ಆನೇಕಲ್:44 ವರ್ಷಗಳಿಂದ ಕೃಷಿ ಭೂಮಿಯ ಶೇ 2 ರಷ್ಟು ಮಾತ್ರ ಕೈಗಾರಿಕೆಗಳಿಗೆ ನೀಡಲಾಗಿದೆ. ಹೀಗಾದರೆ ಅಭಿವೃದ್ಧಿ ಹೇಗೆ.? ಅದಕ್ಕಾಗಿಯೇ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ ಎಂದು ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
1966ರ ಭೂ ಸುಧಾರಣಾ ಕಾಯಿದೆಯಿಂದ ಕೈಗಾರಿಕೆಗಳು ಉಳಿದಲ್ಲಿಯೇ ಉಳಿದು ಭೂ ಹಸ್ತಾಂತರ ತುಕ್ಕು ಹಿಡಿದಿತ್ತು. ಅಂದಿನಿಂದ 2020ರ ವರೆಗೆ ಇದ್ದ ಕೃಷಿ ಭೂಮಿಯ ಶೇ 2ರಷ್ಟು ಭೂಮಿಯನ್ನು ಮಾತ್ರ ಕೈಗಾರಿಕಾ ಪ್ರದೇಶಗಳಿಗೆ ಕಠಿಣ ಕಾನೂನು ಕ್ರಮಗಳಂತೆ ಬಳಸಿಕೊಳ್ಳುವಂತಾಗಿದೆ. ಇದರಿಂದ ಯಾವುದೇ ಪ್ರದೇಶದ ಅಭಿವೃದ್ಧಿ ಹೇಗೆ ಸಾಧ್ಯ. ಅದಕ್ಕಾಗಿಯೇ ಸುಗ್ರೀವಾಜ್ಞೆ ಮೂಲಕ ಕೃಷಿ ಭೂಮಿ ಸುಲಭವಾಗಿ ಕೈಗಾರಿಕೆಗಳಿಗೆ ಸಿಗುವಂತೆ ಕಾನೂನು ತಿದ್ದುಪಡಿ ತರಲಾಗಿದೆ ಎಂದು ಭೂ ಕಾಯ್ದೆ ತಿದ್ದುಪಡಿಯನ್ನು ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡರು.