ಬೆಂಗಳೂರು :ರಾಜ್ಯಪಾಲರಿಗೆ ಪತ್ರ ಬರೆದಿರುವ ಕೃಷಿ ಅಧಿಕಾರಿಗಳ ವಿಚಾರದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಶಾಸಕರ ನಿಯೋಗ ರಾಜಭವನಕ್ಕೆ ಭೇಟಿ ನೀಡಿತ್ತು. ಪತ್ರ ಸಂಬಂಧ ಕೆಲವೊಂದು ಮಾಹಿತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಚರ್ಚೆ ಮಾಡಿದ್ದು, ಪ್ರಕರಣದ ಹಿಂದೆ ರಾಜಕೀಯ ಕಾರಣ ಇದೆ ಎಂದು ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿದೆ.
ಮಂಡ್ಯ ಜಿಲ್ಲೆಯ ಶಾಸಕರಾದ ಪಿ ಎಂ ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿ ಗಣಿಗ, ಕೆ ಎಂ ಉದಯ್ ಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಹಾಗೂ ಮಾಜಿ ಶಾಸಕರಾದ ಹೊನ್ನಲಗೆರೆ ಶ್ರೀರಾಮ ಕೃಷ್ಣ, ಕೆ ಬಿ ಚಂದ್ರಶೇಖರ್ ಒಳಗೊಂಡ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರೂ ಕೆಲವೊಂದು ಸ್ಪಷ್ಟೀಕರಣ ನೀಡಿ ಮಾಹಿತಿ ನೀಡಿದೆ. ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎನ್ನುವುದನ್ನು ರಾಜ್ಯಪಾಲರಿಗೆ ತಿಳಿಸಿತು.
ಬಹುಶಃ ಅವರು ಮೈತ್ರಿ ಸರ್ಕಾರ ಬರುತ್ತದೆ ಅಂದುಕೊಂಡಿದ್ದರು. ಆದರೇ ಮಂಡ್ಯದಲ್ಲಿ ಕಾಂಗ್ರೆಸ್ 6 ಸ್ಥಾನ ಗೆದ್ದಿರುವುದಕ್ಕೆ ಸಹಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ನಡುಗಿಸಲಿಕ್ಕೆ ಅವರಿಂದ ಆಗುತ್ತಿಲ್ಲ, ಅದಕ್ಕೆ ಫಾರಿನ್ಗೆ ಹೋಗಿದ್ದಾರೆ ಅನಿಸುತ್ತಿದೆ. ಪತ್ರ ಬರೆದವನು ಯಾರು? ಮನೆ ಅಡ್ರೆಸ್ ಗೊತ್ತಾಗುತ್ತಿಲ್ಲ. ಪತ್ರದಲ್ಲಿ ಹೆಚ್ ಡಿ ಕುಮಾರಸ್ವಾಮಿ ನಮ್ಮ ನಾಯಕರು ಅಂತಾ ಉಲ್ಲೇಖಿಸಿದ್ದಾರೆ. ಜನತಾದಳದವರೇ ಇದನ್ನು ಕ್ರಿಯೇಟ್ ಮಾಡಿದ್ದಾರೆ - ಕೃಷಿ ಸಚಿವ ಚಲುವರಾಯಸ್ವಾಮಿ