ಕರ್ನಾಟಕ

karnataka

ETV Bharat / state

ಕುರುಬರ ಅಭಿವೃದ್ಧಿ ನಿಗಮ ರಚಿಸಿ 400 ಕೋಟಿ ರೂ.‌ ಅನುದಾನ ನೀಡಿ: ಭೈರತಿ ಬಸವರಾಜ್‌ ಮನವಿ

ಕುರುಬ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ "ಕುರುಬರ ಅಭಿವೃದ್ಧಿ ನಿಗಮ” ರಚನೆ ಮಾಡಿ 400 ಕೋಟಿ ರೂ. ಅನುದಾನವನ್ನು ಕಾಯ್ದಿರಿಸುವಂತೆ ಕೋರಲಾಗಿದೆ.

Byrati Basavaraj
ಸಿಎಂಗೆ ಸಚಿವ ಭೈರತಿ ಬಸವರಾಜ್‌ ಮನವಿ

By

Published : Dec 2, 2020, 1:07 AM IST

Updated : Dec 2, 2020, 6:01 AM IST

ಬೆಂಗಳೂರು: ಕುರುಬರ ಅಭಿವೃದ್ಧಿ ನಿಗಮ ರಚನೆ ಮಾಡಿ 400 ಕೋಟಿ ರೂ. ಅನುದಾನ ಮೀಸಲಿರಿಸುವಂತೆ, ಸಚಿವ ಭೈರತಿ‌ ಬಸವರಾಜು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಅವರನ್ನು ಭೇಟಿಯಾದ ಸಚಿವ ಭೈರತಿ‌ ಬಸವರಾಜ್ ಮನವಿ ಪತ್ರ ಸಲ್ಲಿಸಿದ್ದಾರೆ. ಪತ್ರದಲ್ಲಿ ಕುರುಬರು ಭಾರತ ದೇಶದ ಮೂಲ ನಿವಾಸಿಯಾಗಿದ್ದು, ಕರ್ನಾಟಕದಲ್ಲಿ ಮೂರನೇ ಅತಿ ದೊಡ್ಡ ಜನಸಂಖ್ಯೆಯುಳ್ಳವರಾಗಿದ್ದಾರೆ. ಸುಮಾರು 60 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದಳಿದ್ದಾರೆ. ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ "ಕುರುಬರ ಅಭಿವೃದ್ಧಿ ನಿಗಮ” ರಚನೆ ಮಾಡಿ 400 ಕೋಟಿ ರೂ. ಅನುದಾನವನ್ನು ಕಾಯ್ದಿರಿಸುವಂತೆ ಕೋರಲಾಗಿದೆ.

ಮನವಿ ಪತ್ರ

ಇದಕ್ಕೂ ಮುನ್ನ ಕುರುಬರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರಸಕ್ತ ವರ್ಷದಲ್ಲಿ 400 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳ ನಿಯೋಗ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು.

Last Updated : Dec 2, 2020, 6:01 AM IST

ABOUT THE AUTHOR

...view details