ಬೆಂಗಳೂರು:ರಾಜ್ಯದಲ್ಲಿ ಹೊಸದಾಗಿ ಶಾಲೆ ಆರಂಭಿಸುವವರಿಗೆ ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಮಾಹಿತಿ ಕೊಡುವಂತೆ ಕೇಳಿದ್ದೇವೆ. 9 ಬಾರಿ ದಾಖಲೆಗಳನ್ನು ತಂದುಕೊಡುವಂತೆ ಸೂಚಿಸಿದ್ದೇವೆ. ನಾವು ಯಾವುದೇ ಹೊಸ ರೂಲ್ಸ್ ಮಾಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಹೊಸ ಶಾಲೆ ಆರಂಭಿಸುವವರಿಗೆ ನಿಯಮದ ಪ್ರಕಾರವೇ ದಾಖಲೆ ಕೇಳಿದ್ದೇವೆ: ಸಚಿವ ಬಿ ಸಿ ನಾಗೇಶ್ - schools documentation submission
ಯಾವುದೇ ಹೊಸ ರೂಲ್ಸ್ ನಾವು ಮಾಡಿಲ್ಲ. ಎಲ್ಲಾ ಶಾಲೆಗಳು ಡಾಕ್ಯುಮೆಂಟ್ ಸಹಿತ ನಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಬಿ ಸಿ ನಾಗೇಶ್
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಈ ರೀತಿ ದಾಖಲೆಯನ್ನು ಕೊಡುವಂತೆ ಹೇಳಿದ್ದೇವೆ. ಎಲ್ಲಾ ಶಾಲೆಗಳು ಡಾಕ್ಯುಮೆಂಟ್ ಸಹಿತ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಮಕ್ಕಳ ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಸರ್ಕಾರ ಏನೇನು ಮಾಡಬೇಕೋ ಅದನ್ನು ಮಾಡುತ್ತಿದೆ ಎಂದರು.
ಇದನ್ನೂ ಓದಿ: ಶಿಕ್ಷಣ ಸಚಿವ ನಾಗೇಶ್ ವಜಾಗೆ ಆಗ್ರಹಿಸಿ ಪ್ರಧಾನಿಗೆ ಮತ್ತೊಮ್ಮೆ ಪತ್ರ.. ಲೋಕೇಶ್ ತಾಳಿಕಟ್ಟೆ