ಬೆಂಗಳೂರು:ಎಲ್ಲರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ಸಚಿವ ಗೋಪಾಲಯ್ಯ ಮನವಿ ಮಾಡಿದರು. ಆದರೆ, ಸಚಿವ ಸಂಪುಟ ಸಭೆ ಎಲ್ಲರಿಗೂ ಉಚಿತ ಲಸಿಕೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಬಗ್ಗೆ ಒಲವು ತೋರಲಿಲ್ಲ.
ಖಾಸಗಿ ಆಸ್ಪತ್ರೆಗಳ ಲಸಿಕೆ ದರ ವಿಚಾರವಾಗಿ ಮಾತನಾಡಿದ ಅವರು, ಈ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ದುಬಾರಿ ಬೆಲೆಗೆ ನೀಡಲಾಗುತ್ತಿದೆ. ಬಡ ಜನರಿಗೆ ಇದರಿಂದ ಲಸಿಕೆ ಸಿಗುತ್ತಿಲ್ಲ ಅಂತ ನಮಗೆ ಬೈಯುವ ಸ್ಥಿತಿ ಬಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಲಸಿಕೆ ಪೂರ್ಣ ಪ್ರಮಾಣದಲ್ಲಿ ಸರ್ಕಾರ ಉಚಿತವಾಗಿ ನೀಡಲಿ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಮಾರಾಟ ಬೇಡ. ಇದಕ್ಕಾಗಿ ಸುಮಾರು 3 ಸಾವಿರ ಕೋಟಿ ರೂ. ಹೊರೆ ಬೀಳಬಹುದು. ಕೆಲ ಅಭಿವೃದ್ಧಿ ಕೆಲಸವನ್ನು ಸ್ಥಗಿತಗೊಳಿಸಿ ಉಚಿತ ಲಸಿಕೆಗೆ ಹಣ ವಿನಿಯೋಗಿಸಬೇಕು ಎಂದು ಸಚಿವ ಗೋಪಾಲಯ್ಯ ಮನವಿ ಮಾಡಿದರು.