ಕರ್ನಾಟಕ

karnataka

ಗೆದ್ದವರಂತೆ ಸೋತವರಿಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗುತ್ತೆ: ಗೋಪಾಲಯ್ಯ

ಕೊಟ್ಟ ಮಾತಿನಂತೆ ಬಿಜೆಪಿ ನಡೆದುಕೊಂಡಿದೆ. ಚುನಾವಣೆಯಲ್ಲಿ ಗೆದ್ದವರಿಗಷ್ಟೇ ಅಲ್ಲ, ಸೋತವರಿಗೂ ಬಿಜೆಪಿ ನಾಯಕರು ಕೊಟ್ಟ ಮಾತನ್ನು ನಡೆಸಿಕೊಡುವ ವಿಶ್ವಾಸವಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.

By

Published : Jun 4, 2020, 8:15 PM IST

Published : Jun 4, 2020, 8:15 PM IST

Minister K Gopalaiah
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಚಿವ ಗೋಪಾಲಯ್ಯ

ಬೆಂಗಳೂರು: ಗೆದ್ದಿರುವ ನಮ್ಮಗೆಲ್ಲ ಸಚಿವಸ್ಥಾನ ಕೊಟ್ಟು ಬಿಜೆಪಿ ಮಾತು ಉಳಿಸಿಕೊಂಡಿದೆ. ಸೋತವರಿಗೂ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುವ ವಿಶ್ವಾಸ ನಮ್ಮೆಲ್ಲರಿಗೂ ಇದೆ. ಏನೇ ಸಮಸ್ಯೆ ಬಂದರೂ ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಂತೆ ನಗುನಗುತ್ತಾ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮುಂದೆಯೂ ಕೂಡ ನಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಅನರ್ಹ ಮತ್ತು ನಕಲಿ ಪಡಿತರ ಚೀಟಿ ರದ್ದು ಮಾಡಲು ಸಿಎಂ ಸೂಚನೆ

ಸಿಎಂ, ಪಕ್ಷದ ರಾಜ್ಯಾದ್ಯಕ್ಷರು ಮತ್ತು ವರಿಷ್ಠ ಮಂಡಳಿ ಇದೆ. ಅವರು ಎಲ್ಲ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈಗಾಗಲೇ ಗೆದ್ದವರಿಗೆ ಅವಕಾಶ ಕಲ್ಪಿಸಲಾಗಿದೆ. ಸೋತಿರುವವರಿಗೂ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ. ನಾವೆಲ್ಲಾ ಒಟ್ಟಾಗಿ ಕುಳಿತು ಮಾತನಾಡಿಕೊಳ್ಳುತ್ತೇವೆ. ಸಮಸ್ಯೆ ಇದ್ದರೆ ಇದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ 1.27 ಕೋಟಿ ಅಂತ್ಯೋದಯ, ಬಿಪಿಎಲ್ ಕಾರ್ಡ್ ಇದೆ. ಕೊರೊನಾ ಕಾರಣದಿಂದ ಅನರ್ಹರ ಕಾರ್ಡ್ ರದ್ದು ಮಾಡುವ ಕೆಲಸ ನಿಲ್ಲಿಸಿದ್ದೇವೆ. ಯಾರು ವಾಹನ ಹೊಂದಿದ್ದಾರೋ, ಸರ್ಕಾರಿ ನೌಕರಿಯಲ್ಲಿದ್ದಾರೋ ಅಂತವರು ಹೊಂದಿರುವ ಬಿಪಿಎಲ್ ಪಡಿತರ ಕಾರ್ಡ್ ವಾಪಸ್ ಕೊಡಲು ಸಿಎಂ ಸೂಚನೆ ನೀಡಿದ್ದು, ನಿವೃತ್ತ ಅಧಿಕಾರಿಗಳಿಗೂ ಇದು ಅನ್ವಯವಾಗಲಿದೆ.

ಅವರೇ ಸ್ವಯಂ ಪ್ರೇರಣೆಯಿಂದ ವಾಪಸ್ ಕೊಡಬೇಕು. ಈಗಾಗಲೇ 63 ಸಾವಿರ ಕಾರ್ಡ್​ಗಳನ್ನು ವಾಪಸ್ ಪಡೆದು 96 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಆರ್.ಟಿ.ಒ ನಲ್ಲಿ ಪರಿಶೀಲಿಸಿದಾಗ ವಾಹನ ವಿವರ ಗೊತ್ತಾಗಲಿದೆ. ಈ ರೀತಿ ವಾಹನ ಹಿಂದಿದ್ದೂ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅವರನ್ನು ಪತ್ತೆ ಹಚ್ಚುವ ಕೆಲಸ ಮತ್ತೆ ಪ್ರಾರಂಭ ಮಾಡಲಿದ್ದೇವೆ, ಹಾಗಾಗಿ ಅನುಕೂಲವಾಗಿರುವ ಕುಟುಂಬ ಕಾರ್ಡ್ ವಾಪಸ್ ಕೊಡಬೇಕು ಎಂದು ಸೂಚನೆ ನೀಡಿದರು. ಭತ್ತ, ರಾಗಿ ಬೆಳೆದ ರೈತರಿಗೆ ಬಾಕಿ ಇರುವ ಹಣ ಪಾವತಿಗೆ ಸಿಎಂ ಸೂಚನೆ ನೀಡಿದ್ದು ಸಧ್ಯದಲ್ಲೇ ಬಾಕಿ ಪಾವತಿ ಮಾಡಲಾಗುತ್ತದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಚಿವ ಗೋಪಾಲಯ್ಯ

ಕಾರ್ಡ್ ಇಲ್ಲದೇ ಇರಿವ ಬಡವರಿಗೂ ಲಾಕ್​ಡೌನ್​ ಸಮಯದಲ್ಲಿ ಪಡಿತರ ಕೊಟ್ಟಿದ್ದೇವೆ, 4.5 ಲಕ್ಷ ಕುಟುಂಬಗಳು ಈಗಾಗಲೇ ಇದರ ಬಳಕೆ ಮಾಡಿವೆ, ಈ ತಿಂಗಳಿಗೂ ಕೇಂದ್ರ ಕಳಿಸಿಕೊಟ್ಟಿರುವ ಪಡಿತರ ಕೊಡಲಾಗುತ್ತದೆ. ಪಡಿತರದಾರರಿಗೆ ರಾಗಿ, ಬಿಳಿ ಜೋಳವನ್ನೂ ಕೊಡಲಾಗುತ್ತದೆ. ಅಕ್ಕಿ ಜೊತೆಗೆ 15 ಜಿಲ್ಲೆಯಲ್ಲಿ ರಾಗಿ, ಮೂರು ಜಿಲ್ಲೆಯಲ್ಲಿ ಜೋಳ ಹಾಗೂ ಉಳಿದ ಜಿಲ್ಲೆಯಲ್ಲಿ ಗೋದಿ ನೀಡಲಾಗುತ್ತದೆ ಎಂದರು.

ABOUT THE AUTHOR

...view details