ಬೆಂಗಳೂರು/ ಕೆಆರ್ ಪುರ: ನಿನ್ನೆ ತಡರಾತ್ರಿ ರೈತರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆಂದು ಕೆಆರ್‌ಪುರಂ ಮಾರ್ಕೆಟ್ಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಗರಂ ಆಗಿದ್ದಾರೆ.
ಮಧ್ಯರಾತ್ರಿ ಡಿಕೆಶಿ ಮಾರ್ಕೆಟ್ಗೆ ಬರುವಂತದ್ದು ಏನಿತ್ತು?.. ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಚಿವ ಬೈರತಿ ಗರಂ - ಕೆಆರ್ ಪುರ ಮಾರುಕಟ್ಟೆ
ಮಧ್ಯರಾತ್ರಿ ಡಿಕೆಶಿ ಕೆಆರ್‌ಪುರಂಕ್ಕೆ ಬರುವಂತದ್ದು ಏನಿತ್ತು? ಸಾವಿರಾರು ರೈತರು ಸೇರುವ ಜಾಗ ಕೆಆರ್‌ಪುರಂ ಇಂತಹ ಜಾಗದಲ್ಲಿ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ತಿಳಿಸುತ್ತಾರೆ. ಇದನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಕೊರೊನಾ ಪರಿಸ್ಥಿತಿಯನ್ನು ರಾಜಕೀಯಕ್ಕೆ ಬಳಕೆ ಮಾಡಲಾಗುತ್ತಿದೆ. ಅಧಿಕಾರಿಗಳು ರೈತರ ತರಕಾರಿ ಗಾಡಿಗಳನ್ನು ಎಲ್ಲಿಯೂ ನಿಲ್ಲಿಸುತ್ತಿಲ್ಲ. ಮಧ್ಯರಾತ್ರಿ ಡಿಕೆಶಿ ಕೆಆರ್‌ಪುರಂಕ್ಕೆ ಬರುವಂತದ್ದು ಏನಿತ್ತು? ಸಾವಿರಾರು ರೈತರು ಸೇರುವ ಜಾಗ ಕೆಆರ್‌ಪುರಂ ಇಂತಹ ಜಾಗದಲ್ಲಿ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ತಿಳಿಸುತ್ತಾರೆ. ಇದನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಇದು ರೈತ ಪರ ಕಾಳಜಿ ಹೊಂದಿರುವ ಬಿಎಸ್ವೈ ಸರ್ಕಾರ, ರೈತರ ಅಭಿವೃದ್ಧಿಗಾಗಿ ರೈತರಿಂದ ನೇರವಾಗಿ ತರಕಾರಿ ಖರೀದಿ ಮಾಡುವ ಕಾರ್ಯ ಮಾಡುತ್ತಿದೆ. ಅಲ್ಲದೇ ಬಿಜೆಪಿ ಒಗ್ಗಟ್ಟಾಗಿ ಕೊರೊನಾ ಪರಿಸ್ಥಿತಿ ಎದುರಿಸುತ್ತಿದೆ. ಬೇರೆಯವರು ಇಲ್ಲಸಲ್ಲದ ಆರೋಪ ಮಾಡಿ ಉದ್ದೇಶ ಪೂರ್ವವಾಗಿ ರಾಜಕೀಯ ಪಿತೂರಿ ಮಾಡುತ್ತಿದ್ದಾರೆ ಎಂದು ಬೈರತಿ ಗುಡುಗಿದ್ದಾರೆ.