ಕರ್ನಾಟಕ

karnataka

ETV Bharat / state

ಹೆಚ್ 3 ಎನ್ 2 ಪ್ರಭೇದ ಪತ್ತೆ, ಕ್ರಮಗಳ ಕುರಿತು ಅಧಿಕಾರಿಗಳು, ತಜ್ಞರ ಸಭೆ : ಸಚಿವ ಡಾ ಕೆ ಸುಧಾಕರ್ - ಈಟಿವಿ ಭಾರತ್ ಕನ್ನಡ ಸುದ್ದಿ

ಮಹಿಳೆಯರ ಸ್ವಾಸ್ಥ್ಯ ಚೆನ್ನಾಗಿದ್ದರೆ ಕುಟುಂಬ, ಸಮುದಾಯ, ರಾಜ್ಯ ಮತ್ತು ದೇಶ ಸದೃಢ- ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅಭಿಮತ- ಹೆಚ್ 3 ಎನ್ 2 ಪ್ರಭೇದ ಪತ್ತೆ, ತಜ್ಞರ ಸಭೆ ಕುರಿತು ಮಾಹಿತಿ

ಸಚಿವ ಡಾ ಕೆ ಸುಧಾಕರ್
ಸಚಿವ ಡಾ ಕೆ ಸುಧಾಕರ್

By

Published : Mar 5, 2023, 7:29 PM IST

Updated : Mar 5, 2023, 9:51 PM IST

ಬೆಂಗಳೂರು : ಹೆಚ್ 3 ಎನ್ 2 ಪ್ರಭೇದ ಪತ್ತೆ, ಅನುಸರಿಸಬೇಕಾದ ಕ್ರಮಗಳ ಕುರಿತು ನಾಳೆ ಅಧಿಕಾರಿಗಳು ಮತ್ತು ತಜ್ಞರ ಸಭೆ ಕರೆಯಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್ ಅವರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಮಹಿಳೆಯರ ಆರೋಗ್ಯಕ್ಕಾಗಿ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಹೊಸ ವೈರಾಣು ಹೆಚ್ 3 ಎನ್ 2 ಪ್ರಭೇದ ಪತ್ತೆಯಾಗಿದ್ದು, ದೇಶದ ಕೆಲವು ರಾಜ್ಯಗಳಲ್ಲಿ ಕೆಮ್ಮು, ನೆಗಡಿ, ವಿಷಮಶೀತ ಜ್ವರ ಉಪಟಳದಿಂದ ಬಾಧಿತವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ಸಭೆ ಕರೆಯಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ವೇತನ ಹೆಚ್ಚಳಕ್ಕೆ ಸಿಗದ ಸ್ಪಂದನೆ : ಮಾ. 24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರಿಂದ ಕರೆ

ವೈರಾಣುವಿನಿಂದ ದೀರ್ಘಾವಧಿಯ ಕೆಮ್ಮು ಇರುತ್ತದೆ : ಪ್ರಾಥಮಿಕ ವರದಿಗಳ ಪ್ರಕಾರ, ಈ ವೈರಾಣುವಿನಿಂದ ದೀರ್ಘಾವಧಿಯ ಕೆಮ್ಮು ಇರುತ್ತದೆ. ರಾಜ್ಯದಲ್ಲಿ ಅಂತಹ ಪ್ರಕರಣಗಳು ಸದ್ಯಕ್ಕೆ ಕಂಡು ಬಂದಿಲ್ಲ. ಆದರೂ ನಾಳಿನ ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ದರ ನಿಗದಿ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕೊರೊನಾ ವೈರಸ್ ಬಳಿಕ ದೇಶದಲ್ಲಿ H3N2 ವೈರಸ್ ಭೀತಿ ಎದುರಾಗಿದೆ. ಹೀಗಾಗಿ, ICMR ದೇಶಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದೆ. ಎಲ್ಲಾ ರಾಜ್ಯಗಳಿಗೂ ವೈರಸ್ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಇನ್ನೂ, ಸಾರಿ ಮತ್ತು ಐಎಲ್‌ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ಬೇಗ ಹರಡುತ್ತದೆ. ಅಂತಹ ರೋಗಿಗಳು ಎಚ್ಚರದಿಂದಿರಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ದೀರ್ಘ ಕಾಲದ ಕೆಮ್ಮು ಈ ಸೋಂಕಿನ ಲಕ್ಷಣವಾಗಿದ್ದು, ಈ ಕುರಿತು ಚರ್ಚಿಸಲು ನಾಳೆ ಆರೋಗ್ಯ ಸಚಿವರು ಸಭೆ ನಡೆಸಲಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಈಗಾಗಲೇ ನಮ್ಮನ್ನು ಸಂಪರ್ಕಿಸಿ, H3N2 ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದು, ಆರೋಗ್ಯ ಇಲಾಖೆ ಆಯುಕ್ತರು ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿ ಈಗಾಗಲೇ ಈ ಸಂಬಂಧ ಚರ್ಚೆ ನಡೆಸಿದ್ದಾರೆ. ನಾಳೆ ಈ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸದ್ಯ H3N2 ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ನಿರಂತರ ಕಫ ಈ ವೈರಸ್​​ನ ರೋಗಲಕ್ಷಣವಾಗಿದೆ. ಈ ಸೋಂಕಿಗೆ ಯಾವ ಚಿಕಿತ್ಸೆ ನೀಡಬೇಕು, ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾಳಿನ‌ ಸಭೆಯಲ್ಲಿ ಚರ್ಚಿಸಲಾಗುವುದು. ಒಂದು ವಾರದಿಂದ ಕೊರೊನಾ ಪ್ರಕರಣವೂ ಹೆಚ್ಚಳ ಆಗುತ್ತಿದ್ದು, ಈ ಸಂಬಂಧವೂ ನಾಳಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಕಳೆದ 24 ತಾಸುಗಳಲ್ಲಿ 95 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 79 ಹೊಸ ಪ್ರಕರಣಗಳು ಬೆಂಗಳೂರು ನಗರದಲ್ಲಿ ಪತ್ತೆಯಾಗಿವೆ. ಜೊತೆಗೆ ಹೊಸ ವೈರಸ್ H3N2 ಭೀತಿ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.

