ಕೆ. ಆರ್. ಪುರ(ಬೆಂಗಳೂರು):ಹೊರಮಾವು ಸಿಗ್ನಲ್ ಬಳಿನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸ್ವತಃ ರಸ್ತೆಗಿಳಿದು ಸಂಚಾರ ದಟ್ಟಣೆಯನ್ನು ನಿಭಾಯಿಸಿದ್ದಾರೆ.
ಬೆಂಗಳೂರು : ಟ್ರಾಫಿಕ್ ಕ್ಲಿಯರ್ ಮಾಡಿದ ಬೈರತಿ ಬಸವರಾಜ್... ಸಚಿವರ ನಡೆಗೆ ಜನರಿಂದ ಮೆಚ್ಚುಗೆ - Development work near Horamavu
ಹೊರಮಾವು ಸಮೀಪ ಅಭಿವೃದ್ಧಿ ಕಾಮಗಾರಿಯೊಂದಕ್ಕೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸ್ವತಃ ರಸ್ತೆಗಿಳಿದು ಸಂಚಾರ ದಟ್ಟಣೆಯನ್ನು ಸರಿಪಡಿಸಿದ್ದಾರೆ. ಸಚಿವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
![ಬೆಂಗಳೂರು : ಟ್ರಾಫಿಕ್ ಕ್ಲಿಯರ್ ಮಾಡಿದ ಬೈರತಿ ಬಸವರಾಜ್... ಸಚಿವರ ನಡೆಗೆ ಜನರಿಂದ ಮೆಚ್ಚುಗೆ Minister Birathi Basavaraj Cleared Traffic at Horamavu signal](https://etvbharatimages.akamaized.net/etvbharat/prod-images/768-512-9908504-730-9908504-1608191441755.jpg)
ಟ್ರಾಫಿಕ್ ಕ್ಲೀಯರ್ ಮಾಡಿದ ಸಚಿವ ಬೈರತಿ ಬಸವರಾಜ್
ಹೊರಮಾವು ಸಮೀಪ ಅಭಿವೃದ್ಧಿ ಕಾಮಗಾರಿಯೊಂದಕ್ಕೆ ಶಂಕುಸ್ಥಾಪನೆ ನೆರವೇರಿಸಲು ಸಚಿವರು ಆಗಮಿಸಿದ್ದರು. ಈ ವೇಳೆ 1 ಕಿ. ಮೀ. ಗೂ ಹೆಚ್ಚು ದೂರ ಸಂಚಾರ ದಟ್ಟಣೆ ಉಂಟಾಗಿರುವುದು ಸಚಿವರ ಗಮನಕ್ಕೆ ಬಂತು. ಕೂಡಲೇ ರಸ್ತೆಗಿಳಿದ ಸಚಿವರು, ಟ್ರಾಫಿಕ್ ಸಮಸ್ಯೆ ಬಗೆಹರಿಸಿ ವಾಹನಗಳ ಸರಾಗ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಚಿವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.