ಕರ್ನಾಟಕ

karnataka

ETV Bharat / state

ರಾಜಭವನಕ್ಕೆ ಸಚಿವ ಜಗದೀಶ್ ಶೆಟ್ಟರ್.. ಹೋಗಿದ್ದ ಕಾರಣವೇ ಬೇರೆ...

ತಮ್ಮ ಇಲಾಖೆಯ ಒಂದು ವರ್ಷದ ಸಾಧನೆಯ ಪುಸ್ತಕವನ್ನು ನೀಡಿದರು. ಇದೇ ವೇಳೆ ರಾಜ್ಯದ ನೂತನ ಕೈಗಾರಿಕಾ ನೀತಿಯಲ್ಲಿನ ಅಂಶಗಳ ಬಗ್ಗೆ ಚರ್ಚೆ ನಡೆಸಿದರು..

Industry Department Year Performance Book
ರಾಜಭವನಕ್ಕೆ ಸಚಿವ ಜಗದೀಶ್ ಶೆಟ್ಟರ್ ಭೇಟಿ

By

Published : Sep 11, 2020, 7:52 PM IST

ಬೆಂಗಳೂರು :ಕೈಗಾರಿಕಾ ಇಲಾಖೆಯ ಒಂದು ವರ್ಷದ ಸಾಧನಾ ಪುಸ್ತಕವನ್ನು ಸಚಿವ ಜಗದೀಶ್ ಶೆಟ್ಟರ್ ಇಂದು ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಸಲ್ಲಿಕೆ ಮಾಡಿದರು. ಇಲಾಖೆ ಪ್ರಗತಿ ವೇಗದ ಕುರಿತು ಮಾಹಿತಿ ಹಂಚಿಕೊಂಡರು.

ರಾಜಭವನಕ್ಕೆ ಭೇಟಿ ನೀಡಿದ ಸಚಿವ ಜಗದೀಶ್ ಶೆಟ್ಟರ್ ರಾಜ್ಯಪಾಲ ವಜುಭಾಯ್ ವಾಲಾರನ್ನು ಭೇಟಿಯಾದರು. ತಮ್ಮ ಇಲಾಖೆಯ ಒಂದು ವರ್ಷದ ಸಾಧನೆಯ ಪುಸ್ತಕವನ್ನು ನೀಡಿದರು. ಇದೇ ವೇಳೆ ರಾಜ್ಯದ ನೂತನ ಕೈಗಾರಿಕಾ ನೀತಿಯಲ್ಲಿನ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.

ಎಲ್ಲಾ ಸಚಿವರು ತಮ್ಮ ತಮ್ಮ ಇಲಾಖೆಯ ವರ್ಷದ ಸಾಧನೆಯ ಕಿರು ಹೊತ್ತಿಗೆ ಹೊರ ತರುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀಡಿದ ಸೂಚನೆಯಂತೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಾಧನಾ ಹೊತ್ತಿಗೆ ಹೊರ ತಂದಿದ್ದಾರೆ.

ABOUT THE AUTHOR

...view details