ಬೆಂಗಳೂರು: ಡಿಕೆಶಿ ಬ್ಯುಸಿನೆಸ್ ಮಾಡಿಕೊಂಡು ಬಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಏನು ಮಾಡಿಕೊಂಡು ಬಂದಿದ್ದಾರೆ ಹೇಳಿಬಿಡಲಿ ಎಂದು ಸಚಿವ ಚೆಲುವರಾಯಸ್ವಾಮಿ ಸವಾಲು ಹಾಕಿದರು.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಕುಮಾರಸ್ವಾಮಿ ಎಲ್ಲಾ ಸಂದರ್ಭದಲ್ಲೂ ಎಲ್ಲರ ಮೇಲೂ ಮಾತನಾಡ್ತಾನೆ ಬಂದಿದ್ದಾರೆ. ಪ್ರಧಾನಿಯಿಂದ ರಾಜ್ಯದ ನಾಯಕರ ಬಗ್ಗೆಯೂ ಮಾತನಾಡ್ತಾ ಬಂದಿದ್ದಾರೆ. 25 ವರ್ಷದಿಂದಲೂ ಮಾತನಾಡ್ತಾ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿವೇಶನ ನಡೆಯುತ್ತಿದೆ. ದಾಖಲೆ ಬಿಡುಗಡೆ ಮಾಡಲಿ. ನಾವೇನಾದ್ರು ಅವರಿಗೆ ಬಿಡುಗಡೆ ಮಾಡಬೇಡಿ ಎಂದು ಹೇಳಿದ್ದೀವಾ..?. ದಾಖಲೆ ಇದ್ರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ವೈಎಸ್ಟಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸರ್ಕಾರ ರಚನೆ ಮಾಡುವಾಗ ಅವರು ಅವರ ಅಣ್ಣ ತಮ್ಮಂದಿರ ಜೊತೆ ಚರ್ಚೆ ಮಾಡಿಲ್ವಾ?. ಯತೀಂದ್ರ ಸಿದ್ದರಾಮಯ್ಯ ಮಾಜಿ ಶಾಸಕ ನನ್ನ ಜೊತೆ ಮಾತನಾಡಿದ್ರೆ ತಪ್ಪೇನು?. ಅವರು ನಮ್ಮ ಪಕ್ಷದ ನಾಯಕ. ಸುಮ್ಮನೆ ಅನಾವಶ್ಯಕವಾಗಿ ಯೋಚನೆ ಮಾಡದೆ ಮಾತನಾಡೋದು ಸರಿಯಲ್ಲ. ಅವರು ಮಾಜಿ ಮುಖ್ಯಮಂತ್ರಿ ಯೋಚನೆ ಮಾಡಿ ಮಾತನಾಡಬೇಕು ಎಂದರು.
ಡಿಕೆಶಿ ವಿರುದ್ಧ ಲೂಲೂ ಮಾಲ್ ನಿರ್ಮಾಣ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಡಿಕೆ ಶಿವಕುಮಾರ್ ಬ್ಯುಸಿನೆಸ್ ಮಾಡಿಕೊಂಡು ಬಂದವರು. ಇವರ ಕುಟುಂಬದ ಆಸ್ತಿ ಬಗ್ಗೆಯೂ ಚರ್ಚೆ ಮಾಡಲಿ. ಅವರೇ ಹೇಳಿಬಿಡಲಿ, ನಮ್ಮ ಕುಟುಂಬದಲ್ಲಿ ನಾಲ್ಕು ಜನರದ್ದು ಎಷ್ಟು ಇದೆ ಎಂದು ಹೇಳಿಬಿಡಲಿ. ನಾವು ಯಾರು ಹೇಳೋದಕ್ಕೆ ಹೋಗೊದಿಲ್ಲ. ಅವರೇ ಹೇಳಿಬಿಡಲಿ ಎಷ್ಟು ಆಸ್ತಿ ಇದೆ ಎಂದು ಸವಾಲು ಹಾಕಿದರು. ಬಿಡಿ ಇವೆಲ್ಲ. ಮಳೆ ಆಗ್ತಿಲ್ಲ. ಜನರ ಸಮಸ್ಯೆ ಬಗ್ಗೆ ಕೇಳೋದಕ್ಕೆ ಹೇಳಿ. ಕೇಂದ್ರದಿಂದ ಅಕ್ಕಿ ಬರ್ತಿಲ್ಲ. ಅದನ್ನು ಕೇಳೋದಕ್ಕೆ ಹೇಳಿ. ವಿರೋಧ ಪಕ್ಷದಲ್ಲಿದ್ದಾರೆ ಎಂದು ಹೆಚ್ಡಿಕೆಗೆ ತಿರುಗೇಟು ನೀಡಿದರು.
