ಬೆಂಗಳೂರು: ಪ್ರಧಾನ ಮಂತ್ರಿ ಸ್ಕಿಲ್ ಇಂಡಿಯಾ ಯೋಜನೆಯಡಿ ಸ್ಕಿಲ್ ಆನ್ ವ್ಹೀಲ್ ಎನ್ನುವ ವಾಹನವನ್ನು ಸಚಿವ ಗೋಪಾಲಯ್ಯ ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ಜುಲೈ 15ರಂದು ಈ ಸ್ಕಿಲ್ ಇಂಡಿಯಾ ಎನ್ನುವ ಮಹತ್ತರವಾದ ಯೋಜನೆ ತಂದು ಭಾರತದ ಯುವ ಪ್ರತಿಭೆಗಳಿಗೆ ದುಡಿಯುವ ಅವಕಾಶ ಮತ್ತು ಟ್ರೈನಿಂಗ್ ನೀಡುವುದಕ್ಕಾಗಿ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಕಿಲ್ ಆನ್ ವ್ಹೀಲ್ ವಾಹನ ಲೋಕಾರ್ಪಣೆ ಕರ್ನಾಟಕದಲ್ಲಿ ಯಡ್ಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಮೂಲಕ ಎಲ್ಲರಿಗೂ ಕೆಲಸ ನೀಡಿ ಸ್ವಾವಲಂಬಿಯಾಗಿ ಬದುಕಲು ದಾರಿ ಮಾಡಿಕೊಟ್ಟಿದೆ ಎಂದು ಆಹಾರ ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಅಲ್ಲದೆ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಸ್ಕಿಲ್ ಇಂಡಿಯಾ ಯೋಜನೆಯಡಿ ವಿವಿಧ ಬಗೆಯ ಕಂಪನಿಗಳಲ್ಲಿ ಉದ್ಯೋಗ ಅವಕಾಶಗಳು ಒದಗಿಸಿ ಕೊಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.