ಕರ್ನಾಟಕ

karnataka

ETV Bharat / state

ಸಿಎಂ ಜೊತೆ ಮಾತನಾಡಿ ಧೈರ್ಯ ತುಂಬುತ್ತೇವೆ: ಸಚಿವ ಗೋಪಾಲಯ್ಯ - ಸಂಪುಟ ಸಭೆ

ಸಿಎಂ ಬದಲಾವಣೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಗೋಪಾಲಯ್ಯ, ಈ ವಿಚಾರದಲ್ಲಿ ಯಡಿಯೂರಪ್ಪಗೆ ಧೈರ್ಯ ತುಂಬುತ್ತೇವೆ ಎಂದಿದ್ದಾರೆ.

Gopaliah reaction
ಅಬಕಾರಿ ಸಚಿವ ಕೆ. ಗೋಪಾಲಯ್ಯ

By

Published : Jul 22, 2021, 1:46 PM IST

ಬೆಂಗಳೂರು : ಸಿಎಂ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಕೆ. ಗೋಪಾಲಯ್ಯ, ಇವತ್ತು ಸಚಿವ ಸಂಪುಟ ಸಭೆ ಇದೆ. ನಾವೆಲ್ಲ ಸಿಎಂ ಜೊತೆ ಮಾತನಾಡುತ್ತೇವೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವೆಲ್ಲ ಸಿಎಂ ಯಡಿಯೂರಪ್ಪ ಅವರ ಜೊತೆ ಇದ್ದೇವೆ. ಅವರ ಮನಸ್ಸಿಗೆ ನೋವಾಗದಂತೆ ಮಾತನಾಡುತ್ತೇವೆ ಎಂದರು.

ಅಬಕಾರಿ ಸಚಿವ ಕೆ. ಗೋಪಾಲಯ್ಯ

ಓದಿ : ಬಿಎಸ್​ವೈ ರಾಜೀನಾಮೆ ಸುಳಿವು : ಸಚಿವ ಭೈರತಿ ಬಸವರಾಜ್ ಹೇಳಿದ್ದೇನು?

ಹೈಕಮಾಂಡ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹೈಕಮಾಂಡ್ ಭೇಟಿ ಮಾಡುವ ಬಗ್ಗೆ ನಾವೆಲ್ಲ ಒಟ್ಟಿಗೆ ಕೂತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಯಡಿಯೂರಪ್ಪ ನಮ್ಮ ಧನಿ. ನಾವೆಲ್ಲ ವಲಸಿಗರಲ್ಲ, ಬಿಜೆಪಿಯವರು. ಹೈಕಮಾಂಡ್ ‌ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧ. ಸಿಎಂ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬುತ್ತೇವೆ ಎಂದು ತಿಳಿಸಿದರು.

ABOUT THE AUTHOR

...view details