ಕರ್ನಾಟಕ

karnataka

ETV Bharat / state

ಮುನಿರತ್ನಗೆ ಟಿಕೆಟ್ ಕೊಟ್ಟೇ ಕೊಡ್ತಾರೆ.. ಕೃಷಿ ಸಚಿವ ಬಿ ಸಿ ಪಾಟೀಲ್ - ಬೆಂಗಳೂರು ಆರ್​. ಆರ್​ ನಗರ ಉಪಚುನಾವಣೆ

ಎಲ್ಲಾ ಒಳ್ಳೆ ರೀತಿ ಆಗುತ್ತದೆ ಎಂದು ಭಾವಿಸುತ್ತೇನೆ. ಯಡಿಯೂರಪ್ಪ ನಂಬಿದವರಿಗೆ ಕೈಕೊಟ್ಟಿಲ್ಲ..

Minister BC Patil Reaction about RR Nagar Candidate
ಕೃಷಿ ಸಚಿವ ಬಿ.ಸಿ.ಪಾಟೀಲ್

By

Published : Oct 2, 2020, 3:45 PM IST

ಬೆಂಗಳೂರು :ರಾಜರಾಜೇಶ್ವರಿ ನಗರ ಉಪಚುನಾವಣೆ ಅಭ್ಯರ್ಥಿ ವಿಚಾರ ಸುಖಾಂತ್ಯವಾಗಲಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಅಭ್ಯರ್ಥಿ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದುವರೆಗೆ ಎಲ್ಲವೂ ಸರಿದಾರಿಯಲ್ಲೇ ಇದೆ. ಸಿಎಂ ಬಿ ಎಸ್​ ಯಡಿಯೂರಪ್ಪನವರು ಈವರೆಗೆ ಎಲ್ಲರನ್ನು ಕೈ ಹಿಡಿದಿದ್ದಾರೆ. ಆರ್‌ಆರ್‌ನಗರದಲ್ಲೂ ಅದೇ ಆಗಲಿದೆ ಎಂದು ತಿಳಿಸಿದರು.

ಕೃಷಿ ಸಚಿವ ಬಿ ಸಿ ಪಾಟೀಲ್

ಆರ್‌ಆರ್‌ನಗರದಲ್ಲಿ ಮುನಿರತ್ನ ಅವರಿಗೆ ಟಿಕೆಟ್ ಕೊಡಬೇಕಾಗುತ್ತದೆ. ಮುನಿರತ್ನಗೆ ಟಿಕೆಟ್ ಕೊಟ್ಟೇ ಕೊಡ್ತಾರೆ. ಎಲ್ಲಾ ಒಳ್ಳೆ ರೀತಿ ಆಗುತ್ತದೆ ಎಂದು ಭಾವಿಸುತ್ತೇನೆ. ಯಡಿಯೂರಪ್ಪ ನಂಬಿದವರಿಗೆ ಕೈಕೊಟ್ಟಿಲ್ಲ.

ಕೋರ್ ಕಮಿಟಿ ಸಭೆ ನಿನ್ನೆ ಆಗಿದೆ. ಕೇಂದ್ರದ ನಾಯಕರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ABOUT THE AUTHOR

...view details