ಬೆಂಗಳೂರು:ಸಣ್ಣ ಕೈಗಾರಿಕೆ ಮತ್ತು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಕರಕುಶಲ ನಿಗಮ ಕಚೇರಿಗೆ ಭೇಟಿ ಕೊಟ್ಟು ಅಧ್ಯಕ್ಷರ ಕಾರ್ಯಗಳನ್ನು ಮತ್ತು ಯೋಜನೆಗಳನ್ನು ನೋಡಿ ಅಭಿನಂದಿಸಿದರು.
ನಿಗಮದ ಕಾರ್ಯಗಳಿಗೆ ಸಚಿವ ಪ್ರಶಂಸೆ ಕಾಮಗಾರಿ ನಡೆಯುತ್ತಿರುವ ಕಚೇರಿಯ ಕಟ್ಟಡ ವೀಕ್ಷಿಸಿದರು. ಬಳಿಕ ಆದಷ್ಟು ಬೇಗ ಪೂರ್ಣಗೊಳಿಸಲು ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರೂಪ ಮೌದ್ಗಿಲ್ಗೆ ಸೂಚನೆ ನೀಡಿದರು.
ಕರಕುಶಲ ನಿಗಮದ ಕಾವೇರಿ ಎಂಪೋರಿಯಮ್ಗೆ ಭೇಟಿ ಕೊಟ್ಟು ಅಲ್ಲಿನ ಕರಕುಶಲ ವಸ್ತುಗಳನ್ನು ವೀಕ್ಷಿಸಿದರು. ಈ ವೇಳೆ ಮಾರ್ಚ್ ತಿಂಗಳೊಂದರಲ್ಲೇ ನಾಲ್ಕು ಕರಕುಶಲ ಮೇಳಗಳನ್ನು ಆಯೋಜಿಸಿರುವ ನಿಗಮದ ಕಾರ್ಯಗಳನ್ನ ಶ್ಲಾಘಿಸಿದರು.
ನಿಗಮದ ಕಾರ್ಯಗಳಿಗೆ ಸಚಿವ ಪ್ರಶಂಸೆ ನಿಗಮ ನಿರ್ವಹಿಸುತ್ತಿರುವ ಕಾರ್ಯಗಳನ್ನು ಮುಂದುವರಿಸಬೇಕು. ಅದಕ್ಕೆ ಅಗತ್ಯವಾದ ಸಹಕಾರ ನನ್ನ ಹಾಗೂ ನನ್ನ ಇಲಾಖೆಯಿಂದ ಸದಾ ಇರುತ್ತದೆ ಎಂದು ಸಚಿವರು ಹೇಳಿದರು.
ಸಚಿವರ ಭೇಟಿ ನಮ್ಮ ಹಾಗೂ ಸಿಬ್ಬಂದಿ ಕಾರ್ಯಗಳನ್ನ ಮತ್ತಷ್ಟು ಚುರುಕುಗೊಳ್ಳಲು ಉತ್ತೇಜನ ನೀಡಿದೆ ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾದ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.