ಬೆಂಗಳೂರು:10 ದಿನಗಳ ಚೀನಾ ಮತ್ತು ಬ್ರಿಟನ್ ಪ್ರವಾಸಕ್ಕೆ ಮುಂದಾಗಿದ್ದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಡೆಗೆ ಟೀಕೆಗಳು ಎದುರಾಗುತ್ತಿದ್ದಂತೆ ಪ್ರವಾಸ ಮೊಟಕುಗೊಳಿಸಿದ್ದಾರೆ.
ವ್ಯಾಪಕ ಟೀಕೆ ಹಿನ್ನೆಲೆ: ವಿದೇಶ ಪ್ರವಾಸ ರದ್ದುಗೊಳಿಸಿದ ಸಚಿವ ಜಗದೀಶ್ ಶೆಟ್ಟರ್ - ಸಚಿವ ಜಗದೀಶ್ ಶೆಟ್ಟರ್ ಇತ್ತೀಚಿನ ಸುದ್ದಿ
ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ನಡೆಸುವ ಬದಲು ವಿದೇಶ ಪ್ರವಾಸಕ್ಕೆ ಜಗದೀಶ್ ಶೆಟ್ಟರ್ ಮುಂದಾಗಿದ್ದಾರೆ ಎನ್ನುವ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೊನೆ ಕ್ಷಣದಲ್ಲಿ ಸಚಿವರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ನವೆಂಬರ್ 5 ರಿಂದ 16 ರವರೆಗೆ ಜಗದೀಶ್ ಶೆಟ್ಟರ್ ವಿದೇಶ ಪ್ರವಾಸಕ್ಕೆ ತೆರಳಲು ಸಿದ್ದತೆ ಮಾಡಿಕೊಂಡಿದ್ದರು. 2ನೇ ಚೀನಾ ಇಂಟರ್ ನ್ಯಾಷನಲ್ ಇಂಪೋರ್ಟ್ ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲು ಚೀನಾದ ಶಾಂಘೈಗೆ ಪ್ರಯಾಣಿಸಲು ಅವರು ಮುಂದಾಗಿದ್ದರು. ಚೀನಾ ನಂತರ ನವೆಂಬರ್ 13 ರಂದು 19 ನೇ ತಾರೀಖಿಗೆ ಲಂಡನ್ ಗ್ಲೋಬಲ್ ಕನ್ವೆನ್ಶನ್ ಸಮಾರಂಭದಲ್ಲಿ ಭಾಗವಹಿಸಲು ಚೀನಾದಿಂದ ಲಂಡನ್ಗೆ ತೆರಳಬೇಕಿತ್ತು.
ಶೆಟ್ಟರ್ ಅನುಪಸ್ಥಿತಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳು ಮಾತ್ರ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದು ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಸಚಿವ ಶೆಟ್ಟರ್ ನೆರೆ ಸಂತ್ರಸ್ತರನ್ನು ಮರೆತು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎನ್ನುವ ಬಗ್ಗೆ ವೀಸಾ ದಾಖಲೆಗಳೊಂದಿಗೆ ಈಟಿವಿ ಭಾರತ ವರದಿ ಮಾಡಿತ್ತು.