ಬೆಂಗಳೂರು:ನೋಟಿಸ್ ನೀಡಿದ ಬಳಿಕವೂ ಸಂಚಾರ ನಡೆಸುತ್ತಿರುವ ಓಲಾ, ಉಬರ್ ಆಟೋವನ್ನು ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದರು.
ವಿಧಾನ ಸೌಧದಿಂದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಓಲಾ, ಉಬರ್ ಬಗ್ಗೆ ಹಲವರಿಂದ ದೂರುಗಳು ಬಂದಿತ್ತು. ತಾಂತ್ರಿಕ ಕಾರಣದಿಂದ ನೋಟಿಸ್ ನೀಡಲಾಗಿತ್ತು. ಪರವಾನಿಗೆ ಷರತ್ತು ಉಲ್ಲಂಘನೆ ಮಾಡಬಾರದು. ಪರವಾನಿಗೆ ಷರತ್ತು ಉಲ್ಲಘಿಸಿದ ಕಾರಣ ನೋಟಿಸ್ ನೀಡಲಾಗಿದೆ. ಅವರಿಗೆ ಸ್ಪಷ್ಟನೆ ನೀಡಲು ಹೇಳಲಾಗಿದೆ ಎಂದರು.