ಬೆಂಗಳೂರು: ನಾವು ಯು.ಟಿ.ಖಾದರ್ ಹಕ್ಕನ್ನು ನಾವು ಕಿತ್ತುಕೊಂಡಿಲ್ಲ. ಆದರೆ ಪಾಕಿಸ್ತಾನದಿಂದ ಅವರ ನೆಂಟರನ್ನು ಕರೆತರಲು ಹೊರಟರೆ ಅದಕ್ಕೆ ಅವಕಾಶವಿಲ್ಲ. ಬಹುಸಂಖ್ಯಾತರು ಸುಮ್ಮನಿರುವುದು ದೌರ್ಬಲ್ಯವಲ್ಲ. ಪ್ರತೀಕಾರಕ್ಕೆ ನಿಂತರೆ ಏನಾಗಲಿದೆ? ಎಂಬುದನ್ನು ಒಮ್ಮೆ ಯೋಚಿಸಿ ಎಂದು ಯು.ಟಿ.ಖಾದರ್‌ಗೆ ಸಚಿವ ಸಿ.ಟಿ.ರವಿ ಎಚ್ಚರಿಕೆ ಕೊಟ್ಟರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಪೌರತ್ವದ ಬಗ್ಗೆ ಸ್ಪಷ್ಟಪಡಿಸಿದ್ದೆವು. ಮೂರು ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವ ನಿಟ್ಟಿನಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬಂದಿದೆ. ನಮಗೆ ಬಹುಮತವಿದೆ. ಸಿಎಬಿ ವಿರೋಧಿಸುವವರು ಬಹುಮತವನ್ನು ವಿರೋಧಿಸಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಸಮಾಜವನ್ನು ಹೊತ್ತಿ ಉರಿಸುವಲ್ಲಿ ಖಾದರ್ ನಿಸ್ಸೀಮರು. ಇಂತಹ ಮನಸ್ಥಿತಿಯೇ ಗೋದ್ರಾ ಕರಸೇವಕರ ಘಟನೆಗೆ ಕಾರಣವಾಗಿತ್ತು. ನಾವು ಕೂಡ ಪ್ರತಿಕ್ರಿಯೆಗೆ ಹೊರಟರೆ ಏನಾಗಲಿದೆ? ಯಾವ ಪರಿಣಾಮ ಎದುರಿಸಬೇಕು? ಎಂದು ಒಮ್ಮೆ ನೆನಪಿಸಿಕೊಳ್ಳಿ. ಬಹುಸಂಖ್ಯಾತರು ತಾಳ್ಮೆಯಿಂದ ಇದ್ದಾರೆ. ನಮ್ಮ ಸಹನೆ ದೌರ್ಬಲ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.