿ ನನಗೆ ಸಾಥ್ ನೀಡಿದ ನನ್ನ ಕ್ಷೇತ್ರದ ಜನತೆಗೆ, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ತುಂಬು ಹೃದಯದ ಧನ್ಯವಾದಗಳು. ಅಂತೆಯೇ, ಆಗಸ್ಟ್ 15ರಂದು ನಮ್ಮ ಪಕ್ಷದ ವತಿಯಿಂದ ಮಧ್ಯಾಹ್ನ 2.30ಕ್ಕೆ ಫ್ರೀಡಂ ಪಾರ್ಕ್‌ನಿಂದ ನ್ಯಾಷನಲ್ ಕಾಲೇಜು ಮೈದಾನದ ವರೆಗೆ ಬೃಹತ್ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್ ಮತ್ತಿತರ ಮಹನೀಯರ ಪ್ರತಿಕೃತಿಗಳನ್ನು ಹೊತ್ತ ವಾಹನದೊಂದಿಗೆ ರ‍್ಯಾಲಿ ಸಾಗಿತು. ನಾನಾ ವೇಷಭೂಷಣಗಳಿಂದ ಮಿಂಚುತ್ತಿದ್ದ ಮಕ್ಕಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ವೀರಗಾಸೆ, ತಮಟೆ ಸೇರಿದಂತೆ ಹಲವು ಜನಪದ ಕಲಾತಂಡಗಳು ನಡಿಗೆಯ ಮೆರುಗು ಹೆಚ್ಚಿಸಿದ್ದವು.

ಇದನ್ನೂ ಓದಿ:ವಿಧಾನಸೌಧಕ್ಕೆ ತ್ರಿವರ್ಣ ಧ್ವಜ ಬಣ್ಣದ ಮೆರಗು... ದೀಪಾಲಂಕಾರದ ಸೊಬಗು

ABOUT THE AUTHOR

...view details