ಕರ್ನಾಟಕ

karnataka

ETV Bharat / state

ಶಿಲ್ಪಕಲೆಯ ಸಾಧಕರಿಗೆ ಸನ್ಮಾನಿಸಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2019 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2019ರ ಬಹುಮಾನ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು.

award sculptors
ಶಿಲ್ಪಕಲೆಯ ಸಾಧಕರಿಗೆ ಸನ್ಮಾನ

By

Published : Mar 10, 2020, 5:32 AM IST

ಬೆಂಗಳೂರು:ಉತ್ತರ ಕನ್ನಡದ ಗಣೇಶ್ ಆಚಾರಿ, ಮೈಸೂರಿನ ಎಸ್.ಎನ್. ಸೋಮಾಚಾರ್ ಸೇರಿದಂತೆ ಹಲವರಿಗೆ 2019 ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಸಿ.ಟಿ.ರವಿ ಸನ್ಮಾನಿಸಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2019 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2019ರ ಬಹುಮಾನ ವಿತರಣಾ ಸಮಾರಂಭ ಏರ್ಪಡಿಸಿತ್ತು. ಅಭಿನಂದಿತರನ್ನು ಸನ್ಮಾನಿಸಿ ಮಾತನಾಡಿದ ಸಚಿವ ಸಿ.ಟಿ.ರವಿ, ಶಿಲೆಯಲ್ಲ ಇದು ಕಲೆಯ ಬಲೆ ಎಂಬ ಕವಿಯ ಮಾತಿನಂತೆ ಕಲೆಯ ಮೂಲಕ ಜಗತ್ತಿಗೆ ತಾಂತ್ರಿಕತೆ ಹಾಗೂ ಕಲೆಯ ಸಾಮರ್ಥ್ಯವನ್ನು ತೋರಿಸಿದ್ದೇವೆ. ಶಿಲ್ಪಕಲಾ ಅಕಾಡೆಮಿಯ ಮುಂದಿನ ಕಾರ್ಯಕ್ರಮಗಳಿಗೆ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಶಿಲ್ಪಕಲೆಯ ಸಾಧಕರಿಗೆ ಸನ್ಮಾನ

2019 ನೇ ಸಾಲಿನ ಪ್ರಶಸ್ತಿ ಪುರಸ್ಕೃತರು:

ಗಣೇಶ ಅಚಾರಿ (ಸಂಪ್ರದಾಯ ಶಿಲ್ಪ) - ಉತ್ತರ ಕನ್ನಡ ಜಿಲ್ಲೆ, ಎಸ್.ಎನ್. ಸೋಮಾಚಾರ್ ಸಂಪ್ರದಾಯ ಶಿಲ್ಪ-ಮೈಸೂರು ಜಿಲ್ಲೆ, ಚನ್ನವೀರಸ್ವಾಮಿ ಗ. ಹಿಡ್ಮಿಮಠ, ಸಂಪ್ರದಾಯ ಶಿಲ್ಲ -ಧಾರವಾಡ ಜಿಲ್ಲೆ, ಎಸ್. ಜಿ. ನಾಗರಾಜ್ ಕಾಷ್ಠಶಿಲ್ಪ - ಬೆಂಗಳೂರು, ವಿಜಯರಾವ್ ಸಮಕಾಲೀನ ಶಿಲ್ಪ- ಮೈಸೂರು ಇವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಮೊತ್ತ ತಲಾ 50 ಸಾವಿರ ರೂ. ಹಾಗೂ ನೆನಪಿನ ಕಾಣಿಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ 2019ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳನ್ನು ರಚಿಸಿದ ಮೈಸೂರಿನ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ, ದಿ. ಕೆ.ಎಸ್.ಆರ್.ಪಿ. ಗಂಗಾಧರ್ ಎಂ. ಬಡಿಗೇರ, ವಿಜಯಪುರ, ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ, ಸ್ಮಾರಕ ಬಹುಮಾನ, ಅಜ್ಜಿಹಳ್ಲಿ, ಇವರ ಶಿಲ್ಪಕಲಾಕೃತಿಗಳಲ್ಲಿ ತಲಾ ಒಂದೊಂದು ಶಿಲ್ಪಕಲಾಕೃತಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ABOUT THE AUTHOR

...view details