ಬೆಂಗಳೂರು:ವಲಸಿಗ ಸಚಿವರು ಕಾಂಗ್ರೆಸ್ ಸೇರುವ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕಾಂಗ್ರೆಸ್ ಬಾಗಿಲನ್ನು ಯಾರು ತಟ್ಟಿದ್ದಾರೆ? ನಾವ್ಯಾರೂ ಎಲ್ಲಿಗೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಬಜೆಟ್ ಪೂರ್ವ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವೆಲ್ಲ ಬಿಜೆಪಿಯಲ್ಲಿ ಚೆನ್ನಾಗಿಯೇ ಇದ್ದೇವೆ. ಇಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಸಚಿವ ಸ್ಥಾನ ನೀಡಿ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಾವ್ಯಾಕೆ ಬಿಜೆಪಿ ಬಿಟ್ಟು ಹೋಗಬೇಕು? ಎಂದು ಹೇಳಿದರು.