ಕರ್ನಾಟಕ

karnataka

ETV Bharat / state

ರವಿ ಬೆಳಗೆರೆ ನಿಧನಕ್ಕೆ ಡಿಸಿಎಂ ಸೇರಿ ಸಚಿವರಿಂದ ಸಂತಾಪ...! - ravi belgere death news

ಹಿರಿಯ ಪತ್ರಕರ್ತ, ಬರಹಗಾರ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಡಿಸಿಎಂ ಸೇರಿದಂತೆ ಕೆಲ ಸಚಿವರು ಸಂತಾಪ ಸೂಚಿಸಿದ್ದಾರೆ.

Minister condoled to ravi belgere death
ರವಿ ಬೆಳಗೆರೆ ನಿಧನಕ್ಕೆ ಡಿಸಿಎಂ ಸೇರಿ ಸಚಿವರಿಂದ ಸಂತಾಪ...!

By

Published : Nov 13, 2020, 11:51 AM IST

Updated : Nov 13, 2020, 11:57 AM IST

ಬೆಂಗಳೂರು: ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನಕ್ಕೆ ಸಚಿವರು ಸಂತಾಪ ಸೂಚಿಸಿದ್ದಾರೆ. ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಈ ಕುರಿತು ಡಿಸಿಎಂ ಡಾ. ಅಶ್ವತ್ಥನಾರಾಯಣ್ ಟ್ವೀಟ್ ನಾಡಿದ್ದು, ರವಿ ಬೆಳಗೆರೆ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ - ಹಿತೈಷಿ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದು, ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಅವರ ನಿಧನದಿಂದ ಕನ್ನಡ ಮಾಧ್ಯಮ ಲೋಕ ಬಡವಾಗಿದೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಬೆಳೆಗೆರೆ ಅವರು ತಮ್ಮ ನೇರೆ-ನಿಷ್ಠುರ ಬರವಣಿಗೆಯಿಂದ ಅಪಾರ ಓದುಗ ಬಳಗವನ್ನು ಹೊಂದಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ಇನ್ನೂ, ಅಕ್ಷರ ಮಾಂತ್ರಿಕ, ಖ್ಯಾತ ಲೇಖಕರು ಮತ್ತು ಪತ್ರಿಕೊದ್ಯಮದಲ್ಲಿ ವಿಶಿಷ್ಟವಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಮ್ಮನ್ನಗಲಿದ ಸುದ್ದಿ ತಿಳಿದು ದುಃಖವಾಯಿತು. ದೇವರು ಅವರ ಆತ್ಮಕ್ಕೆ ಸದ್ಗತಿ ದಯಪಾಲಿಸಲಿ. ಅವರ ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಓ ಶಾಂತಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.

ರವಿ ಬೆಳಗೆರೆ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೇಳಿಬಂದ ದೊಡ್ಡ ಹೆಸರು. ಅತ್ಯಂತ ಮೇಧಾವಿ ಬರಹಗಾರ. ಬರೆಯಲು ಕುಳಿತರೆ ಅವರದು ದೈತ್ಯ ಶಕ್ತಿ. ಬಹಳ ನಿರ್ಭಿಡೆ ವ್ಯಕ್ತಿತ್ವ. "ಹಾಯ್ ಬೆಂಗಳೂರು" ಎಂಬ ಹೆಸರಿನ ಪತ್ರಿಕೆಯ ಮೂಲಕ ಬಹಳ ಒಳ್ಳೆಯ ಹೆಸರು ಮತ್ತು ಸ್ವಲ್ಪ ನಕಾರಾತ್ಮಕ ಹೆಸರನ್ನೂ ಸಹ ಗಳಿಸಿದ್ದ ಓರ್ವ ಪತ್ರಕರ್ತ. ಒಂದು ಶಾಲೆಯನ್ನು ಹೀಗೂ ಕಟ್ಟಬಹುದು, ಹೀಗೂ ನಡೆಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಅವರ "ಪ್ರಾರ್ಥನಾ ಶಾಲೆ". ನನಗಿನ್ನೂ ಚೆನ್ನಾಗಿ ನೆನಪಿದೆ, ಹಾಯ್ ಬೆಂಗಳೂರು ಮೊದಲ ಸಂಚಿಕೆ ಪ್ರಕಟವಾಗುವ ಮುನ್ನ ರವಿ ನನ್ನ ಮನೆಗೆ ಬಂದು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ನಡೆಯುವ ಲಾಬಿಗಳ ಬಗ್ಗೆ ಸಂಪೂರ್ಣ ವಿಷಯ ತಿಳಿದುಕೊಂಡು ಹೋಗಿದ್ದು, ಅದ್ಭುತವಾದ ಒಂದು ಮುಖ ಲೇಖನ ಬರೆದಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಅವರ ಆರೋಗ್ಯ ಕುಸಿಯುತ್ತಾ ಬಂದಿತ್ತು. ರವಿ ಬೆಳಗೆರೆ ನಾವ್ಯಾರೂ ಮರೆಯಲಾಗದ ಪತ್ರಕರ್ತ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಲೇಖಕ, ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು.ತಮ್ಮ ವಿಶಿಷ್ಟ ಬರಹದ ಮೂಲಕ ಅಪಾರ ಓದುಗ‌ರನ್ನು ಹೊಂದಿದ್ದ ರವಿ ಬೆಳಗೆರೆ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ, ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಚಿವ ಬಿಸಿ ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಹ್ಲಾದ್ ಜೋಶಿ ಟ್ವೀಟ್​​

ಪ್ರಹ್ಲಾದ್ ಜೋಶಿ ಸಂತಾಪ‌:

ಹಾಯ್ ಬೆಂಗಳೂರು ಪತ್ರಿಕೆ ಹುಟ್ಟು ಹಾಕುವ ಮೂಲಕ ಕನ್ನಡ ಪತ್ರಿಕಾ ಲೋಕದಲ್ಲೇ ಸಂಚಲನ ಮೂಡಿಸಿದ್ದರು. ಅವರ ನಿಧನದಿಂದ ಇಡೀ ಪತ್ರಿಕಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಬೆಳಗೆರೆ, ಕೇವಲ ಓರ್ವ ಪತ್ರಕರ್ತರಾಗಿರಲಿಲ್ಲ. ಒಬ್ಬ ಉತ್ತಮ ಕಾದಂಬರಿಕಾರರಾಗಿದ್ದರು. ನನ್ನ ಬಿಡುವಿನ ವೇಳೆಯಲ್ಲಿ ಅವರ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅವರ ಬರಹಗಳಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.

Last Updated : Nov 13, 2020, 11:57 AM IST

ABOUT THE AUTHOR

...view details