ಕರ್ನಾಟಕ

karnataka

ETV Bharat / state

ಪಿಎ ರಾಜು ಬಂಧನ ಪ್ರಕರಣ.. ಅಸಮಾಧಾನ ಇಲ್ಲ, ನೋವಾಗಿದೆ ಎಂಬುದು ಸಮಂಜಸ : ಸಚಿವ ಶ್ರೀರಾಮುಲು - Bengaluru Minister B Shriramulu

ವಿಜಯೇಂದ್ರ ಅವರ ಜೊತೆ ಕೂಡ ಮಾತನಾಡುತ್ತೇನೆ. ಸಿಎಂ ಜೊತೆ ಕೂಡ ಮಾತಾಡುತ್ತೇನೆ. ತನಿಖೆ ಆಗಿ ನಂತರ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ವಿಜಯೇಂದ್ರ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿಲ್ಲ. ಮೊದಲೇ ನನ್ನ ಗಮನಕ್ಕೆ ತಂದಿರುತ್ತಿದ್ದರೆ ಕೂರಿಸಿ ವಿಚಾರಿಸಿ ಮಾತಾಡುತ್ತಿದ್ದೆ..

Minister B Shriramulu
ಸಚಿವ ಶ್ರೀರಾಮುಲು

By

Published : Jul 2, 2021, 12:07 PM IST

Updated : Jul 2, 2021, 12:22 PM IST

ಬೆಂಗಳೂರು :ರಾಜು ಅಧಿಕೃತವಾಗಿ ನನ್ನ ಬಳಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಪ್ಪಿತಸ್ಥರನ್ನು ಕಾಪಾಡುವ ವ್ಯಕ್ತಿ ನಾನಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ತಮ್ಮ ಪಿಎ ರಾಜು ಬಂಧನದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ‌ನೀಡಿದ ಅವರು, ನಾನು ಸುದ್ದಿಯನ್ನು ಮಾಧ್ಯಮದಲ್ಲಿ ಗಮನಿಸಿದೆ. ಯಾರೂ ಕೂಡ ಯಾರದ್ದೇ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು. ರಾಜು ನನಗೆ ಗೊತ್ತಿರುವ ಹುಡುಗ. ತನಿಖೆ ನಡೆಯುವ ಸಮಯದಲ್ಲಿ ನಾನು ಮಾತಾಡುವುದು ಸರಿಯಲ್ಲ ಅಂದುಕೊಂಡಿದ್ದೇನೆ ಎಂದರು.

ಇದನ್ನು ಓದಿ: ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್‌

ವಿಜಯೇಂದ್ರ ಅವರ ಜೊತೆ ಕೂಡ ಮಾತನಾಡುತ್ತೇನೆ. ಸಿಎಂ ಜೊತೆ ಕೂಡ ಮಾತಾಡುತ್ತೇನೆ. ತನಿಖೆ ಆಗಿ ನಂತರ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ವಿಜಯೇಂದ್ರ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿಲ್ಲ. ಮೊದಲೇ ನನ್ನ ಗಮನಕ್ಕೆ ತಂದಿರುತ್ತಿದ್ದರೆ ಕೂರಿಸಿ ವಿಚಾರಿಸಿ ಮಾತಾಡುತ್ತಿದ್ದೆ ಎಂದರು.

ನನಗೆ ತಿಳಿಸದೇ ಅರೆಸ್ಟ್ ಮಾಡಿದರು ಎಂಬ ವಿಚಾರಕ್ಕೆ ನನಗೆ ಅಸಮಾಧಾನ ಇಲ್ಲ. ಆದರೆ, ನೋವಾಗಿದೆ ಎಂಬ ಮಾತು ಸಮಂಜಸ ಇದೆ ಎಂದು ಸೂಚ್ಯವಾಗಿ ತಿಳಿಸಿದರು.

Last Updated : Jul 2, 2021, 12:22 PM IST

ABOUT THE AUTHOR

...view details