ಕರ್ನಾಟಕ

karnataka

ETV Bharat / state

ಗಿಡಮೂಲಿಕೆ, ಜೀವ ವೈವಿಧ್ಯಗಳನ್ನು ಉಳಿಸಿ ಬೆಳೆಸಬೇಕು: ಸಿ.ಪಿ. ಯೋಗೇಶ್ವರ್ - Minister C.P. Yogeshwar

ಜೀವ ವೈವಿಧ್ಯಗಳ ಸಂರಕ್ಷಣೆಯನ್ನು ಮಾಡಲು ಹಾಗೂ ಬೆಳೆಸಲು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ಅವರು ಜೀವ ವೈವಿಧ್ಯಗಳನ್ನು ಕಾನೂನು ವ್ಯಾಪ್ತಿಗೆ ತಂದಿದ್ದಾರೆ. ಪ್ರಕೃತಿ ಸಂಪತ್ತನ್ನು ಉಪಯೋಗಿಸುವ ಕಂಪನಿಗಳು ಅವುಗಳನ್ನು ಬೆಳೆಸುವುದಕ್ಕೂ ಗಮನಕೊಡಬೇಕು ಎಂದು ಸಚಿವ ಸಿ.ಪಿ. ಯೋಗೇಶ್ವರ ಹೇಳಿದರು.

minister cp yogiswar talk
ಸಿ.ಪಿ. ಯೋಗೇಶ್ವರ್

By

Published : Mar 6, 2021, 8:49 PM IST

ಬೆಂಗಳೂರು: ಆಯುರ್ವೇದ ಔಷಧಿಗಳ ದರ ಹೆಚ್ಚಾಗುತ್ತಿರುವ ಹಿನ್ನೆಲೆ, ಆಯುರ್ವೇದ ಕಂಪನಿಗಳು ಗಿಡಮೂಲಿಕೆಗಳು ಹಾಗೂ ಜೀವ ವೈವಿಧ್ಯಗಳನ್ನು ಉಳಿಸಬೇಕು ಹಾಗೂ ಬೆಳೆಸಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಆಯುರ್ವೇದ ಔಷಧಿಗಳನ್ನು ನೀಡಬೇಕು ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.

ಓದಿ: ಮಲ್ಲೇಶ್ವರ ಸರ್ಕಾರಿ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದ ಡಿಸಿಎಂ

ಕರ್ನಾಟಕ ಜೀವವೈವಿಧ್ಯ ಮಂಡಳಿ ಬೆಂಗಳೂರಿನ ಅರಣ್ಯಭವನದಲ್ಲಿ ಆಯೋಜಿಸಿದ್ದ ಬಳಕೆ ಮತ್ತು ಲಾಭ ಹಂಚಿಕೆಯಿಂದ ಜೈವಿಕ ಸಂಪನ್ಮೂಲಗಳ ಸಂರಕ್ಷಣೆಯ ವೃತ್ತ ಪೂರ್ಣಗೊಳಿಸುವಿಕೆ ಮತ್ತು ಮಾದರಿ ಬಿಎಂಸಿಗಳಿಗೆ ಎಬಿಎಸ್ ಅನುದಾನ ವಿತರಣಾ ಕಾರ್ಯಕ್ರಮ, ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು, ಜನಸಾಮಾನ್ಯರ ರೋಗ ರುಜಿನಗಳನ್ನು ವಾಸಿ ಮಾಡಲು ನಾಟಿ ವೈದ್ಯರು ಗಿಡಮೂಲಿಕೆಗಳನ್ನು ಬಳಸಿ ಔಷಧಿಗಳನ್ನು ತಯಾರಿಸಿ ಜನಸಾಮಾನ್ಯರಿಗೆ ನೀಡುತ್ತಾರೆ. ಹೀಗಾಗಿ ಜೀವವೈವಿದ್ಯಗಳನ್ನು ಉಳಿಸಬೇಕು ಬೆಳೆಸಬೇಕು ಎಂದು ಕರೆ ನೀಡಿದರು.

ಜೀವ ವೈವಿಧ್ಯ ವ್ಯಾಪ್ತಿ ವಿಸ್ತಾರ ಬಹಳ ದೊಡ್ಡದಾಗಿದ್ದು, ಕೇಂದ್ರ ಸರ್ಕಾರ ಸಹ ಹೆಚ್ಚಿನ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಜೀವ ವೈವಿಧ್ಯಗಳ ರಕ್ಷಣೆಗೆ ಹಾಗೂ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಈ ಜೀವ ವೈವಿಧ್ಯಗಳ ಸಂರಕ್ಷಣೆ ಮಾಡಲು ಹಾಗೂ ಬೆಳೆಸಲು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ಅವರು ಜೀವ ವೈವಿಧ್ಯಗಳನ್ನು ಕಾನೂನು ವ್ಯಾಪ್ತಿಗೆ ತಂದಿದ್ದಾರೆ. ಪ್ರಕೃತಿ ಸಂಪತ್ತನ್ನು ಉಪಯೋಗಿಸುವ ಕಂಪನಿಗಳು ಅವುಗಳನ್ನು ಬೆಳೆಸುವುದಕ್ಕೂ ಗಮನಕೊಡಬೇಕು. ಹೀಗಾಗಿ ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ ಮಾಡೋಣ, ಈ ನಿಟ್ಟಿನಲ್ಲಿ ಇನ್ನು ಹೆಚ್ಚು-ಹೆಚ್ಚು ಚರ್ಚೆಗಳು ಕಾರ್ಯಾಗಾರಗಳು ಆಗಬೇಕು ಎಂದು ಸಚಿವರು ಹೇಳಿದರು.

