ಕರ್ನಾಟಕ

karnataka

ETV Bharat / state

ಹನ್ನೆರಡು ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಭೈರತಿ ಬಸವರಾಜ್ ಪೂಜೆ..! - ಕೆ.ಆರ್. ಪುರ ಕ್ಷೇತ್ರದ ಬಸವನಪುರ

50 ಫಲಾನುಭವಿಗಳಿಗೆ ಒಂಟಿ ಮನೆ ನಿರ್ಮಿಸಲು, ಸುಮಾರು ಆರು ಲಕ್ಷ ರೂಪಾಯಿ ಹಾಗೂ ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್​ನ್ನು ವಿತರಿಸಲಾಯಿತು.

Minister Bhairati Basavaraj statement
ಹನ್ನೆರಡು ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಭೈರತಿ ಬಸವರಾಜ್ ಪೂಜೆ

By

Published : Jun 25, 2020, 10:09 PM IST

ಬೆಂಗಳೂರು: ಕೆ.ಆರ್. ಪುರ ಕ್ಷೇತ್ರದ ಬಸವನಪುರ ವಾರ್ಡ್​​ನಲ್ಲಿ ಹನ್ನೆರಡು ಕೋಟಿ ವೆಚ್ಚದ ಕಾಮಗಾರಿಗಳಿಗೆ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪೂಜೆ ನೆರವೇರಿಸಿದರು. ನಂತರ ಹೊರ ಮಾವು ವಾರ್ಡ್​ನ ಕುಡಿಯುವ ನೀರಿನ ಘಟವನ್ನು ಉದ್ಘಾಟನೆ ಮಾಡಿದರು.

ಇದೇ ವೇಳೆ 50 ಫಲಾನುಭವಿಗಳಿಗೆ ಒಂಟಿ ಮನೆ ನಿರ್ಮಿಸಲು, ಸುಮಾರು ಆರು ಲಕ್ಷ ರೂಪಾಯಿ ಹಾಗೂ ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್​ನ್ನು ವಿತರಿಸಲಾಯಿತು.

ಹನ್ನೆರಡು ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಭೈರತಿ ಬಸವರಾಜ್ ಪೂಜೆ

ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲಾ ವಾರ್ಡ್​​ಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿಲಾಗಿದ್ದು, ಬಸವನಪುರ ವಾರ್ಡ್​ನಲ್ಲಿ ಹನ್ನೆರಡು ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ಚರಂಡಿ, ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ದಿನದಿಂದ ದಿನೇ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ತಡೆಗಟ್ಟಲು, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರು ಕೈಗೊಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಕೊರೊನಾ ನಿಯಂತ್ರಣ ಮಾಡಲಾಗುವುದು ಎಂದರು. ಹಾಗೂ ಲಾಕ್​​​ಡೌನ್ ವಿಚಾರದಲ್ಲಿ ಸಿಎಂ ಬಿಎಸ್​ವೈ ಅವರ ನಿರ್ಧಾರವೇ ನನ್ನ ನಿರ್ಧಾರ ಮತ್ತು ನಮ್ಮ ಸಚಿವ ಸಂಪುಟದ ನಿರ್ಧಾರ ಎಂದರು.

ABOUT THE AUTHOR

...view details