ದಾಖಲೆ ಇದ್ದರೆ ಕೊಡಲಿ, ತನಿಖೆ ಮಾಡಿಸುತ್ತೇವೆ: ಸಚಿವ ಕೆ ಜೆ ಜಾರ್ಜ್:ಇನ್ನೊಂದೆಡೆ ಇಂಧನ ಇಲಾಖೆ ವರ್ಗಾವಣೆಯಲ್ಲಿನ ಅಕ್ರಮದ ಬಗ್ಗೆ ಏನೇ ದಾಖಲೆ ಇದ್ರೂ ಕೊಡಲಿ, ತನಿಖೆ ಮಾಡಿಸ್ತೇವೆ ಎಂದು ಇಂಧನ ಸಚಿವ ಕೆ. ಜೆ ಜಾರ್ಜ್ ಹೇಳಿದರು.
ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಇಂಧನ ಇಲಾಖೆಯಲ್ಲಿನ ಲಂಚದ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಪೆನ್ಡ್ರೈವ್ ಇದ್ರೆ ಸ್ಪೀಕರ್ಗೆ ಕೊಡಲಿ. ಅದೇನು ದಾಖಲೆ ಇದೆಯೋ ಮೊದಲು ಕೊಡಲಿ. ಇಂಧನ ಇಲಾಖೆಯಲ್ಲಿ ಯಾವುದಾಗಿದೆಯಂತೆ. ಸುಮ್ಮನೆ ಹಿಟ್ ಅಂಡ್ ರನ್ ಮಾಡಬಾರದು. ದಾಖಲೆಯೇ ಕೊಡದಿದ್ರೆ ಹೇಗೆ? ಎಂದು ಪ್ರಶ್ನಿಸಿದರು.
ಇಂಧನ ಇಲಾಖೆ 10 ಕೋಟಿಗೆ ಬಿಕರಿಯಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಪೆನ್ಡ್ರೈವ್ ಪ್ರದರ್ಶಿಸುತ್ತಾ ಗಂಭೀರ ಆರೋಪ ಮಾಡಿದ್ದರು. ಇಂಧನ ಇಲಾಖೆ ವರ್ಗಾವಣೆ ಇಲಾಖೆಯಾಗಿದೆ. ಈ ಬಗ್ಗೆ ದಾಖಲೆಗಳು ಇವೆ ಎಂದು ತಿಳಿಸಿದ್ದರು. ನಿನ್ನೆ ಇಂಧನ ಇಲಾಖೆಯಲ್ಲಿ ಎರಡು ಟ್ರಾನ್ಸ್ ಫರ್ ಆಗಿದೆ. ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ವರ್ಗಾವಣೆ ದಂಧೆ ಬಗ್ಗೆ ಪೆನ್ ಡ್ರೈವ್ ಬಾಂಬ್: ಸಮಯ ಬಂದಾಗ ಬಹಿರಂಗಪಡಿಸುವೆ ಎಂದ ಹೆಚ್.ಡಿ.ಕುಮಾರಸ್ವಾಮಿ