ಕರ್ನಾಟಕ

karnataka

By

Published : Aug 30, 2019, 11:42 PM IST

ETV Bharat / state

ಯಾರಿಗೆ ಯಾವ ಜಿಲ್ಲಾ‌ ಉಸ್ತುವಾರಿ‌ ಸಚಿವ ಸ್ಥಾನ... ಸಂಭಾವ್ಯ ಪಟ್ಟಿ ಇಂತಿದೆ ನೋಡಿ!

ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂತಿಮಗೊಳಿಸಿದ್ದಾರೆ. ಹೈಕಮಾಂಡ್ ಜೊತೆ‌ ಚರ್ಚಿಸಿ ಉಸ್ತುವಾರಿಗಳ ನೇಮಕ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಯಾರಿಗೆ ಯಾವ ಜಿಲ್ಲಾ‌ಉಸ್ತುವಾರಿ‌ ಸಚಿವ ಸ್ಥಾನ ಗೊತ್ತಾ

ಬೆಂಗಳೂರು:ನೂತನ ಸಚಿವರಿಗೆ ಈಗಾಗಲೇ ಖಾತೆ ಹಂಚಿಕೆಯಾಗಿದ್ದು, ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂತಿಮಗೊಳಿಸಿದ್ದು, ಹೈಕಮಾಂಡ್ ಜೊತೆ‌ ಚರ್ಚಿಸಿ ಫೈನಲ್​ ಪಟ್ಟಿ ಪ್ರಕಟಿಸಲಿದ್ದಾರೆ.

ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆಗೆ ಸಮಯ‌ ತೆಗೆದುಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೂ ಕಾಲಾವಕಾಶ ತೆಗೆದುಕೊಂಡು ಕಡೆಗೂ ಪಟ್ಟಿ ಸಿದ್ದ ಪಡಿಸಿದ್ದಾರೆ. ಪೂರ್ಣ ಪ್ರಮಾಣದ ಸಂಪುಟ ರಚನೆಯಾಗದೇ ಇರುವ ಕಾರಣ ಬಹುತೇಕ ಸಚಿವರಿಗೆ ಎರಡು ಜಿಲ್ಲೆಗಳ‌ ಉಸ್ತುವಾರಿ ವಹಿಸಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಅಂತಿಮಗೊಂಡಿದ್ದು ಯಾವಾಗ ಬೇಕಿದ್ದರೂ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿ:

  • ಆರ್.ಅಶೊಕ್: ರಾಮನಗರ
  • ವಿ.ಸೋಮಣ್ಣ: ಮೈಸೂರು,ಚಾಮರಾಜನಗರ
  • ಡಾ.ಅಶ್ವತ್ಥನಾರಾಯಣ್: ಬೆಂಗಳೂರು,ಚಿಕ್ಕಬಳ್ಳಾಪುರ
  • ಸುರೇಶ್ ಕುಮಾರ್: ಕೊಡಗು
  • ಸಿ.ಟಿ ರವಿ: ಚಿಕ್ಕಮಗಳೂರು, ಹಾಸನ
  • ಲಕ್ಷ್ಮಣ ಸವದಿ: ಬೆಳಗಾವಿ
  • ಗೋವಿಂದ ಕಾರಜೋಳ:ಬಾಗಲಕೋಟೆ,ವಿಜಯಪುರ
  • ಜಗದೀಶ್ ಶೆಟ್ಟರ್: ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ
  • ಕೋಟಾ ಶ್ರೀನಿವಾಸ ಪೂಜಾರಿ: ದಕ್ಷಿಣ ಕನ್ನಡ,ಉಡುಪಿ
  • ಬಿ.ಶ್ರೀರಾಮುಲು:ಬಳ್ಳಾರಿ, ಚಿತ್ರದುರ್ಗ
  • ಬಸವರಾಜ ಬೊಮ್ಮಾಯಿ: ಹಾವೇರಿ, ದಾವಣಗೆರೆ
  • ಕೆ.ಎಸ್.ಈಶ್ವರಪ್ಪ: ಶಿವಮೊಗ್ಗ, ಕೊಪ್ಪಳ
  • ಪ್ರಭು ಚೌವ್ಹಾಣ್: ಬೀದರ್
  • ನಾಗೇಶ್: ಕೋಲಾರ
  • ಜೆ.ಸಿ ಮಾಧುಸ್ವಾಮಿ: ತುಮಕೂರು, ಕಲಬುರಗಿ
  • ಸಿ.ಸಿ ಪಾಟೀಲ್: ಗದಗ,ರಾಯಚೂರು
  • ಶಶಿಕಲಾ ಜೊಲ್ಲೆ: ಯಾದಗಿರಿ

ABOUT THE AUTHOR

...view details