ಇದನ್ನೂ ಓದಿ :ಮಹಿಳಾ ದಿನಾಚರಣೆ: ಯಲಹಂಕದಲ್ಲಿ ನಾರಿಯರಿಂದ ಬೃಹತ್ ವಾಕಥಾನ್

ಮಹಿಳೆಯರ ಆರೋಗ್ಯದ ಪ್ರಾಮುಖ್ಯತೆಗೆ ಸೈಕಲ್​ ಜಾಥಾ: ಸೈಕಲ್ ಜಾಥಾ ಕುರಿತು ಮಾತನಾಡಿದ ಸುಧಾಕರ್, ಮಹಿಳೆಯರ ಸ್ವಾಸ್ಥ್ಯ ಚೆನ್ನಾಗಿದ್ದರೆ, ಕುಟುಂಬ, ಸಮುದಾಯ, ರಾಜ್ಯ ಹಾಗೂ ದೇಶ ಸದೃಢವಾಗಿರುತ್ತದೆ. ಆರ್ಥಿಕ ಚೈತನ್ಯವೂ ಹೆಚ್ಚುತ್ತದೆ. ಮಹಿಳೆಯರ ಆರೋಗ್ಯದ ಪ್ರಾಮುಖ್ಯತೆ ಸಂದೇಶ ಸಾರಲು ಜಾಥಾ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸೌಧದವರೆಗೂ ನಡೆಯುತ್ತಿರುವ ಜಾಥಾದಲ್ಲಿ ವೃತ್ತಿಪರರು, ವಿದ್ಯಾರ್ಥಿನಿಯರು ಸೇರಿದಂತೆ 100ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. ಹೆಗ್ಡೆ ವುಮೆನ್ ಹೆಲ್ತಿ ಇಂಡಿಯಾ, ಹೆಲ್ತ್ ಇಂಡಿಯಾ ಥೀಮ್​ನ ಜಾಥಾದಲ್ಲಿ 300ಕ್ಕೂ ಹೆಚ್ಚಿನ ಸೈಕ್ಲಿಸ್ಟ್​​ಗಳು ಭಾಗಿಯಾಗಿದ್ದಾರೆ ಎಂದು ಹೇಳಿದರು.

ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್

ಇದನ್ನೂ ಓದಿ :ರಾಜ್ಯಕ್ಕೆ ಅಗೌರವ ತರುವ ಕೆಲಸ ಬಿಜೆಪಿ ಮಾಡಿದೆ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಮಹಿಳೆಯರು ಸ್ವಂತ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು:ಆರೋಗ್ಯ ಇಲಾಖೆ ಸೈಕಲ್ ಜಾಥಾದ ಮೂಲಕ ಅರಿವು ಮೂಡಿಸುತ್ತಿದೆ. 100 ಸೈಕಲ್ ಗಳ ಮೂಲಕ ಸೈಕೋಥಾನ್ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಸ್ವಂತ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾನ್ಸರ್, ಎನ್. ಸಿ. ಡಿ ಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಈ ಟೆಸ್ಟ್​ಗಳನ್ನು ಸರ್ಕಾರ ಉಚಿತವಾಗಿ ಮಾಡುತ್ತದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್ ಸಿಂಗ್ ಅವರು ತಿಳಿಸಿದರು.

ಇದನ್ನೂ ಓದಿ :ಮತ್ತೆ ಶಿವಾಜಿ ಪ್ರತಿಮೆ‌ ಲೋಕಾರ್ಪಣೆ ; ಇದು ನಿಜವಾಗಿಯೂ ಹಾಸ್ಯಾಸ್ಪದ ಎಂದ ಸಿಎಂ ಬೊಮ್ಮಾಯಿ

Last Updated : Mar 5, 2023, 9:51 PM IST

ABOUT THE AUTHOR

...view details