ಕರ್ನಾಟಕ

karnataka

ETV Bharat / state

ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆಗಳು ಅಭಿವೃದ್ಧಿಯಾದ್ರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ : ಸಚಿವ ಸಿ.ಸಿ.ಪಾಟೀಲ್ - MSME industries

ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೈಗಾರಿಕೆಗಳು ಅಭಿವೃದ್ಧಿಯಾದರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ರು.

patil
ಸಿ.ಸಿ.ಪಾಟೀಲ್

By

Published : Jul 10, 2021, 9:04 AM IST

ಬೆಂಗಳೂರು : ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆಗಳು ಅಭಿವೃದ್ಧಿಯಾದರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಬೆಂಗಳೂರಿನಲ್ಲಿ ಮಾತ್ರ ಕೈಗಾರಿಕೆಗಳು ಅಭಿವೃದ್ಧಿಯಾದರೆ ಸಾಲದು. ಎಲ್ಲ ಜಿಲ್ಲೆಗಳಲ್ಲಿಯೂ ಸಹ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿದರು.

ಸಿ.ಸಿ.ಪಾಟೀಲ್ ಸಭೆ

ಕೈಗಾರಿಕೆಗಳ ಅಭಿವೃದ್ಧಿಗಾಗಿ ಸರ್ಕಾರ ನೀಡುವ ಹಣ ಸರಿಯಾಗಿ ಉಪಯೋಗವಾಗಬೇಕು. ವಿವಿಧ ಯೋಜನೆಯಡಿ ನೀಡಲಾದ ಪ್ರೋತ್ಸಾಹಧನ ಮತ್ತು ರಿಯಾಯಿತಿ ಸಮರ್ಪಕವಾಗಿ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಧಿಕಾರಿಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದ್ರು.

ಸಹಾಯಧನ ಪಡೆದ ನಂತರ ಕೈಗಾರಿಕೆಗಳು ಸಮರ್ಪಕವಾಗಿ ನಡೆಯುತ್ತಿವೆಯೇ ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೇವಲ ಸಹಾಯಧನ ಪಡೆಯುವ ಸಲುವಾಗಿ ಅಥವಾ ಬೇನಾಮಿಯಾಗಿ ಅರ್ಜಿ ಸಲ್ಲಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಂ.ಎಸ್.ಎಂ.ಇ ಕೈಗಾರಿಕಾ ಘಟಕಗಳಿಗೆ ಕಳೆದ ಸಾಲಿನಲ್ಲಿ ಕೈಗಾರಿಕಾ ನೀತಿಯಡಿ 114 ಕೋಟಿ ರೂ. ಸಹಾಯಧನ ಮತ್ತು ಕೃಷಿ ನೀತಿಯಡಿ 165 ಕೋಟಿ ರೂ. ಸಹಾಯಧನ ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಎಂಎಸ್‍ಇ ಸಿಡಿಪಿ ಕ್ಲಸ್ಟರ್ ಯೋಜನೆಗೆ 3.08 ಕೋಟಿ ರೂ., ಕೆ.ಎಸ್.ಸಿ.ಸಿ.ಎಫ್.ಎಲ್, ಕೆ.ಎಸ್.ಸಿ.ಡಿಸಿ ಕಿಲ್ಟ್ ಕೃಪುಡ್ಸ್ ತರಬೇತಿ ವಿಚಾರ ಸಂಕಿರಣ ವೆಚ್ಚಕ್ಕೆ 7.00 ಕೋಟಿ ರೂ., ಮುಖ್ಯಮಂತ್ರಿಯವರ ಸ್ವಯಂ ಉದ್ಯೋಗ ಯೋಜನೆ ಸಹಾಯಧನ, ಕೆ.ಎಸ್.ಎಫ್.ಸಿ ಶೇಕಡ 6ರ ಬಡ್ಡಿ ಸಹಾಯಧನ, ಕೈಗಾರಿಕಾ ನೀತಿಯಡಿ ಪ್ರೋತ್ಸಾಹ ಮತ್ತು ರಿಯಾಯಿತಿಗಾಗಿ 114.04 ಕೋಟಿ ರೂ., ಖಾದಿ ಮತ್ತು ಗ್ರಾಮೋದ್ಯೋಗ ಸಣ್ಣ ಕೈಗಾರಿಕೆಗಳ ಉತ್ಪನ್ನಗಳ ಮೇಲಿನ ರಿಯಾಯಿತಿ ಎಂ.ಡಿ.ಎ ಮತ್ತು ಪ್ರೋತ್ಸಾಹ ಮಜೂರಿ ಸಹಾಯಧನಕ್ಕಾಗಿ 105.84 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ತೆಂಗಿನ ನಾರಿನ ವಲಯಕ್ಕೆ ನೆರವು ಕಲ್ಪಿಸಲು ತೆಂಗು ಭಾಗ್ಯ ಯೋಜನೆಯಡಿ 10.00 ಕೋಟಿ ರೂ., ಕರಕುಶಲ ಕಲೆಗೆ ಬೆಂಬಲ ನೀಡಲು ರಿಯಾಯಿತಿ ಸಹಾಯಧನಕ್ಕಾಗಿ 1.00 ಕೋಟಿ ರೂ. ಕ್ಲಿಷ್ಟಕರ ಮೂಲಸೌಕರ್ಯ ಅಭಿವೃದ್ಧಿಗಾಗಿ 53.49 ಕೋಟಿ ರೂ., ಅವೇಕ್ ಮುಂದುವರೆದ ಕಾಮಗಾರಿಗಳಿಗಾಗಿ 2.00 ಕೋಟಿ ರೂ., ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ ಕಟ್ಟಡ ಕಾಮಗಾರಿಗಳ ವೆಚ್ಚಕ್ಕಾಗಿ 1.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು ಕೆಲವು ಜಿಲ್ಲೆಗಳಲ್ಲಿ ಯೋಜನಾ ಪ್ರಗತಿ ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ (ಎಂ.ಎಸ್.ಎಂಇ) ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details