ಜೀವ ವೈವಿಧ್ಯಗಳನ್ನು ಬೆಳೆಸುವಲ್ಲಿ ಹಾಗೂ ಸಂರಕ್ಷಿಸುವಲ್ಲಿ ಗ್ರಾಮ ಮತ್ತು ತಾಲೂಕು ಪಂಚಾಯಿತಿಗಳ ಜವಾಬ್ದಾರಿ ಹೆಚ್ಚಲಿ ಎಂಬ ದೃಷ್ಟಿಯಿಂದ ಇಂದು ಸಾಂಕೇತಿಕವಾಗಿ ಎಂಟು ತಾಲ್ಲೂಕು ಪಂಚಾಯಿತಿಗಳಿಗೆ ಚೆಕ್ ವಿತರಿಸಲಾಯಿತು. ಪರಿಸರ ಹಾಗೂ ಜೀವ ವೈವಿಧ್ಯಮಯ ವಿಷಯಗಳು ಬಹಳ ಮಹತ್ವವಾಗಿದ್ದು, ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಪ್ರೋತ್ಸಾಹ ನೀಡಲಿದೆ ಎಂದು ಸಚಿವರು ಹೇಳಿದರು.

ಇದೇ ವೇಳೆ ಮಾತನಾಡಿದ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷೆ ತಾರಾ ಅನುರಾಧ, ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಶೇ 49ರಷ್ಟು ಅರಣ್ಯ ಪ್ರದೇಶವಿದ್ದು ಇದೀಗ ಶೇ 22ಕ್ಕೆ ಕುಸಿದಿದೆ. ದಟ್ಟ ಅರಣ್ಯಗಳು ಕಾಣೆಯಾಗಿವೆ, ದಟ್ಟ ಅರಣ್ಯಗಳನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಹೀಗಾಗಿ ಅರಣ್ಯ ಹೆಚ್ಚಾಗಬೇಕು ಎಂದರು.

ಅರಣ್ಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸೇರಿ ಅರಣ್ಯ ಬೆಳೆಸುವುದಕ್ಕೆ ಒತ್ತು ನೀಡಬೇಕು ಎಂದರು. ಅರಣ್ಯ ಅಭಿವೃದ್ಧಿ ಮಂಡಳಿಯಲ್ಲಿ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಭಾರ ಆಗಿದ್ದು ಶಾಶ್ವತವಾಗಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ, ಪ್ರಕೃತಿ ಸಂಪತ್ತನ್ನು ಬಳಸುವ ನಾವು ಅದನ್ನು ಮತ್ತೆ ನಿಸರ್ಗಕ್ಕೆ ವಾಪಸ್ ನೀಡಬೇಕು. ಹೀಗಾಗಿ ಜೀವ ವೈವಿಧ್ಯಗಳನ್ನು ಬೆಳೆಸಬೇಕು ಹಾಗೂ ಉಳಿಸಬೇಕು ಎಂದರು. ಜೀವ ವೈವಿಧ್ಯಗಳನ್ನು ಉಳಿಸಲು ಹಾಗೂ ಬೆಳೆಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಹಣಕಾಸನ್ನು ನೀಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

ಜೀವ ವೈವಿಧ್ಯಗಳನ್ನು ಹಾಗೂ ಗಿಡಮೂಲಿಕೆಗಳನ್ನು ಕಾಸ್ಮೆಟಿಕ್ಸ್ ಮತ್ತು ಆಯುರ್ವೇದ ಔಷಧಿಗಳಿಗೆ ಬಳಸಲಾಗುತ್ತಿದೆ. ನಾಟಿ ವೈದ್ಯರು ಸಹ ಈ ಅಪರೂಪದ ಗಿಡಮೂಲಿಕೆಗಳನ್ನು ಹೆಚ್ಚು-ಹೆಚ್ಚು ಬಳಸುತ್ತಿದ್ದಾರೆ. ಹೀಗಾಗಿ ಜೀವವೈವಿಧ್ಯ ಉತ್ಪನ್ನಗಳು ಒಂದು ದಿನ ಮುಗಿದು ಹೋಗಲಿವೆ. ಜೀವವೈವಿಧ್ಯವನ್ನು ಕಾಪಾಡಿಕೊಂಡು ಅವುಗಳನ್ನು ಉಳಿಸಬೇಕು ಬೆಳೆಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ವಾಮನಚಾರ್ಯ ಕರೆ ನೀಡಿದರು.

ABOUT THE AUTHOR

...view details